Jimmy george volleyball Club Hosanagara
Hosanagara
ಹೊಸನಗರ: ಕ್ರೀಡೆಯಲ್ಲಿ ಸ್ಥಿರವಾದ ತೊಡಗಿಸಿಕೊಳ್ಳುವಿಕೆಯು ಯಾವಾಗಲೂ ದೈಹಿಕ ಆರೋಗ್ಯವನ್ನು ಸುಧಾರಿಸುತ್ತದೆ ಎಂಬುದು ಸಾಬೀತಾಗಿದೆ ಎಂದು ಹೊಸನಗರ ಸರ್ಕಾರಿ ಆಸ್ಪತ್ರೆಯ ಹಿರಿಯ ವೈದ್ಯಾಧಿಕಾರಿ ಡಾಕ್ಟರ್ ಲಿಂಗರಾಜು ತಿಳಿಸಿದರು. ಜಿಮ್ಮಿ ಜಾರ್ಜ್ ವಾಲಿಬಾಲ್ ಸಂಸ್ಥೆ ಆಯೋಜಿಸಿರುವ ಉಚಿತ ವಾಲಿಬಾಲ್ ತರಬೇತಿ ಶಿಬಿರದಲ್ಲಿ ಆರೋಗ್ಯ ಮತ್ತು ಕ್ರೀಡೆ ಕುರಿತಾಗಿ ತರಬೇತಿ ಪಡೆಯುತ್ತಿರುವ ಕ್ರೀಡಾಪಟುಗಳನ್ನು ಉದ್ದೇಶಿಸಿ ಮಾತನಾಡಿದವರು ಕ್ರೀಡೆಯಲ್ಲಿ ನಿಯಮಿತ ಭಾಗವಹಿಸುವಿಕೆಯು ಆರೋಗ್ಯಕರ ತೂಕವನ್ನು ಕಾಪಾಡಿಕೊಳ್ಳಲು, ಸ್ನಾಯುಗಳನ್ನು ನಿರ್ಮಿಸಲು ಮತ್ತು ಹೃದಯರಕ್ತನಾಳದ ಫಿಟ್ನೆಸ್ ಅನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ
ಕ್ರೀಡೆಯು ನಮ್ಮ ಜೀವನದಲ್ಲಿ
ಬಹುಮುಖಿ ಮತ್ತು ಅವಿಭಾಜ್ಯ ಪಾತ್ರವನ್ನು ವಹಿಸುತ್ತದೆ. ವಿವಿಧ ಸಂಸ್ಕೃತಿಗಳ ನಡುವೆ ಸಾಮಾನ್ಯ ಭಾವನೆಯನ್ನು ಹೆಣೆಯುವ ಶಕ್ತಿಯನ್ನು ಕ್ರೀಡೆ ಹೊಂದಿದೆ.
ಕ್ರೀಡೆ ಕೇವಲ ಆರೋಗ್ಯವನ್ನಲ್ಲದೆ ಶಿಸ್ತು, ಸಮಯ ಪಾಲನೆ, ಸ್ನೇಹ, ದೈಹಿಕ ದೃಢತೆ ಎಲ್ಲವನ್ನು ಸಹ ಕಲಿಸುವಂತಹ ಒಂದು ಉತ್ತಮವಾದ ಸಾಧನವಾಗಿದೆ ತರಬೇತಿಯನ್ನು ಪಡೆಯುತ್ತಿರುವ ನೀವೆಲ್ಲರೂ ಇಲ್ಲಿ ಕಳಿಸಿರುವ ಅಂತಹ ಎಲ್ಲ ವಿಚಾರಗಳನ್ನು ಮನಗೊಂಡು ಅವುಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಹಾಗೆಯೆ ದುಶ್ಚಟಗಳಿಂದ ದೂರ ಉಳಿಯಬೇಕು ಎಂದರು.
ಈ ಸಂದರ್ಭದಲ್ಲಿ ಜಿಮ್ಮಿ ಜಾರ್ಜ್ ವಾಲಿಬಾಲ್ ಸಂಸ್ಥೆಯ ಅಧ್ಯಕ್ಷರಾದ ಎಂ ಎನ್ ಸುಧಾಕರ್, ಸದಸ್ಯರಾದ ನಾಗೇಶ್, ವೇಣುಗೋಪಾಲ್, ಸುಹಾಸ್, ಜಿಕೆ ಸತೀಶ್, ರವಿ, ರಮೇಶ್ ಶೆಟ್ಟಿ, ಧನಂಜಯ್, ಗಣೇಶ್, ಗುರುರಾಜ್, ಉಪಸ್ಥಿತರಿದ್ದರು.
Table of Contents
Toggle