Swami vivekananda jayanti 2024,Hosanagara News,Guruji Internation Residential School Hosanagara, Swami Vivekananda Jayanthi.
ಹೊಸನಗರ : ಭವ್ಯಭಾರತದ ಸಂಸ್ಕೃತಿಯ ಸಂರಕ್ಷಣೆಗೆ ಭಾರತ ಯುವಪಡೆ ಸಿದ್ಧವಾಗಬೇಕು ಎಂದು ಹೊಸನಗರದ ಹಿರಿಯ ವ್ಯವಹಾರ ನ್ಯಾಯದೀಶರು ಮತ್ತು ತಾಲ್ಲೂಕು ಕಾನೂನು ಸೇವಸಮಿತಿಯ ಅಧ್ಯಕ್ಷರಾದ ಶ್ರೀಯುತ ಸಂತೋಷ್ ಸರ್ (Santhosh) ಹೇಳಿದರು.
ಪಟ್ಟಣದ ವಿದ್ಯಾಭಾರತಿ ಶಿಕ್ಷಣ ಸಂಸ್ಥೆಯಲ್ಲಿ ಶ್ರೀಗುರೂಜಿ ಇಂಟರ್ ನ್ಯಾಷನಲ್ ರೆಶಿಡೆನ್ಶಿಯಲ್ ಸ್ಕೂಲ್(Guruji International Residenstial School Hosanagara) ಹಾಗು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಶಿವಮೊಗ್ಗ ,ತಾಲ್ಲೂಕು ಕಾನೂನು ಸೇವಾ ಸಮಿತಿ ಹೊಸನಗರ ವಕೀಲರ ಸಂಘ ಹೊಸನಗರ ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ರಾಷ್ಟ್ರೀಯ ಯುವ ದಿನಾಚಾರಣೆಯ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಸ್ವಾಮಿ ವಿವೇಕಾನಂದ ( Sami vivekananda jayanti 2024 ) ಅವರು ನಮ್ಮ ಭಾರತೀಯ ಸಂಸ್ಕೃತಿಯನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಶೋಭಿಸುವಂತೆ ಅಂದು ಚಿಕಾಗೋ ಭಾಷಣದಲ್ಲಿ ಮಾಡಿದರು ಹಾಗೆ ನಾವುಕೂಡ ನಮ್ಮ ಸಂಸ್ಕೃತಿಯ ಅಚಾರವಿಚಾರವನ್ನು ನಮ್ಮ ಪರಂಪರೆಯನ್ನು ವಿಶ್ವಕ್ಕೆ ಪರಿಚಯಮಾಡಿಕೊಡುವ ಕೆಲಸವನ್ನು ನಾವು ಶ್ರದ್ಧೆಯಿಂದ ಮಾಡಬೇಕು ಎಂದರು.
ಭಾರತದ ಜನರು ಗುಲಾಮಗಿರಿಯಲ್ಲಿದ್ದ ಅಂದಿನ ಕಾಲದಲ್ಲಿ ನಮ್ಮನ್ನು ದೇಶಸೇವೆಗೆ ದುಮುಕುವಂತೆ ಮಾಡಿದ ಮಹಾತ್ಮ ಸ್ವಾಮಿವಿವೇಕಾನಂದ ( Swami vivekananda jayanti 2024 ) ಅಂತಹ ಮಹಾನ್ ವ್ಯಕ್ತಿ ನಮಗೆ ಹಾಕಿಕೊಟ್ಟಂತಹ ಒಂದು ಸಿದ್ಧಾಂತವನ್ನು ನಾವು ಪಾಲಿಸಿ ಮಹಾನ್ ದೇಶಭಕ್ತರಾಗಬೇಕು ಎಂದರು.
ಯುವಪಡೆ ವಿದ್ಯಾರ್ಥಿಗಳಿಗೊಂದು ಕಿವಿಮಾತು
ಇಂದಿನ ಮಕ್ಕಳು ಎರಡು ವಿಷಯದ ಬಗ್ಗೆ ಗಮನಹರಿಸ ಬೇಕು ಮೊದಲೆನೆಯದಾಗಿ ಪ್ರತಿದಿನ ನಾನೇನು ಮಾಡಬೇಕು ಅದಕ್ಕೆ ಸಮಯವನ್ನು ನಾನು ಎಷ್ಟು ಮೀಸಲು ಇಟ್ಟಿದ್ದೇನೆ ಅದು ಟಿವಿ,ಆಟ,ಓದು ಯಾವುದು ಬೇಕಾದರು ಆಗಿರಬಹುದು ಅದರ ಬಗ್ಗೆ ತಿಳಿದುಕೊಂಡಾಗ ನಿಮಗಿರುವ ಸಮಯ ಪ್ರಜ್ಞೆ ಉತ್ಸಾಹ ಹಾಗು ಚೈತನ್ಯ ಈ ಮೂರನ್ನು ಕೇಂದ್ರಿಕರಿಸಿದಾಗ ನಿಮ್ಮಲ್ಲಿ ಹೊಸತನವೊಂದು ಜಾಗೃತಿಗೊಂಡು ನೀವು ಭಾರತದ ಶ್ರೇಷ್ಟ ವ್ಯಕ್ತಿಗಳಾಗುವುದರಲ್ಲಿ ಸಂಶಯವಿಲ್ಲ ಎಂದರು.
ಎರಡನೆಯದ್ದು ರಾತ್ರಿಮಲಗುವಾಗ ನನ್ನ ದಿನ ನಿತ್ಯಕೆಲಸಕ್ಕೆ ನಾನು ತೆಗದಿಟ್ಟ ಸಮಯದಲ್ಲಿ ನನ್ನ ಕೆಲಸಕಾರ್ಯಗಳು ನಡೆದಿದೆಯಾ ಎಂದು ಯೋಚನೆ ಮಾಡಿದಾಗ ನಮ್ಮ ಕೆಲಸ ಹಾಗು ನಮ್ಮ ಸಮಯದಲ್ಲಿ ನಾನು ನನ್ನ ಕಾರ್ಯದಲ್ಲಿ ಯಶಸ್ಸು ಸಾಧಿಸಿದಿನ ಎಂದು ತಿಳಿಯುತ್ತದೆ ಹಾಗು ನಾನು ಮಾಡಬೇಕಾದ ಕರ್ತವ್ಯದ ಬಗ್ಗೆ ಜಾಗೃತಿ ಮೂಡಿಸುತ್ತದೆ ಇದನ್ನ ಪ್ರತಿಯೊಬ್ಬರು ಫಾಲಿಸುವುದು ಉತ್ತಮ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಪ್ರಧಾನ ವ್ಯವಹಾರ ನ್ಯಾಯದೀಶರು ಮತ್ತು ತಾಲ್ಲೂಕು ಕಾನೂನು ಸೇವಾಸಮಿತಿಯ ಕಾರ್ಯದರ್ಶಿಗಳಾದ ಮಾನ್ಯ ಶ್ರೀ ರವಿಕುಮಾರ್ ಸರ್ ಮಾತನಾಡಿ ಇಂದಿನ ಜಾಗೃತ ಸಮಾಜದಲ್ಲಿ ಯುವ ಸಮೂಹ ದಿಕ್ಕು ತಪ್ಪುತಿರುವುದು ವಿಷಾದನೀಯ ಎಂದು ಬೇಸರವ್ಯಕ್ತಪಡಿಸಿದರು.
ನಮ್ಮ ರಾಜ್ಯದಲ್ಲಿ ಯುವ ಸಮುದಾಯ ದುಶ್ಚಟಗಳಿಗೆ ಬಲಿಯಾಗಿ ಪೋಷ್ಕೋ ಕಾಯ್ದೆಯಡಿಯಲ್ಲಿ (Pocso act) ಶಿಕ್ಷೆ ಅನುಭವಿಸುತಿರುವವರ ಸಂಖ್ಯೆಯಲ್ಲಿ ಶಿವಮೊಗ್ಗ ಜಿಲ್ಲೆ ಗಣನೀಯವಾಗಿ ಹೆಚ್ಚುತ್ತಿದ್ದು ಎರಡನೇ ಸ್ಥಾನದಲ್ಲಿರುವುದು ಆತಂಕದ ವಿಷಯ ಎಂದರು.
ಸಮಾಜದಲ್ಲಿ ಹೆಣ್ಣುಮಕ್ಕಳಿಗೆ ಗೌರವ ನೀಡಬೇಕು
ಭಾರತ ಒಂದು ದೈವಿಕ ದೇಶ ಹಾಗು ಮಾತೃಪ್ರಧಾನವಾದ ದೇಶ ಈ ಸಮಾಜದಲ್ಲಿ ಹೆಣ್ಣುಮಕ್ಕಳಿಗೆ ಗೌರವ ನೀಡಬೇಕು ನಮ್ಮ ಜೊತೆ ಕೆಲಸ ಮಾಡುವಂತಹ ಸಹೋದ್ಯೊಗಿಗಳಿಗೆ ಹಾಗು ನಮ್ಮ ಜೊತೆ ಓದುವಂತಹ ವಿದ್ಯಾರ್ಥಿಯರಿಗೆ ಅವರ ಸಂಕಷ್ಟಕಾಲದಲ್ಲಿ ಅವರಿಗೆ ನೆರವು ನೀಡುವಂತಹ ಕೆಲಸಗಳನ್ನು ಮಾಡಬೇಕು ಅವರಿಗೆ ದೈರ್ಯಹೇಳುವಂತಹ ಮನೋಭಾವವನ್ನು ಬೆಳಸಿಕೊಂಡು ಅವರ ರಕ್ಷಣೆಗೆ ನಿಂತುಕೊಂಡಾಗ ಮಾತ್ರ ನಾವು ಅವರಿಗೆ ಗೌರವ ನೀಡಿದಂತಾಗುತ್ತದೆ. ಎಂದು ಹೇಳಿದರು.
ವಕೀಲರ ಸಂಘದ ಅಧ್ಯಕ್ಷರದ ವಾಲೆಮನೆ ಶಿವಕುಮಾರ್ ಮಾತನಾಡಿ ಮಕ್ಕಳು ಈ ದೇಶದ ಮಹಾನು ಪುರುಷರ ವೇಷಭೂಷಣಗಳನ್ನು ಹಾಕುವ ಸಂಪ್ರದಾಯಗಳನ್ನು ಬೆಳಸಿಕೊಳ್ಳಬೇಕು ಹಾಗು ಅವರ ವಿಚಾರಧಾರೆಗಳನ್ನು ಮೈಗೂಡಿಸಿಕೊಳ್ಳಬೇಕು ಎಂದು ಸಂದರ್ಭದಲ್ಲಿ ಹೇಳಿದರು.
ಕಾರ್ಯಕ್ರಮದಲ್ಲಿ ವಿದ್ಯಾಭಾರತಿ ಶಿಕ್ಷಣ ಸಂಸ್ಥೆಯ ಸುದೇಶ್ ಕಾಮತ್ ಹಾಗು ಕಾರ್ಯದರ್ಶಿಗಳಾದ ಶಾಂತಮೂರ್ತಿ ಹಾಗು ಪ್ರಾಂಶುಪಾಲರಾದ ಶಿವಕುಮಾರ್ ಉಪಸ್ಥಿತಿ ಇದ್ದರು.ಶಿಕ್ಷಕಿ ಕುಮಾರಿ ಉಷಾ ನಿರೂಪಿಸಿ ವಿದ್ಯಾರ್ಥಿಗಳು ಪ್ರಾರ್ಥಿಸಿ ಶಿಕ್ಷಕಿ ಕುಮಾರಿ ಶುಷ್ಮಾ ವಂದಿಸಿದರು.
ಕಾರ್ಯಕ್ರಮದ ನಂತರ ವಿದ್ಯಾರ್ಥಿಗಳು ಹೊಸನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ವಿವೇಕಾನಂದರ ವಿಚಾರಗಳನ್ನು ಹಾಗು ಘೋಷಣೆಗಳನ್ನು ಬಿತ್ತರಿಸಿ ಗಮನಸೆಳೆದರು.
Swami vivekananda jayanti 2024,Hosanagara News,Guruji Internation Residential School Hosanagara, Swami Vivekananda Jayanthi.
7 thoughts on “Swami vivekananda jayanti 2024 : ಸುಸಂಸ್ಕೃತ ಭಾರತದ ನಿರ್ಮಾಣಕ್ಕೆ ಯುವಪಡೆ ಸನ್ನದ್ದವಾಗಬೇಕು. ಮಾನ್ಯ ಶ್ರೀ ಸಂತೋಷ್ ಎಂ ಎಸ್. ಹಿರಿಯ ವ್ಯವಹಾರ ನ್ಯಾಯದೀಶರು”