Pervert Lover Covered With Gravel And Mud In Beloved’s JJM Trench – SP Says
Police Reacts On Srijan And Soumya Love Case ,AnandapuraPolice Reacts On Srijan And Soumya Love Case ,Anandapura
ಆನಂದಪುರ:ಸಾಗರ ಮೂಲದ ಯುವಕ ಸೃಜನ್ ಕೊಪ್ಪ ಮೂಲದ ಯುವತಿ ಯನ್ನು ಹೆದ್ದಾರಿಪುರ ಬಳಿ ಕುತ್ತಿಗೆ ಹಿಸುಕಿ ಕ್ರೂರವಾಗಿ ಸಾಯಿಸಿದ ಘಟನೆ ಮಲೆನಾಡು ಬಾಗದಲ್ಲಿ ಹೆಚ್ಚಿನ ಆತಂಕಕ್ಕೆ ಕಾರಣವಾಗಿತ್ತು.
ಮೃತದೇಹವನ್ನು ಹೊರತೆಗೆದ ಪೊಲೀಸರು:
ಈ ಕೊಲೆ ಕೇಸ್ ಗೆ ಸಂಬಂಧಿಸಿದಂತೆ ಆರೋಪಿ ಸೃಜನ್ ನನ್ನು ಸ್ಥಳಕ್ಕೆ ಕರೆತಂದು ಕೊಳೆತ ಶವವನ್ನು ಹೊರತೆಗೆಯಲಾಗಿದೆ.ಆನಂದಪುರಕ್ಕೆ ಸಮೀಪವಿರುವ ಮದ್ಲೆಸರ ಬಳಿಯ ರೈಲ್ವೆ ಹಳಿಗಳ ಬಳಿ ಸುಜನ್ ಆಕೆಯ ಮೃತದೇಹವನ್ನ ಜೆಜೆಎಂ ಟ್ರಂಚ್ ನಲ್ಲಿ ಹಾಕಿ ಜಲ್ಲಿ ಮತ್ತು ಮಣ್ಣಿನಿಂದ ಮುಚ್ಚಿರುತ್ತಾನೆ.
ಈ ಘಟನೆ ಕುರಿತು ಎಸ್ ಪಿ ಮಿಥುನ್ ರವರು ಹೇಳಿದ್ದೇನು…?
ರಿಪ್ಪನ್ ಪೇಟೆ ವ್ಯಾಪ್ತಿಯಲ್ಲಿ ಒಂದು ಮರ್ಡರ್ ಕೇಸ್ ರಿಪೋರ್ಟ್ ಆಗಿದೆ, ಇದು ಕೊಪ್ಪ ಪೊಲೀಸ್ ಠಾಣೆ ಇಂದ ಟ್ರಾನ್ಸ್ಫರ್ ಆಗಿದೆ. ಹೊಸ BNS (Bhartiya Nyaya Sanhita) ಕಾನೂನು ಪ್ರಕಾರ ನಾವು FIR ಮಾಡಿರುತ್ತೇವೆ. ಇದರಲ್ಲಿ ಸೌಮ್ಯ ಎಂಬ ಹೆಣ್ಣು ಮಗಳು ಮೂಲತಃ ಈಕೆ ಕೊಪ್ಪ ನಿವಾಸಿಯಾಗಿರುತ್ತಾಳೆ. 27 ವಯಸ್ಸು ಈಕೆ ಮೃತ ಪಟ್ಟಿರುತ್ತಾರೆ. ಈ ಘಟನೆ ಜುಲೈ 2 ನೇ ತಾರೀಕು ನಡೆದಿರುತ್ತದೆ. ಆರೋಪಿ ಒಬ್ಬ ಸೃಜನ್ ಅಂತ ಅವನಿಗೆ 25 ವಯಸ್ಸು ಭಾರತ್ ಫೈನಾನ್ಸ್ ಫೈನಾನ್ಸ್ ಏಜೆಂಟ್ ಆಗಿ ಕೆಲಸ ಮಾಡುತ್ತಿರುತ್ತಾನೆ, ಇವರಿಬ್ಬರಿಗೆ 3 ವರ್ಷದಿಂದ ಪರಿಚಯ ಇರುತ್ತೆ, ಈತ ತೀರ್ಥಹಳ್ಳಿ ಬ್ರಾಂಚ್ ನಲ್ಲಿ ಕೆಲಸ ಮಾಡುವಾಗ ಇಬ್ಬರಿಗೂ ಪರಿಚಯವಾಗುತ್ತೆ, ಲೋನ್ ನ ಕಲೆಕ್ಷನ್ ಗೆ ಹೋದಾಗ ಈಕೆಯ ಹಾಗು ಈಕೆಯ ತಾಯಿ ಪರಿಚಯವಾಗುತ್ತೆ,
ಅವಾಗಿಂದ ಮೂರು ನಾಲ್ಕು ತಿಂಗಳು ಸ್ನೇಹ ಬೆಳೆಯುತ್ತೆ ಸ್ನೇಹದಿಂದ ಸಲುಗೆ ಆಗಿ ಅದು ಪ್ರೇಮಕ್ಕೆ ತಿರುಗುತ್ತೆ, ಅದಾದನಂತರ ಆರು 7 ತಿಂಗಳೋಷ್ಟರೊಳಗೆ ಇಬ್ಬರ ಮದ್ಯ ಬಿನ್ನಾಭಿಪ್ರಾಯ ಬರುತ್ತೆ ಅಷ್ಟ್ರಲ್ಲಿ ಈತ ಟ್ರಾನ್ಸ್ಫರ್ ಕೂಡ ಆಗ್ತಾನೆ. ಟ್ರಾನ್ಸ್ಫರ್ ಆಗಿ ಹೊನ್ನಾಳಿ ಬ್ರಾಂಚ್ ಗೆ ಒಂದು ವರೆ ವರ್ಷ ಕೆಲಸ ಮಾಡ್ಲಿಕ್ಕೆ ಎಂದು ಹೋಗ್ತಾನೆ ಅಲ್ಲೂ ಕೂಡ ಇದೆ ರೀತಿ ವ್ಯತ್ಯಾಸಕೂಡ ಇರುತ್ತೆ, ಆದರೆ ಆಕೆ ನೀನು ನನ್ನ ಮಾಡುವೆ ಆಗ್ಬೇಕು ಎಂದು ಹಿಂದೆ ಬಿದ್ದಿರುತ್ತಾಳೆ ಎಂದು ಆರೋಪಿ ಹೇಳಿರುತ್ತಾನೆ,
ಏಳೆಂಟು ತಿಂಗಳ ಕೆಳಗೆ ಸಾಗರ ಭಾರತ್ ಫೈನಾನ್ಸ್ ಬ್ರಾಂಚ್ ಗೆ ಟ್ರಾನ್ಸ್ಫರ್ ಕೂಡ ಆಗಿರುತ್ತಾನೆ, ಇಲ್ಲಿ ಕೆಲಸ ಮಾಡಿಕೊಂಡು ಇರ್ತಾನೆ, ಆದಾಗಿಯೂ ಸಹ ಇವರ relationship ಮುಂದುವರೀತ ಇರುತ್ತೆ. ಆಮೇಲೆ ಕೂಡ ಆಕೆ ಕೊಪ್ಪದಿಂದ ಹೊನ್ನಳಿಗೆ ಹೋಗೋದು ಅದುಕು ಮುನ್ನ ತೀರ್ಥಹಳ್ಳಿಗೆ ಬರೋದು ಈಗ ಸಾಗರಕ್ಕೆ ಬರೋದು ಅವಾಗವಾಗ ಬಂದು ಹೋಗೋದು ಮಾಡ್ತಾ ಇರ್ತಾರೆ. ಇತ್ತೀಚೆಗೆ ಸಹ ಅಂದರೆ ಜೂನ್ ೩೦ ನೇ ತಾರೀಕು ಕೂಡ ಈಕೆ ಕೊಪ್ಪದಿಂದ ಈತ ಕೆಲಸ ಮಾಡುವ ಜಾಗ ಸಾಗರಕ್ಕೆ ಬಂದು ಹೋಗಿರುತ್ತಾರೆ, ಬಂದು ಹೋದಾಗ ನನ್ನನ್ನು ಮದುವೆಯಾಗಬೇಕು ನೀನು ಎಂದು ಹೇಳಿರುತ್ತಾಳೆ.
ಅಷ್ಟರಲ್ಲೇ ಈತನಿಗೆ ಇನ್ನೊಂದು ಹುಡುಗೇ ಜೊತೆ ಸಲಿಗೆ ಇಂದ ಕೂಡ ಬೆಳೆಯುತ್ತೆ, ಅದು ಕೂಡ ಆಕೆಗೆ ಗೊತ್ತಾದಾಗ ನೀನು ನನ್ನನ್ನ ಮದುವೆಯಾಗಲೇ ಬೇಕು ಎಂದು ಹೇಳಿರುತ್ತಾಳೆ. ಅದಾದ ನಂತರ ಈತನಿಗೆ ಕೂಡ ಹತಾಶೆ ಇರುತ್ತೆ. ಜೂನ್ 30 ಬಂದು ಹೋದ ನಂತರ ಜುಲೈ 2 ನೇ ತಾರೀಕು ಸುಮಾರು 12. 12.30 ಅಷ್ಟರ ಸುಮಾರಿನ ಸಮಯದಲ್ಲಿ ಈಕೆ ಮತ್ತೆ ಸಾಗರಕ್ಕೆ ಬಂದು ಅವನನ್ನ ಬೇಟೆ ಯಾಗುವ ಪ್ರಯತ್ನ ಮಾಡ್ತಾಳೆ, ಭೇಟಿ ಆದಾಗಲೂ ಕೂಡ ನಾನು ಕೆಲಸ ಮಾಡ್ತಾ ಇರ್ತೀನಿ ಆಮೇಲೆ ಸಿಗ್ತೀನಿ ಅಂತ ಹೇಳಿ ಕಳುಹಿಸಿರುತ್ತಾನೆ ಆದರೆ ಈಕೆ ಹೋಗೋದಿಲ್ಲ ನಿನ್ನ ಬ್ರಾಂಚ್ ಹತ್ರ ಬಂದು ಗಲಾಟೆ ಮಾಡ್ತೀನಿ ಅಂತ ಹೇಳಿರುತ್ತಾಳೆ, ಆಮೇಲೆ ಅವ್ನು ಮೂರು ಮೂವತ್ತು ಕಾದಿಕೊಂಡು ಇದ್ದು ನಾನೇನೇ ನಿನ್ನ ವಾಪಸ್ ಕರ್ಕೊಂಡು ಹೋಗ್ತೀನಿ ನಿನ್ನ ವಾಪಸ್ಗೆ ಎಂದು ಹೇಳಿ ಅವನದ್ದು ಒಂದು 2 ವೀಲರ್ ಇರುತ್ತೆ, TVS ಅಪಾಚಿ ಗಾಡಿ ಇರುತ್ತೆ ಅದ್ರಲ್ಲಿ ನಾನು ನಿನ್ನನ್ನ ಕರ್ಕೊಂಡು ಹೊರ್ತಿನಿ ಅಂತ ಹೇಳಿ ಕರ್ಕೊಂಡು ಕರ್ಕೊಂಡು ಸಾಗರದಿಂದ ಹೊರಡ್ತಾನೆ.
ಹೋರಟ ನಂತರ ರಿಪ್ಪನ್ ಪೇಟೆ ಹತ್ರ ನೀನು ಬಸ್ ಹತ್ಕೊಂಡು ಹೋಗು ಅಂತ ಹೇಳಿರುತ್ತಾನೆ ಆದ್ರೆ ಆಕೆ ಒಪ್ಪಿರೋದಿಲ್ಲ ಸಾಗರ ಕ್ಕೆ ಬರ್ತೀನಿ ವಾಪಸ್ ಅಂದು ಹೇಳ್ತಾರೆ, ಗಾಡೀಲಿ ಬರ್ತಾ ಇರ್ಬೇಕಾದ್ರು ಕೂಡ ಗಾಡೀಲಿ ಕಿತ್ತಾಟ, ವಾಗ್ವಾದ ಮಾಡ್ಕೊಂಡೆ ಬರ್ತಾರೆ, ತೀರ್ಥ ಹಳ್ಳಿ ವ್ಯಾಪ್ತಿಯಲ್ಲಿ ಬರುವ ಹೆದ್ದಾರಿಪುರ ಬಳಿ ಅವ್ನು ಒಂದ್ಸಲ ಇಳ್ಸ್ತಾನೆ, ಇಲ್ಲ ನೀನು ಇಲ್ಲಿಂದಲೇ ಬಸ್ ಹತ್ತ್ಕೊಂಡು ಹೋಗು ಯಾವುದೇ ಕಾರಣಕ್ಕೆ ಸಾಗರಕ್ಕೆ ಬರ್ಬೇಡ ಸ್ವಲ್ಪ ಟೈಮ್ ಕೊಡು ಆರು ತಿಂಗಳು ಒಂದು ವರ್ಷ ಟೈಮ್ ಕೊಡು ಅಂತ ಅನಂತರ ಬೇಕಿದ್ರೆ ನಾವು ಯೋಚನೆ ಮಾಡೋಣ ಅಂತೆ ಮದುವೆ ಬಗ್ಗೆ ಅಂತ ಹೇಳಿರುತ್ತಾನೆ.
ಹುಡುಗಿ ಒಪ್ಪಿರೋದಿಲ್ಲ, ಈ ವಿಚಾರದ ಕುರಿತು 2 ಕುಟುಂಬಗಳಿಗೂ ಗೊತ್ತಿರುತ್ತೆ, ನನಗೆ ಸ್ವಲ್ಪ ಕಮಿಟ್ಮೆಂಟ್ ಇದೆ ಒಂದೆರಡು ವರ್ಷ ಬೇಕು ಅಂತ ಹೇಳಿರುತ್ತಾನೆ, ಈತನ ಅಕ್ಕ ಮತ್ತು ತಾಯಿಗೆ ಪ್ರೀತಿಯ ವಿಚಾರ ಗೊತ್ತಿರುತ್ತೆ, ಅನಂತರ ಹೆದ್ದಾರಿಪುರ ಇಳ್ಕೊಂಡು ಹೋಗು ಅಂದಿದ್ದಕ್ಕೆ ಆಕೆ ಹೋಗಿರೋದಿಲ್ಲ ಸಾಗರ ರೋಡ್ ಗೆ ಒಂದು ಅರ್ಧ ಮುಕ್ಕಾಲು ಕಿಲೋ ಮೀಟರ್ ನಷ್ಟು ನಡ್ಕೊಂಡು ಬರ್ತಾಳೆ, ವಾಪಸ್ ಬಂದಾಗ ಈತನು ಕೂಡ ಫಾಲೋ ಮಾಡ್ಕೊಂಡು ಬರ್ತಾನೆ ಅಲ್ಲಿ Heated argument ಸಹ ಆಗುತ್ತೆ. ಅದು ಸ್ವಲ್ಪ ನಿರ್ಜನ ಪ್ರದೇಶವಾಗಿರುತ್ತೆ.
ಅಲ್ಲಿ ಆತ ಕುತ್ತಿಗೆಗೆ ಮುಸ್ಟೀನ ಕಟ್ಟಿ ಆಕೆಯ ಕೈಯನ್ನ ಹಿಂದಿಂದ ಎಳೆದು ಕುತ್ತಿಗೆಗೆ ಮುಷ್ಟಿ ಕಟ್ಟಿ ಹೊಡೆದಿರುತ್ತಾನೆ, ಹೊಡಿದಿದ್ದ ತಕ್ಷಣ ಆಕೆ ಮೂರ್ಛೆ ಬಂದಹಾಗೆ ಆಗುತ್ತೆ ಹಾಗೆ ಅಲ್ಲೇ ಹತ್ತು ಇಪ್ಪತ್ತು ಮೀಟರ್ ಗೆ ಕಾಡಿರುತ್ತೇ ಅಲ್ಲಿಗೆ ಆಕೆಯನ್ನ ಎಳ್ಕೊಂಡು ಹೋಗ್ತಾನೆ ಅಲ್ಲಿ ಆಕೆಗೆ ಸ್ವಲ್ಪ ಪ್ರಜ್ಞೆ ಬರುತ್ತೆ ಮತ್ತು ಮಾತಾನಾಡಲಿಕ್ಕೆ ಶುರು ಮಾಡ್ತಾಳೆ, ಅಷ್ಟು ವಾಯ್ಸ್ ಜೋರಾಗಿ ಬರ್ತಾ ಇರೋಲ್ಲ ಎಂದು ಆರೋಪಿ ಹೇಳ್ತಾ ಇದಾನೆ, ಅದಾದ ಮೇಲೆ ಕೈಯಿಂದ ಕುತ್ತಿಗೆಯನ್ನ ಹಿಸುಕುತ್ತಾನೆ, ಆಗ ಆಕೆ ಪಿಡ್ಸ್ ಬಂದವರ ತರ ಆಡ್ತಾಳೆ ಆಕೆ. ಅದಾದ ಮೇಲೆ ಮತ್ತೆ ನಿಂತುಕೊಂಡು ಇದು ಆಗ್ತಾ ಇಲ್ಲ ಎಂದು ಕಾಲಲ್ಲಿ ಆಕೆಯ ಕುತ್ತಿಗೆ ಮೇಲೆ ಇಟ್ತು ಪ್ರಾಣ ಹೋಗುವ ತನಕ ತುಳಿದು ಆಕೆಯ ಕೊಲೆ ಮಾಡ್ತಾನೆ.
ಕೊಲೆ ಮಾಡಿ ಅಲ್ಲೆ ಮೃತ ದೇಹವನ್ನ ಸರಿಸಿ, ಅವನು ವಾಪಸ್ ಬ್ಯಾಂಕ್ ಗೆ ಬರ್ತಾನೆ, ಅವತ್ತಿನ ಕಲೆಕ್ಷನ್ ದು ಸುಮಾರು 1 ಲಕ್ಷ ಹಣವನ್ನ ಬ್ಯಾಂಕ್ ಗೆ ಡೆಪಾಸಿಟ್ ಮಾಡಿ ನಂತರ ಅವನ ಬಳಿ ಒಂದು ಕಾರು ಇರುತ್ತೆ ಆ ಕಾರಣ ತಗೊಂಡು ಬಂದು ಆ ಬಾಡಿ ಎಲ್ಲಿ ಹಾಕಿರ್ತಾನೆ ಅಲ್ಲಿಗೆ ಬಂದು ಬಾಡಿ ನ ಇವನ ಕಾರಿನ ಡಿಕ್ಕಿಗೆ ಹಾಕಿಕೊಂಡು ಆನಂದಪುರ ರೈಲೇ ಟ್ರ್ಯಾಕ್ ಬಳಿ ಬಂದು ಇಲ್ಲಿ ಜೆಜೆಎಂ ದು ಟ್ರಂಚ್ ಹೊಡೆದಿರುತ್ತಾರೆ ಇದರ ಒಳಗಡೆ ಮೃತದೇಹ ಹಾಕಿ ಪಕ್ಕದಲ್ಲೇ ಇರುವಂತಹ ಜಲ್ಲಿ ಮತ್ತೆ ಮಣ್ಣನ್ನ ಹಾಕಿ ಮುಚ್ಚಿ ಅವನ ಪಾಡಿಗೆ ಅವ್ನು ಹೊರಟು ಹೋಗ್ತಾನೆ.
20 ದಿನಗಳ ವರೆಗೆ ಇದು ಏನಾಗಿತ್ತು ಏನು ಎಂದು ತಿಳಿದಿರೋದಿಲ್ಲ, ಕೊಪ್ಪ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಒಂದು ಮಿಸ್ಸಿಂಗ್ ಕಂಪ್ಲೇಂಟ್ ಒಂದು ರಿಜಿಸ್ಟರ್ ಆಗಿರುತ್ತೆ . ಅನಂತ ಅವರು ಕೂಡ ವಿಚಾರಣೆ ಮಾಡಿ ನೋಡಲಾಗಿ ಹಾಗು ಸ್ವಲ್ಪ್ ಟೆಕ್ನಿಕಲ್ ಡಾಟಾ ಕೂಡ ಹೆಲ್ಪ್ ಆಗುತ್ತೆ, ಲಾಸ್ಟ ಕಾಲ್ ಮಾಡಿದ್ದೂ ನಂಬರ್ ಇವನದ್ದು ಆಗಿರುತ್ತೆ ಹಾಗಾಗಿ ಕರೆದು ವಿಚಾರಣೆಗೆ ಕರೆಸಿದಾಗ ತಪ್ಪನ ಒಪ್ಪಿಕೊಂಡ. ಇವರಿಬ್ಬರ ನಡುವೆ ಹಣಕಾಸಿನ ವ್ಯವಹಾರ ಕೂಡ ಇರುತ್ತೆ. ಆಕೆ ಅವತ್ತು ಈತನಿಗಾಗಿ ಒಂದು ಹೆಡ್ಫೋನ್ ನ ಸಹ ಗಿಫ್ಟ್ ಆಗಿ ತಂದಿರುತ್ತಾಳೆ, ಆರೋಪಿ ಇದನ್ನ ನಾನು ಇಸ್ಕೊಳೋದಿಲ್ಲ ಅಂತ ಹೇಳ್ತಾನೆ ಅದಕ್ಕೆ ಆಕೆ ಇಸ್ಕೊಳ್ಳಲೇ ಬೇಕು ಅಂತ ಹೇಳಿ ಕಾರಿನೊಳಗೆ ಬಿಸಾಡಿ ಮುಂದೆ ಹೋಗಿರುತ್ತಾಳೆ.
– ಎಸ್ ಪಿ ಮಿಥುನ್
Soumya Love Case,Sowmya Murder Case, Shivamogga Murder, Hosanagara Murder Case, Shivamogga Love Case, Srujan Case, Sagara Murder Case. Anandapura Love Incident, Anandapura Love Incident, Man Kills His Lover In Shimoga.