Male Mahadeshwara tiger deaths, Tiger poisoned and killed, Chamarajanagar tiger tragedy, Death of five tigers, Government response to tiger deaths, Forest department investigation, Karnataka tiger death news, Mother tiger and cubs dead, Wildlife death due to poisoned food, Human-animal conflict, Threats to forest animals, Tigers and ecological balance, Wildlife conservation in Karnataka.
Male Mahadeshwara tiger deaths
ಚಾಮರಾಜನಗರ : ಮಲೆ ಮಹದೇಶ್ವರದಲ್ಲಿ ಐದು ಹುಲಿಗಳ ದಾರುಣ ಸಾವು: ವಿಷದಿಂದ ಕೊಲೆ ಶಂಕೆ
ಕರ್ನಾಟಕದ ಚಾಮರಾಜನಗರ ಜಿಲ್ಲೆಯ ಮಲೆ ಮಹದೇಶ್ವರ ವನ್ಯಧಾಮದಲ್ಲಿ ಐದು ಹುಲಿಗಳು ಬಲಿಯಾಗಿರುವ ಘಟನೆ ನಾಡಿನ ಜನತೆಗೆ ತಲೆ ತಗ್ಗಿಸುವಂಥ ನೋವಿನ ಸುದ್ದಿ. ಮನುಷ್ಯರು ದೇವರ ಪ್ರತಿರೂಪವಾಗಿ ಪೂಜಿಸುತ್ತಾ ಬಂದಿರುವ ಹುಲಿಗಳನ್ನೇ ವಿಷ ನೀಡಿ ಕೊಲ್ಲಲಾಗಿದೆ ಎಂಬ ವಿಷಯ ಬಹಿರಂಗವಾಗಿ ಬರುತ್ತಿರುವುದು ಸಂಕಟಕಾರಿ.
ಈ ಘಟನೆಯು ಜೂನ್ 25ರಂದು ಬೆಳಿಗ್ಗೆ ಅರಣ್ಯ ಸಿಬ್ಬಂದಿಯ ಗಸ್ತು ವೇಳೆ ಬೆಳಕಿಗೆ ಬಂದಿದೆ. ಹನೂರು ತಾಲೂಕಿನ ಶೂಘ್ಯಂ ಅರಣ್ಯ ಪ್ರದೇಶದಲ್ಲಿ ಒಂದೇ ಸ್ಥಳದಲ್ಲಿ ಐದು ಹುಲಿಗಳ ಮೃತದೇಹಗಳು ಪತ್ತೆಯಾಗಿದ್ದು, ಆ ಸ್ಥಳದಲ್ಲಿ ಹಸುವಿನ ಶವವೂ ಕಂಡು ಬಂದಿದೆ. ತಾಯಿ ಹುಲಿ ಮತ್ತು ನಾಲ್ಕು ಮರಿ ಹುಲಿಗಳು ಸತ್ತಿರುವ ದೃಶ್ಯ ಬಹಳ ಆಘಾತವನ್ನ ಉಂಟು ಮಾಡಿದೆ.

ವಿಷಪ್ರಾಸನವೇ ಹುಲಿಗಳ ಸಾವಿಗೆ ಕಾರಣ?
ಮರಣೋತ್ತರ ಪರೀಕ್ಷೆಯ ಪ್ರಾಥಮಿಕ ವರದಿ ಪ್ರಕಾರ, ಈ ಹುಲಿಗಳ ಸಾವಿಗೆ ವಿಷಪ್ರಾಶನೆಯೇ ಕಾರಣ ಎಂದು ಶಂಕಿಸಲಾಗಿದೆ. ಅರಣ್ಯ ಇಲಾಖೆಯ ಅಧಿಕಾರಿಗಳ ಪ್ರಕಾರ, ಸಾವಿಗೀಡಾದ ಹಸುವಿನ ಶವವನ್ನು ವಿಷಪೂರಿತ ಆಹಾರವಾಗಿ ಬಳಸಿ ಈ ಹುಲಿಗಳ ಕೊಲೆ ನಡೆದಿರಬಹುದೆಂಬ ಅನುಮಾನವೂ ವ್ಯಕ್ತವಾಗಿದೆ. ಮೃತ ತಾಯಿ ಹುಲಿಗೆ ಸುಮಾರು 10 ವರ್ಷ ವಯಸ್ಸಿದ್ದು, ಮರಿಗಳು ಕೇವಲ 8 ರಿಂದ 10 ತಿಂಗಳ ವಯಸ್ಸಿನವು.
ಈ ಪ್ರಕರಣದ ತನಿಖೆಗೆ ಅರಣ್ಯ ಸಚಿವ ಈಶ್ವರ ಖಂಡ್ರೆ ಅವರು ತಕ್ಷಣ ಸ್ಪಂದಿಸಿ ಉನ್ನತ ಮಟ್ಟದ ಸಮಿತಿ ರಚನೆ ಮಾಡಿದ್ದಾರೆ. ಪಿಸಿಸಿಎಫ್ ಅಧ್ಯಕ್ಷ ಬಿಪಿ ರವಿ, ಎಪಿಸಿಸಿಎಫ್ ಶ್ರೀನಿವಾಸಲು, ಸಿಸಿಎಫ್ ಹೇರಾಲಾಲ್ ಟಿ, ಪ್ರಾಣಿ ತಜ್ಞ ಡಾ. ಸಂಜಯ್ ಗುಬ್ಬಿ ಮತ್ತು ಇತರರು ತನಿಖೆಗೆ ನೇಮಕಗೊಂಡಿದ್ದಾರೆ.

ಸಾರ್ವಜನಿಕ ಆಕ್ರೋಶ – ಸರ್ಕಾರದ ಜವಾಬ್ದಾರಿ
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೂಡ ಕಠಿಣ ಕ್ರಮದ ಭರವಸೆ ನೀಡಿದ್ದು, ತಪ್ಪಿತಸ್ಥರ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಿ ಕಾನೂನಾತ್ಮಕ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಸ್ಪಷ್ಟಪಡಿಸಿದ್ದಾರೆ. ಇನ್ನು ಐದು ಜನರನ್ನು ಶಂಕಿತರನ್ನ ವಶಕ್ಕೆ ತೆಗೆದುಕೊಳ್ಳಲಾಗಿದೆ. ಈ ಪ್ರದೇಶದ ಗ್ರಾಮಸ್ಥರನ್ನೂ ವಿಚಾರಣೆ ನಡೆಸಲಾಗುತ್ತಿದೆ.
ಅರಣ್ಯ ಪ್ರಾಣಿಗಳ ಮೇಲೆ ಹೆಚ್ಚುತ್ತಿರುವ ದಾಳಿ
ಇದು ಈ ಭಾಗದಲ್ಲಿ ಮೊದಲ ಬಾರಿಗೆ ಸಂಭವಿಸುತ್ತಿರುವ ದುರ್ಘಟನೆ ಅಲ್ಲ. ಸ್ಥಳೀಯರ ಪ್ರಕಾರ ಕೆಲವು ತಿಂಗಳುಗಳ ಹಿಂದೆ ಕೊತ್ತನೂರಿನಲ್ಲಿ ಕರಡಿಯನ್ನು ಸಿಡಿಬದ್ದ ಆಹಾರದಿಂದ ಕೊಲ್ಲಲಾಗಿದೆ, ಆನೆಯ ದಂತ ಕಳ್ಳಸಾಗಣೆ ಪ್ರಕರಣವೂ ದಾಖಲಾಗಿದೆ. ಇವಿಷ್ಟೂ ಪ್ರಕರಣಗಳು ಸರ್ಕಾರದ ನಿರ್ಲಕ್ಷತೆಗೆ ಕಾರಣವಾಗಿದೆ.
ಪರಿಸರ ಸಮತೋಲನಕ್ಕೆ ಹುಲಿಗಳ ಪಾತ್ರ
ಹುಲಿ, ಅರಣ್ಯ ಮತ್ತು ಪರಿಸರದಲ್ಲಿ ಅತ್ಯಂತ ಪ್ರಮುಖ ಜೀವಿಯಾಗಿದ್ದು, ಇದೊಂದು ಜೈವಿಕ ಸರಪಳಿಯಲ್ಲಿ ಸಮತೋಲನವನ್ನು ಕಾಯುವ ಮುಖ್ಯ ಕೊಂಡಿಯಾಗಿದೆ. ಭಾರತದಲ್ಲಿ ಕೇವಲ 3,682 ಹುಲಿಗಳು ಉಳಿದಿದ್ದು, ಅದರಲ್ಲಿ 563 ಕರ್ನಾಟಕದಲ್ಲಿದೆ. ಕಳೆದ 5 ವರ್ಷಗಳಲ್ಲಿ ದೇಶದಾದ್ಯಂತ 628 ಹುಲಿಗಳು ಸಾವಿಗೀಡಾಗಿವೆ ಎಂಬುದು ಆತಂಕದ ಅಂಶವಾಗಿದೆ.
Male Mahadeshwara tiger deaths, Tiger poisoned and killed, Chamarajanagar tiger tragedy, Death of five tigers, Government response to tiger deaths, Forest department investigation, Karnataka tiger death news, Mother tiger and cubs dead, Wildlife death due to poisoned food, Human-animal conflict, Threats to forest animals, Tigers and ecological balance, Wildlife conservation in Karnataka.

