Hosanagara,Cowcase,Shrinandagokula.Hosanagara Cow Case
Hosanagara
ಹೊಸನಗರ: ಪಟ್ಟಣದ ಕುವೆಂಪು ವಿದ್ಯಾ ಸಂಸ್ಥೆ ಸಮೀಪ ಇರುವ ಶ್ರೀ ನಂದ ಗೋಕುಲ ಗೋಸೇವಾ ಟ್ರಸ್ಟ್ ಇದ್ದು ಅಪಘಾತಕ್ಕೀಡಾದ ಅನಾರೋಗ್ಯ ಪೀಡಿತ ಹಾಗೂ ಬೀಡಾಡಿ ದನಗಳನ್ನು ಪೋಷಿಸುವ ಸಲುವಾಗಿ ಕೆಲ ಯುವಕರು ಈ ಗೋಶಾಲೆಯನ್ನು ನಿರ್ಮಿಸಿದ್ದು ನಿನ್ನೆ ರಾತ್ರಿ12 ಗಂಟೆ ಬಳಿಕ ಯುವಕರು ಗೋ ಗಳಿಗೆ ಮೇವನ್ನು ತಿನ್ನಿಸಿ ಗೋಶಾಲೆಯಿಂದ ತೆರಳಿದ್ದು ಗೋಶಾಲೆಯಲ್ಲಿ ಯಾರು ಇಲ್ಲದನ್ನ ಮನಗಂಡ ಕಿಡಿಗೇಡಿಗಳು ಗೋಶಾಲೆಯಲ್ಲಿದ್ದ ಅಪಘಾತಕೀಡಾದ ಒಂದು ಗೋವನ್ನ ಗೋಶಾಲೆ ಸಮೀಪ ಇರುವ ತೆರೆದ ಬಾವಿಯಲ್ಲಿ ನೇಣು ಬಿಗಿದು ನೀರಿನಲ್ಲಿ ಮುಳುಗಿಸಿದ್ದಾರೆ.
ಇದಕ್ಕೂ ಮುನ್ನ ಗೋಶಾಲೆಯಲ್ಲಿದ್ದ ಸಿಸಿ ಕ್ಯಾಮೆರಾವನ್ನು ನಿಷ್ಕ್ರಿಯಗೊಳಿಸಿ ಈ ಕೃತ್ಯವನ್ನು ಎಸಗಿದ್ದಾರೆ ಎಂದು ಗೋಶಾಲೆಯ ಪ್ರಮುಖರು ಆರೋಪಿಸಿದ್ದಾರೆ.
ಸ್ಥಳಕ್ಕೆ ಹೊಸನಗರ ಪೊಲೀಸ್ ಠಾಣ ಪಿ ಎಸ್ ಐ ಶಂಕರ್ ಗೌಡ ಪಾಟೀಲ ಭೇಟಿ ನೀಡಿ ಪರಿಶೀಲಿಸಿ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.
ಬಳಿಕ ಅಗ್ನಿಶಾಮಕ ಸಿಬ್ಬಂದಿಗಳು ಗೋವನ್ನ ಬಾವಿಯಿಂದ ಮೇಲಕ್ಕೆತ್ತಿ ಗೋಶಾಲೆಯ ಯುವಕರಿಗೆ ಹಸ್ತಾಂತರಿಸಿದರು..
ವರದಿ: ಮನು
Hosanagara,Cowcase,Shrinandagokula.Hosanagara Cow Case









