Table of Contents
ToggleNitturu Hospital, Hosanagara, Nagara,2023, Medicine,
“Intentionally Some allegation Has Been Posted Regarding Hospital Medicine : MLA Beluru Gopala Krishna”
Nitturu Hospital
ಹೊಸನಗರ: ತಾಲೂಕಿನ ನಿಟ್ಟೂರು ಸರ್ಕಾರಿ ಆಸ್ಪತ್ರೆಯಲ್ಲಿ ಅವಧಿ ಮುಗಿದ ಔಷಧಿಗಳನ್ನ ರೋಗಿಗಳಿಗೆ ನೀಡಲಾಗಿದೆ ಮತ್ತು ವೈದ್ಯರ ವಿರುದ್ಧ ಕೆಲವು ಗ್ರಾಮದ ಮುಖಂಡರು ಗಂಭೀರವಾದ ಆರೋಪವನ್ನು ಮಾಡಿದ್ದು ಅದಕ್ಕೆ ಸಂಬಂಧಿಸಿದಂತೆ ವಿಡಿಯೋ ಹಾಗೂ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ಪತ್ರಿಕೆಗಳ ಮೂಲಕ ಪ್ರಕಟಿಸಲಾಗಿತ್ತು.
ಈ ಕುರಿತು ಪರ ಮತ್ತು ವಿರೋಧ ಚರ್ಚೆ ನಡುವೆ ಶಾಸಕ ಗೋಪಾಲ ಕೃಷ್ಣ ಬೇಳೂರು ಅಧಿಕಾರಿಗಳೊಂದಿಗೆ ಆಸ್ಪತ್ರೆಗೆ ಭೇಟಿ ನೀಡಿ ಪ್ರಕರಣ ಕುರಿತು ಮಾಹಿತಿಯನ್ನ ಪಡೆದರು.
ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು ಆಸ್ಪತ್ರೆ ಹಾಗೂ ಇಲ್ಲಿನ ವೈದ್ಯರ ವಿರುದ್ಧ ಕೆಲ ಸ್ಥಳೀಯ ಮುಖಂಡರುಗಳು ಮಾಡಿರುವ ಆರೋಪ ದುರುದ್ದೇಶದಿಂದ ಕೂಡಿದ್ದು ಆಸ್ಪತ್ರೆಯಲ್ಲಿ ಅವಧಿ ಮುಗಿದ ಔಷಧಿಗಳು ಇದ್ದದ್ದು ನಿಜ ಆದರೆ ಅದನ್ನು ವೈದ್ಯರಾಗಲಿ ಅಥವಾ ಇಲ್ಲಿಂದ ಸಿಬ್ಬಂದಿಯಾಗಲಿ ಬಿಸಾಡುವಂತಿಲ್ಲ ಆಸ್ಪತ್ರೆಗೆ ಔಷಧಿಯನ್ನ ನೀಡುವಂತ ಕಂಪನಿಗಳೇ ಅದನ್ನ ವಾಪಸ್ ತೆಗೆದುಕೊಂಡು ಹೋಗುತ್ತಾರೆ ಅಂತಹ ಔಷಧಿಗಳು ಆಸ್ಪತ್ರೆಯಲ್ಲಿದ್ದವು ಹಾಗೆ ವೈದ್ಯರು ರೋಗಿಗಳಿಗೆ ಸರಿಯಾದ ಚಿಕಿತ್ಸೆಯನ್ನು ನೀಡುತ್ತಿಲ್ಲ ಎಂದು ಆರೋಪವಿದ್ದು ಅದು ಸಹ ಸ್ಥಳೀಯರು ಹಾಗು ಇಲ್ಲಿರುವಂತಹ ರೋಗಿಗಳು ಅಲ್ಲಗಳಿದಿದ್ದಾರೆ ವೈದ್ಯರು ಉತ್ತಮ ಸೇವೆಯನ್ನು ನೀಡುತ್ತಿರುವದಾಗಿ ಹೇಳಿದ್ದಾರೆ ಅಂತೇ ಅವರನ್ನೇ ಮುಂದುವರಿಸಬೇಕಾಗಿ ಕೋರಿಕೊಂಡಿದ್ದಾರೆ ಚಿಕಿತ್ಸೆಗಾಗಿ ತಮ್ಮ ವೈಯಕ್ತಿಕ ಹಣದಿಂದ ಕೆಲವೊಂದು ವೈದ್ಯಕೀಯ ಸಲಕರಣೆಗಳನ್ನು ಸಹ ಇಲ್ಲಿನ ವೈದ್ಯರು ಖರೀದಿಸಿ ಆಸ್ಪತ್ರೆಗೆ ತಂದಿದ್ದಾರೆ ಇದು ಅವರ ಈ ಭಾಗದ ಜನರ ಮೇಲಿರುವ ಕಾಳಜಿಯ ಕುರಿತು ತೋರುತ್ತದೆ.
ಕೆಲ ಕುಹಕಿಗಳು ದುರುದೇಶದಿಂದ ಈ ಆಸ್ಪತ್ರೆ ಹಾಗೂ ವೈದ್ಯರ ವಿರುದ್ಧ ಸುಳ್ಳು ಆರೋಪವನ್ನು ಮಾಡಿ ಪತ್ರಿಕೆಗಳಿಗೆ ತಪ್ಪು ಮಾಹಿತಿಯನ್ನು ನೀಡುವ ಕೆಲಸ ಇಲ್ಲಿ ಆಗಿರುವುದು ಸ್ಪಷ್ಟವಾಗಿ ಕಾಣುತ್ತಿದೆ ಹಾಗೂ ಯಾವುದೇ ಆಸ್ಪತ್ರೆ ಸಿಬ್ಬಂದಿಗಳ ಗಮನಕ್ಕೆ ಬಾರದೆ ಆಸ್ಪತ್ರೆಯ ಔಷಧಿ ಕೇಂದ್ರದ ಒಳಗೆ ಹೋಗಿ ಚಿತ್ರೀಕರಣ ಮಾಡಿರುವುದು ತಪ್ಪು ಇಂಥ ಪ್ರಕರಣ ಇನ್ನೊಮ್ಮೆ ನೆಡೆದಲ್ಲಿ ಯಾರಾದರೂ ಸಹ ಅವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದರು.
ಉತ್ತಮ ವೈದ್ಯಕೀಯ ಸೇವೆಯನ್ನು ನೀಡುತ್ತಿರುವ ಈ ಆಸ್ಪತ್ರೆ ಹಾಗು ವೈದ್ಯರಿಗೆ ಇನ್ನು ಅವಶ್ಯವಿರುವ ಅಗತ್ಯ ಸೌಲಭ್ಯವನ್ನು ಶೀಘ್ರ ಕಲ್ಪಿಸುವುದಾಗಿ ತಿಳಿಸಿದರು
ಈ ಸಂದರ್ಭದಲ್ಲಿಸಾಗರ ಉಪ ವಿಭಾಗಾಧಿಕಾರಿ ಯತೀಂದ್ರ, ಚಂದ್ರಶೇಖರ್ ನಾಯಕ್, ಉದಯ್, ಪುರುಷೋತ್ತಮ್, ರವಿ ಹೆಗಡೆ, ಜ್ಯೋತಿ, ರೇಖಾ ಸಂತೋಷ್, ಮಾಸ್ತಿ ಕಟ್ಟೆ ಸುಬ್ರಮಣ್ಯ, ಮಂಜು ಸಣ್ಣಕ್ಕಿ, ಗೋಪಿನಾಥ್, ಸುದೀಪ್, ಸ್ಥಳೀಯರು ಉಪಸ್ಥಿತರಿದ್ದರು.
– ಮನು ಸುರೇಶ್