Sigandur incident,3 people,sigandur today,Sharavathi backwaters near Sigandur, Chethan Jain,Sandeep,Raju.
Three youths go missing
ಸಾಗರ: ದಿನಾಂಕ: 13 ನವೆಂಬರ್ ನಲ್ಲಿ ಸಾಗರ ತಾಲ್ಲೂಕಿನ ಸಿಗಂದೂರು ಸಮೀಪದ ಕಳಸವಲ್ಲಿ ನಲ್ಲಿ ತೆಪ್ಪ ಮುಳುಗಿ 5ವರಲ್ಲಿ 3 ಜನ ನೀರು ಪಾಲಗಿದ್ದವರ ಮೃತದೇಹ ಇಂದು ಬೆಳಿಗ್ಗೆ ಈಶ್ವರ್ ಮಲ್ಪೆ ತಂಡಿದಿಂದ ನೀರಿನಿಂದ ಮೃತದೇಹವನ್ನು ತೆಗೆಯಲಾಯಿತು. ಚೇತನ್ ಜೈನ್ ,ರಾಜು, ಸಂದೀಪ್ ಭಟ್ ಮೃತ ದುರ್ದೈವಿಗಳಾಗಿದ್ದಾರೆ.
ಸ್ಥಳಕ್ಕೆ ಕಾರ್ಗಲ್ ಪಿಎಸ್ಐ ಹೊಳೆಬಸಪ್ಪ ಹೋಳಿ ಹಾಗೂ ಸಿಬ್ಬಂದಿ ವರ್ಗ ಮಹಜರು ಪ್ರಕ್ರಿಯೆಯನ್ನು ನಡೆಸಿ ಹಿನ್ನೀರಿನ ದಡದಲ್ಲೇ ಮೂರು ಮೃತದೇಹಗಳ ಮರಣೋತ್ತರ ಪರೀಕ್ಷೆ ಪ್ರಕ್ರಿಯೆ ನಡೆಸಲಾಯಿತು ನಂತರದಲ್ಲಿ ಕುಟುಂಬಕ್ಕೆ ಮೃತದೇಹಗಳನ್ನು ಹಸ್ತಾಂತರಿಸಲಾಯಿತು.
ಈಶ್ವರ್ ಮಲ್ಪೆ ತಂಡದ ಕಾರ್ಯಾಚರಣೆ: ಘಟನೆ ನಡೆದ ರಾತ್ರಿ ಈಶ್ವರ್ ಮಲ್ಪೆ ಯವರ ತಂಡಕ್ಕೆ ಮಾಹಿತಿ ನೀಡಿದ್ದಾರೆ. ಬೆಳಿಗ್ಗೆ ಸುಮಾರು 6 ಗಂಟೆಗೆ ಘಟಾನ ಸ್ಥಳಕ್ಕೆ ಈಶ್ವರ ಮಲ್ಪೆ ತಂಡ ಬಂದು 1 ಗಂಟೆಗಳ ಕಾಲ ಶೋಧ ನಡೆಸಿ 40 ಕಿಂತ ಹೆಚ್ಚು ಆಳದಲ್ಲಿ ಇದ್ದ ಮೂರು ಮೃತದೇಹಗಳನ್ನ ಹೊರತೆಗೆಯಲು ಯಶಸ್ವಿಯಾದರು.
ಎಲ್ಲಿದೆ ಈ ಘಟನಾ ಸ್ಥಳ : ಸಿಗಂದೂರು ಲಾಂಚ್ ದಾಟಿ ಮೂರು ನಾಲ್ಕು ಕಿಲೋಮೀಟರ್ ದೂರದಲ್ಲಿ ಕಳಸ ವಳ್ಳಿ ಊರಿನ ಸರ್ಕಾರಿ ಶಾಲೆಯಿಂದ ಅಂದಾಜು 1km ದೂರದಲ್ಲಿ ಈ ದುರ್ಘಟನೆ ನಡೆದ ಸ್ಥಳವಾಗಿದೆ.
ಯಾರು ಈ ಮೃತ ಯುವಕರು : ಚೇತನ್ ಜೈನ್ ಎಂಬಾತ ಸಿಗಂದೂರು ಮೂಲದವನು ಈತ ಸಿಗಂದೂರು ಕ್ಷೇತ್ರದಲ್ಲಿ ತನ್ನದೇ ಅಂಗಡಿ ನಡೆಸುತ್ತಿದ್ದ ಹಾಗೂ ಜೀಪ್ ಸಹ ಹೊಂದಿದ್ದ ಇಂದು ಹೊಸ ಅಂಗಡಿಯ ಪೂಜೆ ಕೂಡ ಇಟ್ಟೊಂಕೊಂಡಿದ್ದ ಎಂದು ಆತನ ಸ್ನೇಹಿತರು ಮಾಹಿತಿ ನೀಡಿದರು. 5 ಗಂಟೆಗೆ ಸರಿಯಾಗಿ ಬರುತ್ತೇನೆ ಎಂದು ತನ್ನ ಸ್ನೇಹಿತನಿಗೆ ಕರೆ ಮಾಡಿ ಮಾಹಿತಿ ತಿಳಿಸಿದ್ದ ಆದರೆ ವಿಧಿಯ ಆಟಕ್ಕೆ ಬಲಿಯಾಗಿದ್ದ.
ಸಂದೀಪ್ ಭಟ್ ಈತ ಅಲ್ಲೇ ಹತ್ತಿರದ ಹುಲಿದೆವರ ಬನದವನು ಈತ ಸಿಗಂದೂರಿನಲ್ಲಿ ಚಿಕ್ಕ ಹೋಟೆಲ್ ಕೂಡ ನಡೆಸುತ್ತಿದ್ದ.
ರಾಜು ಎಂಬಾತ ಈತ ಸಾಗರ ತಾಲೂಕಿನ ಗಿನಿವಾರದವನು ಈತ ಹೊಳೆ ಬಾಗಿಲು ಗೆಟ್ ನಲ್ಲಿ ಕೆಲಸ ನಡೆಸುತ್ತಿದ್ದ.
ಈ ದುರ್ಘಟನೆ ಮಲೆನಾಡ ಭಾಗದಲ್ಲಿ ಸ್ಮಶಾನ ಮೌನ ಆವರಿಸಿದೆ.
Table of Contents
Toggle