world environment day 2024 : ಪರಿಸರ ಸಂರಕ್ಷಣೆ ಪ್ರತಿಯೊಬ್ಬರ ಆದ್ಯ ಕರ್ತವ್ಯ. ಪಿಎಸ್ಐ ರಾಜು ರೆಡ್ಡಿ

world environment day 2024 ,Hosanagara,Parisara dina, Hosanagara Police Station.
Environmental protection is everyone’s priority.: PSI Raju Reddy
ಹೊಸನಗರ : ವಿಶ್ವ ಪರಿಸರ ದಿನದ ಹಿನ್ನೆಲೆ ಹೊಸನಗರ ಪೊಲೀಸ್ ಠಾಣಾ ಆವರಣದಲ್ಲಿ ಪೊಲೀಸ್ ಸಬ್ ಇನ್ಸ್ಪೆಕ್ಟರ್ ರಾಜು ರೆಡ್ಡಿ ಹಾಗೂ ಸಿಬ್ಬಂದಿಗಳು ಗಿಡವನ್ನು ನೆಡುವ ಮೂಲಕ ಪರಿಸರ ಜಾಗೃತಿ ಅರಿವನ್ನ ಮೂಡಿಸಿದರು.
ಈ ಕುರಿತು ಮಾತನಾಡಿದ ಸಬ್ ಇನ್ಸ್ಪೆಕ್ಟರ್ ರಾಜು ರೆಡ್ಡಿ ಪರಿಸರ ಸಂರಕ್ಷಣೆ ಪ್ರತಿಯೊಬ್ಬರ ಆದ್ಯ ಕರ್ತವ್ಯವಾಗಿದ್ದು ಗಿಡಮರಗಳನ್ನು ನೆಟ್ಟು ಅವನ ಮಕ್ಕಳಂತೆ ಆರೈಕೆ ಮಾಡುವುದು ಮನೆಗೆ ಎರಡು ಮರ ಊರಿಗೊಂದು ವನ ಎಂಬ ಹಿರಿಯರ ನಾಣ್ನುಡಿಯನ್ನ ನನಸಾಗಿಸುವ ಕೆಲಸ ಪ್ರತಿಯೊಬ್ಬರೂ ಮಾಡಬೇಕು ಕಾಡು ಗಿಡ ಮರಗಳ ಸಂರಕ್ಷಣೆಯಿಂದ ಉತ್ತಮವಾದ ಮಳೆ ಬೆಳೆ ಉಂಟಾಗಿ ನಾಡು ಸಮೃದ್ಧಿಯಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ಸಿಬ್ಬಂದಿಗಳಾದ ಮಾಯಪ್ಪ, ಗಂಗಾಧರ್, ಅವಿನಾಶ್, ಸುನಿಲ್, ವೀರೇಶ್ ಮುಂತಾದವರು ಉಪಸ್ಥಿತರಿದ್ದರು.
world environment day 2024 ,Hosanagara,Parisara dina, Hosanagara Police Station.