School Fest : ಗುರೂಜಿ ಶಾಲೆಯ ಹಲಸಿನ ಹಬ್ಬಕ್ಕೆ ಜನಸಾಗರ. ಜನರಿಗೆ ಹಲಸಿನ ಮೌಲ್ಯದ ಬಗ್ಗೆ ತಿಳಿಹೇಳಬೇಕು : ವೃತ್ತನಿರೀಕ್ಷಕರಾದ ಗುರುವಣ್ಣ ಹೆಬ್ಬಾಳ್ಕರ್

School Fest,SSLC Result,Hosanagara,Guruji International School Hosanagara,Shivamogga,Malenadu SSLC Results,Sri Guruji  International Residential School. Hosanagara 

                                                       Crowds for Guruji School’s Food Festival

ಹೊಸನಗರ : ಜನರಿಗೆ ಹಲಸಿನ ಮೌಲ್ಯವರ್ದನೆ ಮಾಡುವ ಬಗ್ಗೆ ನಿರಾಶಕ್ತಿಯ ಮನೋಭಾವ ಇದೆ ಅದನ್ನು ಬದಲಾಯಿಸಬೇಕು  ಎಂದು ವೃತ್ತನಿರೀಕ್ಷಕರಾದ ಗುರುವಣ್ಣ ಹೆಬ್ಬಾಳ್ಕರ್ ಹೇಳಿದರು ಪಟ್ಟಣದ ಹೆಸರಾಂತ  ಖಾಸಗಿ ಶಿಕ್ಷಣ ಸಂಸ್ಥೆಯಾದ ಶ್ರೀ ಗುರೂಜಿ ಇಂಟರ್ ನ್ಯಾಶನಲ್ ರೆಶಿಡೆನ್ಶಿಯಲ್ ಸ್ಕೂಲ್ ಆವರಣದಲ್ಲಿ ಏರ್ಪಡಿಸಿ ಹಲಸಿನ‌ಹಬ್ಬ ಕಾರ್ಯಕ್ರಮ ವನ್ನು ಉದ್ಘಾಟಿಸಿ ಮಾತನಾಡಿದ ಅವರು

School Fest

ಹಲಸಿನ‌ಹಣ್ಣಿನ ಮೌಲ್ಯದ ಬಗ್ಗೆ ಮಾಹಿತಿ ನೀಡಲು ಒಂದು ತರಬೇತಿ ಶಿಬಿರವನ್ನು ಏರ್ಪಡಿಸುವುದು  ಉತ್ತಮ ಎಂದು ಸಲಹೆ ನೀಡಿದರು. ವಿವಿದ ರೀತಿಯ ಹಲಸಿನ‌ ಬೆಳೆಯನ್ನಬೆಳೆದು ಅದರಿಂದ  ಮಾಡುವ ವಿವಿಧ ಖಾದ್ಯಗಳಿಂದ ಉತ್ತಮ ಲಾಭಗಳಿಸಬಹುದು  ಎಂದು ಹೇಳಿದರು.

School Fest

ಚರ್ಮರೋಗ ತಜ್ಞ ರು ಹಾಗು ಹಿರಿಯ ತಾಲ್ಲೂಕು ವೈಧ್ಯದಿಕಾರಿಯಾದ  ಡಾ:ಗುರುಮೂರ್ತಿ ಮಾತನಾಡಿ  ಪಟ್ಟಣದ ಮಕ್ಕಳಿಗೆ ಗಿಡ ಮರಬೆಳಸುವ ಅವಕಾಶ ಇರುವುದಿಲ್ಲ  ಆದರೆ ಮಲೆನಾಡಿನ ಮಕ್ಕಳಿಗೆ ಅವೆಲ್ಲವುದರ ಅವಕಾಶ ಇದೆ ಹಾಗು ಪರಿಸರ ಕಾಳಜಿ ಮಾಡುವಂತ ಪುಣ್ಯದ ಕೆಲಸ ಸಿಕ್ಕಂತಾಗುತ್ತದೆ  ಎಂದರಲ್ಲದೆ ಇಂದು ಮಕ್ಕಳು‌ ತಯಾರುಮಾಡಿಕೊಂಡು ಬಂದಿರುವ  ವಿವಿದ ಖಾದ್ಯಗಳು ಉತ್ತಮವಾಗಿದ್ದು ಹಾಗು ವಿಶೇಷತೆಯಿಂದ ಕೂಡಿದೆ  ಎಂದರು.ತತ್ವ ಶಾಸ್ತ್ರಜ್ಞರಾದ ಅಶೋಕ್ ಕುಮಾರ್ ಮಾತನಾಡಿ  ಎಳೆಯ ಹಲಸಿನ ಕಾಯಿಯಲ್ಲಿ  ಮಾಂಸದಲ್ಲಿರುವ ಪೋಷಕಾಂಶಗಳು ಇರುತ್ತದೆ  ಎಂದರು.

                                            ವಿವಿದ ರೀತಿಯ ಖಾದ್ಯಗಳು : School Fest

ಹಲಸಿನ‌ ಹಬ್ಬದಲ್ಲಿ ಸುಮಾರು  189 ಸ್ಟಾಲ್ ಗಳಲ್ಲಿ  48ಬಗೆಯ ವಿವಿದರೀತಿಯ ಖಾದ್ಯಗಳನ್ನು ವಿದ್ಯಾರ್ಥಿಗಳು ಮಾಡಿಕೊಂಡು ಬಂದಿದ್ದು ಕೇವಲ 1ಗಂಟೆಗಳಲ್ಲಿ ಖಾಲಿಯಾಗಿದ್ದು ವಿಷೇಶವಾಗಿತ್ತು .

School Fest
School Fest

ಅತಿಹೆಚ್ಚು ಬೇಡಿಕೆಯಾದ ತಿನಿಸುಗಳು :  ಹಲಸಿನ ಹಣ್ಣಿನ ಉಪ್ಪಿನಕಾಯಿ,ಗೊಲುಗುಪ್ಪ,ಹಲಸಿನ  ಸಲಾಡ್,ಹಪ್ಪಳ,ಹೋಳಿಗೆ ,ಚಟ್ನಿಪುಡಿ,  ಅತಿಹೆಚ್ಚು ಬೇಡಿಕೆಯಾದವು. ಕಾರ್ಯಕ್ರಮದಲ್ಲಿ ಗುರೂಜಿಶಾಲೆಯ ಕಾರ್ಯದರ್ಶಿಗಳಾದ ಶಾಂತಮೂರ್ತಿ .ಉಪಾಧ್ಯಕ್ಷ ರಾದ ಸದಾಶಿವ ಶ್ರೇಷ್ಠಿ ,ನಿರ್ದೆಶಕಾರದ ನಾಗೇಶ್ ಎನ್ ಆರ್ , ನಿವೃತ್ತಗಣಿತಶಿಕ್ಷಕರಾದ ರಾಮ್ ಭಟ್ ಸರ್ ಉಪಸ್ಥಿತಿ ಇದ್ದರು.

      ಶ್ರೀಮತಿ ಸುಮಲತ ಸ್ವಾಗತಿಸಿ ಕುಮಾರಿ ಶುಸ್ಮ  ನಿರೂಪಿಸಿ ಶ್ರೀಮತಿ ಕುಸುಮಶ್ರಿ ವಂದಿಸಿದರು.

Hosanagara News
Hosanagara News

School Fest,SSLC Result,Hosanagara,Guruji International School Hosanagara,Shivamogga,Malenadu SSLC Results,Sri Guruji  International Residential School. Hosanagara 

Leave a Reply

Your email address will not be published. Required fields are marked *