Hosanagara,warrant officer manjunath Died
warrant officer manjunath Died
ಆಗ್ರಾ, ಫೆಬ್ರವರಿ 7, 2025: : ಉತ್ತರ ಪ್ರದೇಶದ ಆಗ್ರಾದ ಮಲ್ಪುರ ಪ್ಯಾರಾಚೂಟ್ ಡ್ರೋಪ್ ಝೋನ್ನಲ್ಲಿ ನಡೆದ ತರಬೇತಿ ಅಭ್ಯಾಸದ ಸಂದರ್ಭದಲ್ಲಿ ಹೊಸನಗರ ತಾಲೂಕಿನ ಸಂಕೂರಿನ ಮೂಲದ ವಾಯುಪಡೆಯವಾರಂಟ್ ಅಧಿಕಾರಿ (IAF) ಮಂಜುನಾಥ್ ಪ್ರಾಣ ಕಳೆದುಕೊಂಡಿದ್ದಾರೆ . ಶುಕ್ರವಾರ ಬೆಳಿಗ್ಗೆ8.30 ರ ಸುಮಾರಿಗೆ ಭಾರತೀಯ ವಾಯುಪಡೆಯ ವಿಮಾನದಿಂದ 12 ಜವಾನರು ಪ್ಯಾರಾಚೂಟ್ ಜಂಪ್ ಮಾಡಿದ್ದರು. ಇವರಲ್ಲಿ 11 ಜನ ಸುರಕ್ಷಿತವಾಗಿ ಲ್ಯಾಂಡ್ ಆಗಿದ್ದರೆ ಆದರೆ , ಮಂಜುನಾಥ್ ಅವರ ಪ್ಯಾರಾಚೂಟ್ ತೆರೆಯದೆ 1500 ಅಡಿ ಎತ್ತರದಿಂದ ನೇರವಾಗಿ ಬಿದ್ದಿದ್ದಾರೆ ಮಂಜುನಾಥ್ ಅವರಿಗಾಗಿ ನಡೆಸಿದ ಶೋಧ ಕಾರ್ಯದಲ್ಲಿ ಅವರು ಸಮೀಪದ ಗೋಧಿ ಹೊಲದ ಜಮೀನಿನಲ್ಲಿ ಪತ್ತೆಯಾಗಿದ್ದಾರೆ. ತಕ್ಷಣವೇ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು, ಆದರೆ ವೈದ್ಯಕೀಯ ಪರೀಕ್ಷೆಯ ಬಳಿಕ ಅವರು ಸಾವನ್ನಪ್ಪಿರುವುದು ದೃಢಪಟ್ಟಿದೆ ಎಂದು ವರದಿಯಾಗಿದೆ.
ಭಾರತೀಯ ವಾಯು ಸೇನೆಯ ವಾರಂಟ್ ಅಫೀಸರ್ ಮಂಜುನಾಥ್ ತಂದೆ ಸುರೇಶ್, ತಾಯಿ ನಾಗರತ್ನ. ಕೃಷಿಕ ಕುಟುಂಬ. ಇಬ್ಬರು ಸಹೋದರಿಯರು, ಓರ್ವ ಸಹೋದರ ಇದ್ದಾರೆ.


ಪ್ರಾಥಮಿಕ ತನಿಖೆಯ ವೇಳೆ ಪ್ಯಾರಾಚೂಟ್ ಬಿಚ್ಚಿಕೊಳ್ಳದೇ, ಅವರು 1500 ಅಡಿ ಎತ್ತರದಿಂದ ಕೆಳಗೆ ಬಿದ್ದಿರುವುದು ಪತ್ತೆಯಾಗಿದೆ. ಸಾಮಾನ್ಯವಾಗಿ ವಿಮಾನದಿಂದ ಹಾರಿದ 5 ಸೆಕೆಂಡಿನೊಳಗೆ ಪ್ಯಾರಾಚೂಟ್ ಸ್ವಯಂಚಾಲಿತವಾಗಿ ಬಿಚ್ಚಿಕೊಳ್ಳಬೇಕು. ಆದರೆ ಅದು ಆಗದೇ ಹೋದರೆ, ತುರ್ತು ಸಂದರ್ಭಗಳಿಗೆ ಮೀಸಲಿಟ್ಟ ಮತ್ತೊಂದು ಪ್ಯಾರಾಚೂಟ್ ಅನ್ನು ಸ್ವತಃ ತೆರೆಯಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ ಘಟನೆ ಸಂಬಂಧ ತನಿಖೆಗೆ ಆದೇಶಿಸಲಾಗಿದೆ. ಮಂಜುನಾಥ್ ಕರ್ನಾಟಕದವರಾಗಿದ್ದು, ಆಗ್ರಾ ಏರ್ಫೋರ್ಸ್ ಬೇಸ್‌ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಮರಣೋತ್ತರ ಪರೀಕ್ಷೆ ಸೇರಿದಂತೆ ಅಗತ್ಯ ಕಾನೂನು ಪ್ರಕ್ರಿಯೆಗಳು ನಡೆಸಲಾಗಿದೆ ಎಂದು ಮಲ್ಪುರ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಪ್ರಮೋದ್ ಶರ್ಮಾ ತಿಳಿಸಿದ್ದಾರೆ.
“ಜನ್ಮಭೂಮಿಗಾಗಿ ತಮ್ಮ ಪ್ರಾಣ ತ್ಯಾಗ ಮಾಡಿದ ವೀರ ಯೋಧರ ಪ್ರತಿ ದೇಶ ಸದಾಕಾಲ ಕೃತಜ್ಞವಾಗಿರುತ್ತದೆ. ಅವರ ತ್ಯಾಗ ಅನಂತಕಾಲಕ್ಕೂ ಸ್ಮರಣೀಯ”

Hosanagara, manjunath Died Aiforce
.

