Impact News : ಫಲ ನೀಡಿತು ಹೊಸನಗರ ಡಾಟ್ ಕಾಮ್ ವರದಿ

Impact News Hosanagara,OLD WOMEN,
Paralyzed mother received ration rice
ಹೊಸನಗರ : ಪಾರ್ಶವಾಯು ಪೀಡಿತ ತಾಯಿಗೆ ನಾಲ್ಕು ತಿಂಗಳಿಂದ ಸಿಗುತ್ತಿಲ್ಲ ಪಡಿತರ ಅಕ್ಕಿ ಎಂಬ ಶೀರ್ಷಿಕೆಯಡಿ ಮೊನ್ನೆ ಅಷ್ಟೇ ಹೊಸನಗರ ಡಾಟ್ ಕಾಮ್ ನಲ್ಲಿ
ವರದಿಯಾದ
ಕೆಲವೇ ಗಂಟೆಗಳಲ್ಲಿ
ಹೊಸನಗರದ ತಹಶೀಲ್ದಾರರಾದ ರಶ್ಮಿ ಹಾಲೇಶ್ ರವರು ವರದಿಗೆ ಸ್ಪಂದಿಸಿದ್ದು ಬಡ ಕುಟುಂಬದ ಆ ತಾಯಿಗೆ ಅಕ್ಕಿ ವಿತರಿಸುವಂತೆ ಆಹಾರ ಇಲಾಖೆಯ ಮುಖಾಂತರ ನ್ಯಾಯಬೆಲೆ ಅಂಗಡಿಗೆ ತಿಳಿಸಿದ್ದಾರೆ.
ಧನ್ಯವಾದಗಳು ತಿಳಿಸಿದ ತಾಯಿ
ಇದರ ಪ್ರತಿಫಲವಾಗಿ ಅಕ್ಕಿ ನೀಡಲು ನ್ಯಾಯಬೆಲೆ ಅಂಗಡಿಯಿಂದ ಕರೆ ಬಂದು ಅಕ್ಕಿ ಕೊನೆಗೂ ತಲುಪಿದೆ ಎಂಬ ವಿಷಯ ತಿಳಿದು ಸಂತೋಷಗೊಂಡ ಆ ತಾಯಿ ತಹಶೀಲ್ದಾರ್ ರಶ್ಮಿ ಹಾಲೇಶ್ ಹಾಗೂ ಹೊಸನಗರ ಡಾಟ್ ಕಾಮ್ ಸುದ್ದಿ ವಿಭಾಗಕ್ಕೆ ಧನ್ಯವಾದಗಳನ್ನ ಸಲ್ಲಿಸಿದ್ದಾರೆ.
Hosanagara,OLD WOMEN,