ಹೊಸನಗರ : ಶಿವಮೊಗ್ಗ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಗೀತಾ ಶಿವರಾಜಕುಮಾರ್ ಅವರು ನಿನ್ನೆ (20 March) ತಮ್ಮ ಪ್ರಚಾರ ಪ್ರಾರಂಭಿಸಿದ್ದಾರೆ. ಶಿವಮೊಗ್ಗ ಜಿಲ್ಲೆಯ ಕಾರೇಹಳ್ಳಿ ಇಂದ ಗೀತಾ ಶಿವರಾಜಕುಮಾರ್, ನಟ ಶಿವರಾಜ್ ಕುಮಾರ್ ಹಾಗೂ ಸಚಿವ ಮಧು ಬಂಗಾರಪ್ಪ ಹಾಗೂ ಅನೇಕ ಕಾಂಗ್ರೆಸ್ ಪಕ್ಷದ ಪ್ರಮುಖರು ರ‍್ಯಾಲಿಯಲ್ಲಿ ಪಾಲ್ಗೊಂಡಿದ್ದರು. ನಂತರ ಶಿವಮೊಗ್ಗದಲ್ಲಿ ಆಯೋಜಿಸಿದ್ದ ಸಭೆಯನ್ನು ಮುಗಿಸಿ ಕೊಲ್ಲೂರಿನ ಕಡೆ ಪಯಣ ಮುಂದುವರಿಸಿದರು.
ರಿಪ್ಪನಪೇಟೆಯಲ್ಲಿ ಚುರುಮುರಿ ಸವಿದ ಶಿವಣ್ಣಶಿವಣ್ಣ ದಂಪತಿ
ಮಾರ್ಗ ಮಧ್ಯದ ರಿಪ್ಪನ್ ಪೇಟೆ ಬೃಂದಾವನ ಕ್ಯಾಂಟೀನ್ ನಲ್ಲಿ ಶಿವರಾಜ್ಕುಮಾರ್ದಂಪತಿ ಚುರುಮುರಿ ಸವಿದರು. ನೆಚ್ಚಿನ ನಟನನ್ನು ನೆರೆದಿದ್ದ ಅಭಿಮಾನಿಗಳು ಕಣ್ತುಂಬಿಕೊಂಡರು.
ಹೊಸನಗರ ಕಾಂಗ್ರೇಸ್ ಪಕ್ಷದ ಕಾರ್ಯಕರ್ತರರನ್ನ ಅಭಿಮಾನಿಗಳನ್ನ ಬೇಟಿ ಮಾಡಿದ ನಟ ಶಿವಣ್ಣ
ಗೀತಾ ಶಿವರಾಜಕುಮಾರ್ ಹಾಗೂ ನಟ ಶಿವರಾಜಕುಮಾರ್ ಜೊತೆಗೆ ಶಾಸಕರಾದ ಬೇಳೂರು ಗೋಪಾಲಕೃಷ್ಣರವರು ರಿಪ್ಪನ್ ಪೇಟೆ ಬೇಟಿ ನಂತರ ಸರಿ ಸುಮಾರು 9.15ಕ್ಕೆ ಹೊಸನಗರದ ಬಸ್ ಸ್ಟಾಂಡ್ ಮುಂಭಾಗಕ್ಕೆ ಬಂದಿಳಿದ ತಕ್ಷಣ ಶಿವಣ್ಣ ಪರ ಜೈಕಾರ ಕೇಳಿ ಬಂದವು ಹಾಗೆ ಕಾಂಗ್ರೆಸ್ ಪಕ್ಷದ ಪ್ರಮುಖರು ಹಾಗೂ ಅನೇಕ ಅಭಿಮಾನಿಗಳು ಶಿವಣ್ಣನನ್ನು ನೋಡಲು ಮುಗಿಬಿದ್ದರು.
ನಿಮ್ಮ ಅಭಿಪ್ರಾಯವನ್ನು ಮುಕ್ತವಾಗಿ ಕಾಮೆಂಟ್ ಬಾಕ್ಸ್ನಲ್ಲಿ ತಿಳಿಸಿ