Road Safety : ಹೊಸನಗರ ಪೊಲೀಸ್ ಠಾಣೆ ಆವರಣದಲ್ಲಿ ರಸ್ತೆ ಸುರಕ್ಷತಾ ಸಪ್ತಾಹ ಕಾರ್ಯಕ್ರಮ

Hosanagara, Police Station, Road Safety.

                                                    Road safety

ಹೊಸನಗರ : ದಿನಾಂಕ 2 .2 .2025  ಭಾನುವಾರ ಹೊಸನಗರ ಪೊಲೀಸ್ ಠಾಣೆ ಆವರಣದಲ್ಲಿ  ರಸ್ತೆ ಸುರಕ್ಷತಾ ಸಪ್ತಾಹ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು..

ಈ ಕಾರ್ಯಕ್ರಮವನ್ನ  ಉದ್ದೇಶಿಸಿ ಮಾತನಾಡಿದ ಹೊಸನಗರದ ಜೆ.ಎಂ.ಎಫ್.ಸಿ ನ್ಯಾಯಾಲಯದ ಹಿರಿಯ ವ್ಯವಹಾರ ನ್ಯಾಯಾಧೀಶರಾದ ಫಾರೂಖ ಝಾರೆ  ಅವರು ರಸ್ತೆ ನಿಯಮವನ್ನ  ಪಾಲಿಸುವುದು ಕಡ್ಡಾಯವಾಗಿದೆ ಹಾಗು ಸುರಕ್ಷತೆಯಿಂದ ಪ್ರಯಾಣಿಸುವುದು ಬಹು ಮುಖ್ಯವಾಗಿದೆ.  

ಇತ್ತೀಚೆಗೆ ಮೊಬೈಲ್ ಬಳಸಿ ವಾಹನ ಚಲಾವಣೆ ಹೆಚ್ಚಾಗುತ್ತಿದೆ ಇದನ್ನ ನಾವು ಸಾಮಾಜಿಕ ಜಾಲತಾಣಗಳ ಮೂಲಕ ನೋಡಬಹುದು ಇದನ್ನು ಕಡ್ಡಾಯವಾಗಿ ನಿಲ್ಲಸಬೇಕಾಗಿದೆ ಎಂದು ನೆರೆದಿದ್ದ ವಾಹನ ಸವಾರರು ಹಾಗು ಸಾರ್ವಜನಿಕರಿಗೆ ತಿಳಿಸಿದರು ಹಾಗು ಹೊಸನಗರಕ್ಕೆ ಹೈ ಡೆಫಿನೇಷನ್ ಕ್ಯಾಮೆರಾಗಳ ಅಗತ್ಯೆಯ ಕುರಿತು ಕೂಡ ಮಾತನಾಡಿದರು.

ನಂತರದಲ್ಲಿ ಕಡ್ಡಾಯ ಹೆಲ್ಮೆಟ್ ಕುರಿತ ಬೈಕ್ ಚಾಲನೆ ಜಾತಕ್ಕೆ ಚಾಲನೆಯನ್ನು ನೀಡಿದರು ಈ ಸಪ್ತಹ ಕಾರ್ಯಕ್ರಮದಲ್ಲಿ ಹೊಸನಗರ  ಜೆ.ಎಂ.ಎಫ್.ಸಿ  ಪ್ರಧಾನ ವ್ಯವಹಾರ ನ್ಯಾಯಾಧೀಶರಾದ ಮಾರುತಿ ಶಿಂಧೆ, ವೃತ್ತ ನಿರೀಕ್ಷಕರಾದ ಗುರಣ್ಣ ಹೆಬ್ಬಾರ್, ಹೊಸನಗರ ಪೊಲೀಸ್ ಠಾಣೆ ಸಬ್ ಇನ್ಸ್ಪೆಕ್ಟರ್ ಶಂಕರ್ ಗೌಡ ಪಾಟೀಲ್, ಜಾಗೃತಿ ನಾಮಫಲಕ ದಾನಿಗಳಾದ ಶ್ರೀನಿವಾಸ್, ವಿಜೇಂದ್ರ ಸೇಟ್, ಉಪಸ್ಥಿತರಿದ್ದರು ಪೊಲೀಸ್ ಠಾಣಾ ಸಿಬ್ಬಂದಿ ಸಿಬ್ಬಂದಿ ವೆಂಕಟೇಶ್ ಕಾರ್ಯಕ್ರಮವನ್ನು ನಿರೂಪಿಸಿ ವಂದಿಸಿದರು…

 

Hosanagara, Police Station, Road Safety.

ಇದನ್ನೂ ಓದಿ: Shivamogga Murder Case : ಆಧುನಿಕ ಪ್ರೀತಿಯ ಕೊಲೆ ಕಹಾನಿ

Hosanagara News
Hosanagara News

Leave a Reply

Your email address will not be published. Required fields are marked *