Krishi Mela Hosanagara : ಹೊಸನಗರದಲ್ಲಿ ನಾಳೆ ಗಂಗಾವತಿ ಪ್ರಾಣೇಶ್ ಅವರಿಂದ ನಗೆ ಹಬ್ಬ

Krishi Mela Hosanagara ,Hosanagara,Suggi Habba-2024, Zee Kannada ,Gangavthi Pranesh, Keelmabi Live.

ಹೊಸನಗರ : ಜೆಸಿಐ ಹೊಸನಗರ ಡೈಮಂಡ್ ಮತ್ತು ಶಿವಮೊಗ್ಗ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ವತಿಯಿಂದ ಪಟ್ಟಣದ ನೆಹರೂ ಮೈದಾನದಲ್ಲಿ ಜ.12ರ ಶುಕ್ರವಾರದಿಂದ ಆರಂಭಗೊಂಡು ಜನವರಿ 14ರ ಭಾನುವಾರದವರೆಗೆ ಮೂರು ದಿನಗಳ ಕಾಲ ರಾಜ್ಯ ಮಟ್ಟದ ಕೃಷಿ ಮೇಳವನ್ನು (Krishi Mela Hosanagara) ಆಯೋಜಿಸಲಾಗಿದೆ.

Krishimela Hosanagara

ದಿನಾಂಕ 12 -01- 2024 ಶುಕ್ರವಾರದಂದು ಆರಂಭವಾಗುವ ಈ ಕಾರ್ಯಕ್ರಮಕ್ಕೆ ತಮ್ಮ ಹಾಸ್ಯಗಳಿಂದಲೇ ವಿಶ್ವಮನ್ನಣೆಗಳಿಸಿರುವಂತಹ ಪ್ರಾಣೇಶ್(Pranesh Gangawathi) ತಂಡ ನಮ್ಮ ಹೊಸನಗರಕ್ಕೆ ಆಗಮಿಸುತ್ತಿದ್ದಾರೆ.ದಿನಾಂಕ 13-01-2024 ಶನಿವಾರ ಸಂಜೆ 5 ರಿಂದ ಶಾಖಾಹಾರಿ (Shakhahari) ತಂಡದಿಂದ ಶಾಖಾಹಾರಿ ಚಿತ್ರದ ಹಾಡುಕೂಡ ಬಿಡುಗಡೆಗೊಳ್ಳಲಿದೆ. ಹಾಗೆ ಅದೇ ದಿನ ZEE KANNADA ಸರಿಗಮಪ ವಿಜೇತ ಕಲಾವಿದರ ತಂಡದವರಿಂದ ಸಂಗೀತ ಹಾಗು ಖ್ಯಾತ ಕಲಾವಿದರಿಂದ ನೃತ್ಯ ಪ್ರದರ್ಶನ ಜರುಗಲಿದೆ.

Krishi Mela Hosanagara

ಸುಗ್ಗಿ ಹಬ್ಬಕ್ಕೆ ಅನೇಕ ಗಣ್ಯರ ಆಗಮನ…

ಈ ರಾಜ್ಯ ಮಟ್ಟದ ಮೂರುದಿನಗಳ  ನಡೆಯುವ ಕೃಷಿ ಮೇಳಕ್ಕೆ ಗಣ್ಯರಾದ  ಮಧು.ಎಸ್ ಬಂಗಾರಪ್ಪ ( ರಾಜ್ಯ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು), ಬಿ.ವೈ. ರಾಘವೇಂದ್ರ (ಸನ್ಮಾನ್ಯ ಸಂಸದರು ಶಿವಮೊಗ್ಗ)  ಡಿಸಿಸಿ ಬ್ಯಾಂಕ್ ಅಧ್ಯಕ್ಷ ಆ‌ರ್.ಎಂ. ಮಂಜುನಾಥ್ ಗೌಡ, ಸಾಗರ ಹೊಸನಗರ ತಾಲೂಕಿನ  ಶಾಸಕರಾದ  ಗೋಪಾಲಕೃಷ್ಣ ಬೇಳೂರು, ತೀರ್ಥಹಳ್ಳಿ ಕ್ಷೇತ್ರದ ಶಾಸಕರಾದ ಆರಗ ಜ್ಞಾನೇಂದ್ರ, ಡಾ. ಆರ್.ಸಿ .ಜಗದೀಶ್ (ಕುಲಪತಿಗಳು ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕಾ ವಿಶ್ವವಿದ್ಯಾಲಯ ಶಿವಮೊಗ್ಗ) ಹೆಚ್.ಹಾಲಪ್ಪ ಹರತಾಳು ( ಮಾಜಿ ಸಚಿವರು ಮತ್ತು ರಾಜ್ಯ ಬಿಜೆಪಿ ಉಪಾಧ್ಯಕ್ಷರು) ಹಾಗು ಅನೇಕ ಗಣ್ಯರು ಉಪಸ್ಥಿತಿ ತೋರಲಿದ್ದಾರೆ.

Krishi Mela Hosanagara

ನಡೆಯುವ ಎಲ್ಲ ಕಾರ್ಯಕ್ರಮಗಳಿಗೆ ಜೇಸಿಐ ಡೈಮಂಡ್ ಹೊಸನಗರದ ಅಧ್ಯಕ್ಷ ಜೆ.ಸಿ.ಮಧುಸೂದನ ನಾವಡ, ಕಾರ್ಯದರ್ಶಿ ಹಾಗೂ ಜೇಸಿಐ ಹೊಸನಗರ ಡೈಮಂಡ್‌ನ ನಿಯೋಜಿತ ಅಧ್ಯಕ್ಷ ಅರವಿಂದ ಎಸ್, ಕಾರ್ಯಕ್ರಮ ನಿರ್ದೇಶಕ ಜೆ.ಸಿ.ಸಂದೀಪ್ ಎಚ್, ಕಾರ್ಯಕ್ರಮದ ಸಂಚಾಲಕ ಜೆ.ಸಿ.ವಿನಾಯಕ ಕರಬ ಹಾಗೂ ಜೇಸಿಐ ಡೈಮಂಡ್ ಹೊಸನಗರದ ಸರ್ವ ಸದಸ್ಯರು ಸಾರ್ವಜನಿಕರು ಭಾಗವಹಿಸಲು ಹೃತ್ಪೂರ್ವಕವಾಗಿ ಆಹ್ವಾನಿಸಿದ್ದಾರೆ. ಈ  ಕಾರ್ಯಕ್ರಮಗಳ ಯಶಸ್ಸಿಗೆ ಸಹಕರಿಸಲು ನಿಮ್ಮ ಉಪಸ್ಥಿತಿಯನ್ನು ಮನಃಪೂರ್ವಕವಾಗಿ ವಿನಂತಿಸಿದ್ದಾರೆ.

Hosanagara News

One thought on “Krishi Mela Hosanagara : ಹೊಸನಗರದಲ್ಲಿ ನಾಳೆ ಗಂಗಾವತಿ ಪ್ರಾಣೇಶ್ ಅವರಿಂದ ನಗೆ ಹಬ್ಬ

Leave a Reply

Your email address will not be published. Required fields are marked *