Durgamba Bus Accident,Ripponpete News,Kannada,NammaShivamogga.
Durgamba Bus Accident
ಹೊಸನಗರ: ತಾಲೂಕಿನ ರಿಪ್ಪನ್ ಪೇಟೆ ಸಮೀಪದ ಚಿಕ್ಕಜೆನಿ ಸರ್ಕಾರಿ ಪ್ರೌಢ ಶಾಲೆ ಎದುರು ಶಿವಮೊಗ್ಗದಿಂದ ಕುಂದಾಪುರಕ್ಕೆ ಸಾಗುತಿದ್ದ ಬಸ್ ಗೆ ಹೊಸನಗರ ಮಾರ್ಗದಿಂದ ಭತ್ತ ಕೊಯ್ಯುವ ಮಷಿನ್ ಹೊತ್ತೊಯ್ಯುವ ತಮಿಳುನಾಡು ಮೂಲದ ಲಾರಿ ನಡುವೆ ಅಪಘಾತ ಸಂಭವಿಸಿ ಚಾಲಕನ ನಿಯಂತ್ರಣ ತಪ್ಪಿ ಬಸ್ ಪಲ್ಟಿಯಾಗಿದೆ.
16 ಜನ ಪ್ರಯಾಣಿಕರಲ್ಲಿ ಐದು ಜನರಿಗೆ ಗಾಯಗಳಾಗಿವೆ ಎಂದು ಮಾಹಿತಿ ತಿಳಿದು ಬಂದಿದೆ, ಸ್ಥಳೀಯ ಆಸ್ಪತ್ರೆಯಾದ ರಿಪ್ಪನ್ ಪೇಟೆ ಗೆ ಆಂಬುಲೆನ್ಸ್ ಹಾಗು ಪೊಲೀಸ್ ವಾಹನದ ಮೂಲಕ ಗಾಯಾಳುಗಳನ್ನ ಆಸ್ಪತ್ರೆಗೆ ದಾಖಲಿಸಲಾಗಿದೆ.