Hosanagara Rain, Hosanagara Weather
Hosanagara Rain
ಹೊಸನಗರ : ಹೊಸನಗರದಲ್ಲಿ ಇಂದು ಮಧ್ಯಾಹ್ನ ಬೀಸಿದ ಬಾರಿ ಗಾಳಿ ಮಳೆಗೆ ಪಟ್ಟನ ದ 2ನೇ ವಾರ್ಡ್ ನಲ್ಲಿ ವಾಸವಾಗಿರುವ ಕೃಷ್ಣಮೂರ್ತಿ ಎಂಬುವರ ಮನೆಯ ಮೇಲೆ ತೆಂಗಿನ ಮರವೊಂದು ಬಿದ್ದು ಬಾರಿ ಅನಾಹುತ ಒಂದು ತಪ್ಪಿದೆಯಲ್ಲದೆ ಮುಂಭಾಗ ದ ಕಡುಮಾಡು ಸಂಪೂರ್ಣ
ಹಾನಿಯಾಗಿದೆ

ತಪ್ಪಿದ ಬಾರಿ ದುರಂತ
ಆಗಷ್ಟೇ ಪರೀಕ್ಷೆ ಮುಗಿಸಿ ಮನೆಗೆ ಬಂದ ಚಿಕ್ಕ ಬಾಲಕಿ ಸಮೃದ್ದಿ ದುಡಿಮೆಗೆಂದು ಹೋಗಿದ್ದ ಅಪ್ಪ,ಅಮ್ಮನ ಬರುವಿಕೆಗಾಗಿ ಹೊರಬಾ ಗದಲ್ಲಿ ಕಾದು ನಿಂತಿದ್ದಳು
ಅಕ್ಷಣದಲ್ಲಿ ಬೀಸಿದ ಬಾರಿ ಬಿರುಗಾಳಿ ಗೆ ಹೆದರಿ ಒಳಗೆ ಹೋಗಿದಾಳೆ ಅಷ್ಟೇ ಮನೆಯ ಮುಂಭಾಗದಲ್ಲಿ ಇದ್ದ ಬೃಹತ್ ಆಕಾರದ ತೆಂಗಿನ ಮರ ಮನೆಯ ಕಡುಮಾಡಿನ ಮೇಲೆ ಬಿದ್ದಿದೆ ಅದೃಷ್ಟವಸಾತ್ ಯಾವುದೇ ಅನಾಹುತವಾಗಿಲ್ಲ
ಅದೃಷ್ಟ

ಅಲ್ಲದೆ ಪಕ್ಕದ ಬಾಡಿಗೆಮನೆಯಲ್ಲಿ ಒಂದು ಕುಟುಂಬ ವಾಸವಾಗಿತ್ತು ಅಲ್ಲೂ ಕೂಡ ಚಿಕ್ಕ ಚಿಕ್ಕ 2ಮಕ್ಕಳು ವಾಸ ವಾಗಿದ್ದರು ಅವರು ಮಳೆ ಶುರು ಆಗುವ ಮೊದಲು ಅಂಗಡಿಗೆ ತೆರಳಿದ್ದರಿಂದ ಬಾರಿ ದುರಂತವೇ ತಪ್ಪಿದೆ.
ತಕ್ಷಣ ನೆರೆವಿಗೆ ಬಂದ ಗ್ರಾಮಸ್ತರು

ಸುದ್ದಿ ತಿಳಿಯುತ್ತಿದ್ದಂತೆ ಅಕ್ಕಪಕ್ಕದ ಮನೆಯವರು ಬಂದು ಆ ಬಾಲಕಿ ಗೆ ಧೈರ್ಯ ತುಂಬಿದ್ದಾರೆ ಹಾಗೂ ಮನೆಯ ಮೇಲೆ ಬಿದ್ದ ಮರವನ್ನು ಸಂತೋಷ ಅವರ ಕ್ರೈ ನ್ ಮೂಲಕ ತೇರವುಗೊಳಿ ಸಲಾಯಿತು ಈ ಸಂದರ್ಭದಲ್ಲಿ ರಾಧಾಕೃಷ್ಣ, ನಾಗೇಶ್. ಹರೀಶ್.ಅನಿಲ್
ಅಮ್ಮಿ, ಸುಮನ್ ಹಾಗೂ ಗುರೂಜಿ ಶಾಲೆಯ ದೈಹಿಕ ಶಿಕ್ಷಕರಾದ ನಾಗರಾಜ್ ತೆರೆವು ಕಾರ್ಯದಲ್ಲಿ
ಫಾಲ್ಗೊಂಡಿದ್ದರು.
Hosanagara Rain, Hosanagara Weather

