Old Women : ಪಾರ್ಶವಾಯು ಪೀಡಿತ ತಾಯಿಗೆ ನಾಲ್ಕು ತಿಂಗಳಿಂದ ಸಿಗುತ್ತಿಲ್ಲ ಪಡಿತರ ಅಕ್ಕಿ

    Hosanagara,OLD WOMEN,

                                              Paralyzed mother hasn’t received ration rice for four months

ಹೊಸನಗರ :  ಪಟ್ಟಣದ  ಎಂ ಗುಡ್ಡೆಕೊಪ್ಪ ಗ್ರಾಮ ಪಂಚಾಯಿತಿಯ  ಗಂಗನಕೊಪ್ಪ ಗ್ರಾಮದ ವಾಸಿಯಾಗಿರುವ    ಸುಮಾರು 75 ವರ್ಷದ  ಅಕ್ಕಯ್ಯಮ್ಮ ಎಂಬ  ಈ ತಾಯಿಗೆ  ನಾಲ್ಕು ತಿಂಗಳಿಂದ ಪಡಿತರ  ಅಕ್ಕಿ ಸಿಗುತ್ತಿಲ್ಲ 

 ಬಡತನದಲ್ಲಿ ಜೀವನ ಸಾಗಿಸುತ್ತಿರುವ  ಈ ಕುಟುಂಬಕ್ಕೆ ಏಳು ತಿಂಗಳ ಹಿಂದೆ  ಈ ತಾಯಿ ಪಾರ್ಶುವಾಯು ಕಾಯಿಲೆಗೆ ತುತ್ತಾಗಿ ಕೈ ಕಾಲು  ಸ್ವಾಧೀನತೆ ಕಳೆದುಕೊಂಡು ಓಡಾಡಲು ಆಗದ ಪರಿಸ್ಥಿತಿಯಲ್ಲಿ ಜೀವನ ಸಾಗಿಸುತ್ತಿದ್ದಾರೆ.

Old Women

ಈ ಹಿಂದೆ ಮಾವಿನಕೊಪ್ಪದ ಕೊಡಚಾದ್ರಿ ನ್ಯಾಯಬೆಲೆ ಅಂಗಡಿಯಲ್ಲಿ  ಮೊಬೈಲ್ ನಲ್ಲಿ    ಓ. ಟಿ. ಪಿ  ಪಡೆದು ಅಕ್ಕಿ ನೀಡಲಾಗುತ್ತಿತ್ತು  ಆದರೆ ಈಗ  ಅದು ಕೂಡ ನಿಲ್ಲಿಸಲಾಗಿದೆ  ಬೆರಳಚ್ಚು ಇಲ್ಲದೆ  ಪಡಿತರ ಅಕ್ಕಿ  ಸಿಗುವುದಿಲ್ಲ  ಎನ್ನುವುದು ಈ ತಾಯಿಗೆ   ಗಾಯದ ಮೇಲೆ ಬರೆ ಎಳೆದಂತಾಗಿದೆ .

ಮೊದಲೇ  ಓಡಾಡಲಾಗದ ಪರಿಸ್ಥಿತಿಯಲ್ಲಿರುವ  ತಾಯಿ   ಬೆರಳಚ್ಚು ನೀಡಲು ಇಂತಹ ಒಂದು ಸ್ಥಿತಿಯಲ್ಲಿ  ನ್ಯಾಯಬೆಲೆ ಅಂಗಡಿಗೆ ತೆರಳಿ ಅಕ್ಕಿ  ಪಡೆಯಲು ಸಾಧ್ಯವೇ?

       ಮಾನವೀಯತೆ  ತೋರಬೇಕಾಗಿದೆ  ಆಹಾರ ಇಲಾಖೆ  

Old Women

ನ್ಯಾಯಬೆಲೆ ಅಂಗಡಿಗಳು  ಇಂತಹ ಪರಿಸ್ಥಿತಿಯಲ್ಲಿರುವ  ಕುಟುಂಬಗಳ ಪಟ್ಟಿಯನ್ನು ಮಾಡಿ  

ಆಹಾರ ಇಲಾಖೆ, ಹಾಗೂ ತಾಲೂಕು ಆಡಳಿತಗಳ ಮುಖಾಂತರ ಜಿಲ್ಲಾಧಿಕಾರಿಗಳ  ಗಮನಕ್ಕೆ ತಂದು  ಪಡಿತರ ಅಕ್ಕಿ ಮತ್ತು ಸರ್ಕಾರದ  ಕೆಲವು ಸೌಲಭ್ಯಗಳನ್ನು ಮನೆಗೆ ತಲುಪಿಸುವಂತೆ   ಮಾಡಿದರೆ  ಆ ಕುಟುಂಬಕ್ಕೆ  ಮಾನವೀಯ ನೆರವು ಸಿಕ್ಕಂತಾಗುತ್ತದೆ     ಇನ್ನಾದರೂ  ಇಲಾಖೆಗಳು ಎಚ್ಚೆತ್ತುಕೊಂಡು ಇಂತಹ ಕುಟುಂಬಗಳಿಗೆ ಸಹಾಯ ಹಸ್ತ ನೀಡಿ ಮಾನವೀಯತೆ ಮೆರೆಯಲಿ   ಎನ್ನುವುದು ಹೊಸನಗರ ಡಾಟ್ ಕಾಮ್ ಸುದ್ದಿಯ ಆಶಯವಾಗಿದೆ.

Hosanagara,OLD WOMEN,

ಇದನ್ನೂ ಓದಿ: Shivamogga Murder Case : ಆಧುನಿಕ ಪ್ರೀತಿಯ ಕೊಲೆ ಕಹಾನಿ

Hosanagara News
Hosanagara News

Leave a Comment