Bike Accident : ಬಸ್ಸಿಗೆ ಬೈಕ್‌ ಡಿಕ್ಕಿ – ಸವಾರ ಸ್ಥಳದಲ್ಲೇ ಸಾವು, ಹೊತ್ತಿ ಉರಿದ ಬೈಕ್

Accident,Hosanagara,Sigandhuru,KGFGC Hosanagara,Kundapura.

 Bike Accident 

ಹಕುಂದಾಪುರ : ಜೂನ್ 16 – ತಾಲೂಕಿನ ಹೆಮ್ಮಾಡಿ – ಕೊಲ್ಲೂರು ಮಾರ್ಗದ ಕೆಂಚನೂರು ಮಲ್ಲಾರಿ ರಸ್ತೆಯ ತಿರುವಿನಲ್ಲಿ ನಡೆದ ಭೀಕರ ಅಪಘಾತದಲ್ಲಿ ಬೈಕ್‌ ಬಸ್ಸಿಗೆ ಡಿಕ್ಕಿಯಾಗಿ ಸವಾರ ಶರತ್‌ (25) ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಡಿಕ್ಕಿಯ ತೀವ್ರತೆಗೆ ಬೈಕ್‌ಗೆ ಬೆಂಕಿ ತಗುಲಿ ಸಂಪೂರ್ಣವಾಗಿ ಸುಟ್ಟು ಹೋಗಿದೆ.

ಮೃತ ಶರತ್‌ ಸಿಗಂದೂರು ಸಮೀಪದ ಸುಳ್ಳಳ್ಳಿ ಗ್ರಾಮದವರಾಗಿದ್ದು, ಸಿಗಂದೂರಿನಿಂದ ಕುಂದಾಪುರದ ಸಂಬಂಧಿಕರ ಮನೆಗೆ ತೆರಳುತ್ತಿದ್ದರು ಎನ್ನಲಾಗಿದೆ . ತಿರುವಿನಲ್ಲಿ ನಿಯಂತ್ರಣ ತಪ್ಪಿದ ಬೈಕ್‌ ಹೆಮ್ಮಾಡಿ ದಿಕ್ಕಿನಿಂದ ಬರುತ್ತಿದ್ದ ಶ್ರೀ ದುರ್ಗಾಂಬಾ  ಬಸ್ಸಿಗೆ ಢಿಕ್ಕಿ ಹೊಡೆದ ಪರಿಣಾಮ  ಶರತ್ ಸ್ಥಳದಲ್ಲೇ  ಸಾವನಪ್ಪಿದ  ದುರ್ಘಟನೆ ನಡೆದಿದೆ.

ಶರತ್ ಹೊಸನಗರದ ಕೊಡಚಾದ್ರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಡಿಗ್ರಿ ಶಿಕ್ಷಣ ಪಡೆದಿದ್ದರು. ಅವರ ನಿಧನದಿಂದ ಸ್ನೇಹಿತರು ಮತ್ತು ಕುಟುಂಬಸ್ಥರಲ್ಲಿ ಆಘಾತ ಮತ್ತು ದುಃಖದ ಛಾಯೆ ಮೂಡಿದೆ.

Accident,Hosanagara,Sigandhuru,KGFGC Hosanagara,Kundapura.

ಇದನ್ನೂ ಓದಿ: Shivamogga Murder Case : ಆಧುನಿಕ ಪ್ರೀತಿಯ ಕೊಲೆ ಕಹಾನಿ

Hosanagara News

Leave a Comment