Hosanagara Dasara,News,Kannada,NammaShivamogga.
Hosanagara Dasara
ಹೊಸನಗರ: ನಾಳೆ ನಡೆಯಲಿರುವ ನಾಡ ಹಬ್ಬದ ದಸರಾ ಮಹೋತ್ಸವ ಕಾರ್ಯಕ್ರಮದ ಅಂಗವಾಗಿ ಬನ್ನಿ ಮುಡಿಯುವ ಕಾರ್ಯಕ್ರಮವನ್ನು ಸಮಸ್ತ ಸಾರ್ವಜನಿಕರು ಭಾಗವಹಿಸಿ ಅತ್ಯಂತ ಅದ್ದೂರಿಯಿಂದ ಆಚರಿಸೋಣ ಎಂದು ಈ ಬಾರಿಯ ದಸರಾ ಆಚರಣೆ ಸಮಿತಿಯ ಅಧ್ಯಕ್ಷರಾದ ದುಮ್ಮಾ ವಿನಯ್ ಗೌಡ ಇವರು ಮನವಿ ಮಾಡಿದ್ದಾರೆ.


ಪಟ್ಟಣ ಪಂಚಾಯತ್ ಆವರಣದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದವರು.
ಶನಿವಾರ ಸಂಜೆ ಪಟ್ಟಣದ ದ್ಯಾವರ್ಸದಲ್ಲಿನ ಶ್ರೀ ಕಳೂರು ರಾಮೇಶ್ವರ ದೇವಸ್ಥಾನದ ಆವರಣದಲ್ಲಿ ನಾಡಹಬ್ಬ ಆಚರಣೆ ಸಮಿತಿ, ಪಟ್ಟಣ ಪಂಚಾಯತ್, ವಿವಿಧ ಸಂಘ ಸಂಸ್ಥೆಗಳ ಸಯೋಗದೊಂದಿಗೆ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು ಶನಿವಾರ ಮಧ್ಯಾಹ್ನ 2 ಗಂಟೆಗೆ ತಾಲೂಕು ಕಚೇರಿಯಲ್ಲಿನ ಖಜಾನೆಯ ವಿವಿಧ ಪೂಜಾ ವಿಧಿ ವಿಧಾನಗಳನ್ನು ನೆರವೇರಿಸಿದ ಬಳಿಕ ತಾಲೂಕು ದಂಡಾಧಿಕಾರಿಗಳು ಜಮಾ ಖರ್ಚು, ದಾಖಲಿಸಿದ ನಂತರ ಇಲ್ಲಿನ ಜನಾರ್ದನ ದೇವಸ್ಥಾನದಿಂದ ದೇವರ ಉತ್ಸವ ಮೆರವಣಿಗೆಯಲ್ಲಿ ಸಾಗಿ ಬಳಿಕ ಗಣಪತಿ ದೇವಸ್ಥಾನಕ್ಕೆ ತೆರಳಿ ಅಲ್ಲಿ ಪೂಜೆಯನ್ನು ಮುಗಿಸಿ.
ಅಲ್ಲಿಂದ ಪಟ್ಟಣದ ಪ್ರಮುಖ ಬೀದಿಗಳಲ್ಲಿ ವಿವಿಧ ಸಾಂಸ್ಕೃತಿಕ ಕಲಾತಂಡಗಳೊಂದಿಗೆ ಬನ್ನಿಮಂಟಪಕೆ ತೆರಳಿ ಅಲ್ಲಿ ತಾಲೂಕು ದಂಡಾಧಿಕಾರಿಗಳು ಬನ್ನಿ ಮರಕ್ಕೆ ವಿಶೇಷ ಪೂಜೆಯನ್ನ ಸಲ್ಲಿಸಿದ ಬಳಿಕ ಬನ್ನಿ ಮುಡಿಯುವ ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಲಿದ್ದಾರೆ ಎಂದು ತಿಳಿಸಿದರು ಸಾರ್ವಜನಿಕರು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಈ ಬನ್ನಿ ಮುಡಿವ ಕಾರ್ಯಕ್ರಮಕ್ಕೆ ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿಕೊಡಬೇಕಾಗಿ ಕೇಳಿಕೊಂಡರು.
ಈ ಸಂದರ್ಭದಲ್ಲಿ ಪಟ್ಟಣ ಪಂಚಾಯತ್ ಅಧ್ಯಕ್ಷರಾದ ನಾಗಪ್ಪ, ದಸರಾ ಆಚರಣೆ ಸಮಿತಿ ಸದಸ್ಯರಾದ ನಾಸಿರ್ ಉಪಸ್ಥಿತರಿದ್ದರು.
Table of Contents
Toggleವರದಿ : ಮನು ಸುರೇಶ್
Hosanagara Dasara,News,Kannada,NammaShivamogga.

