Table of Contents
ToggleKolkata Rape and Murder Case Kolkata Doctor Case, India, Mamatha Banarji.
“Rape accused Sanjay Roy said hang me”
Kolkata Rape and Murder Case
ಪಶ್ಚಿಮ ಬಂಗಾಳ: ಎಲ್ಲೆಲ್ಲೂ ಕೇಳಿ ಬರುತ್ತಿರುವ ಧ್ವನಿಯೆಂದರೆ “we Want Justice” “we Want Justice .. ಹೌದು ಪಶ್ಚಿಮ ಬಂಗಾಳದ ಕೊಲ್ಕತ್ತದ ರ್ಗ್ kar mediacal ಕಾಲೇಜಿನಲ್ಲಿ ನಡೆದ ಆ ಭೀಭತ್ಸ ಕೃತ್ಯದ ನಂತರ ಎಲ್ಲಾ ಕಡೆಯಲ್ಲೂ ಈ ವಾಕ್ಯ ಪ್ರತಿಧ್ವನಿಸುತ್ತಿದೆ.

ಎಲ್ಲೆಲ್ಲೂ ಕೇಳಿ ಬರುತ್ತಿರುವ ಧ್ವನಿಯೆಂದರೆ “we Want Justice” “we Want Justice .. ಹೌದು ಪಶ್ಚಿಮ ಬಂಗಾಳದ ಕೊಲ್ಕತ್ತದ ರ್ಗ್ kar mediacal ಕಾಲೇಜಿನಲ್ಲಿ ನಡೆದ ಆ ಭೀಭತ್ಸ ಕೃತ್ಯದ ನಂತರ ಎಲ್ಲಾ ಕಡೆಯಲ್ಲೂ ಈ ವಾಕ್ಯ ಪ್ರತಿಧ್ವನಿಸುತ್ತಿದೆ.
ಆಗಸ್ಟ್ 8 ರ ಸುಮಾರು 11 ಗಂಟೆಯ ರಾತ್ರಿಯಲ್ಲಿ ಒಬ್ಬ ಟ್ರೈನಿ ಲೇಡಿ ಡಾಕ್ಟರ್ ಗೆ ಅವರ ಮನೆಯಿಂದ ಬಂದು ಫೋನ್ ಕಾಲ್ ಬರುತ್ತೆ. ಮಾಮೂಲಿ ಕುಶೋಲೋಪರಿಯ ನಂತರ ಆ ಡಾಕ್ಟರ್ ರೌಂಡ್ಸ್ ಗೆ ಹೋಗ್ಬೇಕು ಅಂತ ಫೋನನ್ನು ಕಟ್ ಮಾಡುತ್ತಾರೆ, ಸ್ನಾತ್ತಕೋತ್ತರ ವಿದ್ಯಾರ್ಥಿನಿಯಾದ ಆಕೆ ನಂತರ ರೋಗಿಗಳನ್ನು ಭೇಟಿಯಾಗಿ ಚಿಕಿತ್ಸೆ ಕೊಡುತ್ತಾ, ಸುಮಾರು ರಾತ್ರಿ 2:00 ಹೊತ್ತಿಗೆ ತನ್ನೆಲ್ಲ ಜವಾಬ್ದಾರಿಯನ್ನು ಮುಗಿಸಿ, ಇಬ್ಬರು ಜೂನಿಯರ್ ಜೊತೆಗೆ ಕುಳಿತು ಊಟ ಮುಗಿಸಿ, ನಂತರ ವಿಶ್ರಾಂತಿ ತೆಗೆದುಕೊಳ್ಳುತ್ತೇನೆ ಎಂದು ಬಿಲ್ಡಿಂಗ್ ನನ್ ನಾಲ್ಕನೇ ಮಹಡಿ ಯಲ್ಲಿನ ಸೆಮಿನಾರ್ ಆಲ್ ಹಾಲ್ ಗೆ ಹೋಗಿದ್ದರು. ಆದರೆ ಬೆಳಗಿನ ನೋಡಿದವರು ನಿಜಕ್ಕೂ ದಂಗಾಗಿ ಹೋಗಿದ್ದರು.

ಆ ಮಹಿಳಾ ವೈದ್ಯಯ ದೇಹ ಅರೆನಗ್ನವಾಗಿತ್ತು. ತಲೆಯಿಂದ ಪಾದದವರೆಗೆ ಗಾಯವೇ ಆಗಿರೋದ ಭಾಗಗಳೇ ಇರಲಿಲ್ಲ. ಇಡೀ ದೇಹದ ತುಂಬಾ ಅಲ್ಲಲ್ಲಿ ಹಲ್ಲಿನಿಂದ ಕಚ್ಚಲಾಗಿತ್ತು. ಕಣ್ಣು ಬಾಯಿ ಖಾಸಗಿ ಅಂಗದಿಂದ ರಕ್ತ ಬರುತ್ತಿತ್ತು, ಕುತ್ತಿಗೆ ಮೂಳೆ ಮುರಿದಿತ್ತು. ಈ ವಿಷಯವನ್ನು ಅವರ ಮನೆಯವರಿಗೆ ತಿಳಿಸಲಾಗಿತ್ತು. ಮೊದಲು ನಿಮ್ಮ ಮಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಿ ನಂತರ ಅವರು ಸತ್ತಿದ್ದಾರೆ ಎಂದು ತಿಳಿಸಲಾಯಿತು, ಮಗಳನ್ನು ಇಂತಹ ಸ್ಥಿತಿಯಲ್ಲಿ ಕಂಡ ತಂದೆ ತಾಯಿಯ ದುಃಖ ಹೇಳತೀರದು. ನಂತರ ಈ ಸುದ್ದಿ ನರ್ಸ್ ಡಾಕ್ಟರ್ ನಿಂದ ಹಿಡಿದು ಎಲ್ಲಾ ಸಿಬ್ಬಂದಿಗೆ ಹಬ್ಬಿತು.
ಎಲ್ಲರೂ ಸಹ ಪ್ರತಿಭಟಿಸಿದರು ಎಲ್ಲರೊಂದಿಗೆ ಸ್ನೇಹದಿಂದ ವರ್ತಿಸುವ, ನಗುತ್ತಾ ಎಲ್ಲರೊಂದಿಗೆ ಕಾಲ ಕಳೆಯುವ ಒಳ್ಳೆಯ ನಡತೆಯ 31 ವರ್ಷದ ಯುವತಿಯನ್ನು ಇಷ್ಟೊಂದು ಕ್ರೂರವಾಗಿಕೊಲ್ಲಲು ಹೇಗೆ ಸಾಧ್ಯ ಎಂಬುದು ಎಲ್ಲರ ಪ್ರಶ್ನೆಯಾಗಿತ್ತು.

“ವೈದ್ಯೋ: ನಾರಾಯಣೋ ಹರಿ” ಅನ್ನೋ ಮಾತಿದೆ ಅಂದರೆ ತಮ್ಮ ಸುಖ ಸಂತೋಷವನ್ನು ಮರೆತು 24X7 ರೋಗಿಗಳ ಹಿತಕ್ಕಾಗಿ ದುಡಿಯುವ ವೈದ್ಯರನ್ನು, ನಾರಾಯಣನೆಂದು ಭಾವಿಸಬೇಕು ಎಂದರ್ಥ. ಆದರೆ ಈ ವೈದ್ಯೆಯ ಮೇಲೆ ನಡೆದಿರುವುದು ಇಡೀ ಮನುಕುಲವೇ ತಲೆತಗ್ಗಿಸುವಂತಹ ಅಮಾನುಷ್ಯ ಘಟನೆ.
ಮರಣೋತ್ತರ ಪರೀಕ್ಷೆಯನ್ನು ನಡೆಸಿದ ವೈದ್ಯರೇ ದಂಗಾಗುವ ರೀತಿಯಲ್ಲಿ ಇವರ ಮೇಲೆ ದಾಳಿ ನಡೆಸಲಾಗಿತ್ತು ವಿವರಿಸಲಾಗದಷ್ಟು ಸ್ಥಿತಿಯಲ್ಲಿ ಆ ವೈದ್ಯಹ ದೇಹ ಹಾನಿಗೊಂಡಿತ್ತು . ಒಟ್ಟು ಒಂಬತ್ತು ಅತಿ ಗಂಭೀರ ಗಾಯಗಳಾಗಿದ್ದವು ಆ ವೈದ್ಯಹ ಶವದ ಸ್ವಲ್ಪ ದೂರದಲ್ಲಿ ಒಂದು ಬ್ಲೂಟೂತ್ ಬಿದ್ದಿತ್ತು ಅದರ ಜಾಡು ಹಿಡಿದು ಹೊರಟ ಪೊಲೀಸರಿಗೆ ಸಿಕ್ಕಿದ್ದು ಸಂಜೋಯ್ ರಾಯ್ ಎನ್ನುವ ಮೃಗ

ಆರೋಪಿ ಸಂಜೋಯ್ ರಾಯ್ :
ಆಸ್ಪತ್ರೆ CCTV ಆಸ್ಪತ್ರೆಯಲ್ಲಿ ಓಡಾಡಿದ ಶಂಕಿತರ ಮೊಬೈಲ್ ಅನ್ನು ವಶಪಡಿಸಿಕೊಂಡು ಘಟನಾ ಸ್ಥಳದಲ್ಲಿ ದೊರೆತ ಬ್ಲೂಟೂತ್ ಅನ್ನು ಆನ್ ಮಾಡಿದಾಗ ಅದು ಸಂಜೋಯ್ ರಾಯ್ ನ ಮೊಬೈಲ್ ಗೆ ಕನೆಕ್ಟ್ ಆಗಿದೆ, ಅಂದಹಾಗೆ 33 ವರ್ಷದ ಸಂಜೋಯ್ ರಾಯ್ ಪೊಲೀಸರಿಗೆ ಸ್ವಯಂಸೇವಕನಾಗಿ ಕೆಲಸ ಮಾಡುತ್ತಿದ್ದ, ಈತ ಈ ಮೆಡಿಕಲ್ ಕಾಲೇಜಿನ ಪೊಲೀಸ್ ಔಟ್ ಪೋಸ್ಟ್ ನಲ್ಲಿ ಕೆಲಸ ಮಾಡುತ್ತಿದ್ದ ಹೀಗಾಗಿ ಪೊಲೀಸರ ಪರಿಚಯವಿದೆ ಎಂದು ಎಲ್ಲಿ ಬೇಕೆಂದೆಲ್ಲಿ ತಿರುಗಾಡುತ್ತಿದ್ದ, ಘಟನೆ ನಡೆದ ದಿನನು ಸಹ ವೈದ್ಯೆ ಮಲಗಿದ್ದ ಸೆಮಿನಾರ್ ರೂಮ್ ಗೆ ನುಗ್ಗಿ ಮಲಗಿದ್ದ ವೈದ್ಯೆ ಮೇಲೆ ಅತ್ಯಾಚಾರ ನಡೆಸಿದ್ದ ಎನ್ನಲಾಗಿದೆ. ಈತ ಮದ್ಯ ವ್ಯಸನಿಯಾಗಿದ್ದ ಅಶ್ಲೀಲ ವಿಡಿಯೋಗಳ ದಾಸನಾಗಿದ್ದ ಜೊತೆಗೆ ವಿಕೃತಕಾಮಿಯಾಗಿದ್ದ ಆಲ್ರೆಡಿ ನಾಲ್ಕು ಮದುವೆಯಾಗಿದ್ದ ಈತನ ಕಿರುಕುಳ ತಾಳಲಾರದೆ ಅವರೆಲ್ಲ ದೂರವಾಗಿದ್ದರು.
ಇಂತಹ ದಾರುಣ ಕೃತ್ಯವೆನ್ನೆಸೆಗಿದ್ದರೂ ಸಹ , ಕನಿಷ್ಠ ಪಾಪ ಪ್ರಜ್ಞೆ ಇವನಲ್ಲಿ ಇರಲಿಲ್ಲ, ನಾನು ಮಾಡಿದ್ದೂ ಹೌದು , ಬೇಕಾದರೆ ಗಲ್ಲಿಗೇರಿಸಿ ಎಂದು ಪೋಲೀಸರ ಮುಂದೆ ಹೇಳುತ್ತಿದ್ದ,

ಪ್ರತಿಭಟನೆ ಏಕೆ: ಹಾಗಿದ್ದರೆ ಇಲ್ಲಿ ಎಲ್ಲಾ ನೆರವಾಗಿದ್ಯಯಲ್ಲ ಮತ್ಯಾಕ್ಕೇ ಪ್ರತಿಭಟನೆ ನಡೆಸ್ತಿದಾರೆ ಎನ್ನುವ ಪ್ರಶ್ನೆ ನಮ್ಮೆಲ್ಲರಲ್ಲೂ ಮೂಡುವುದು ಸಹಜ, ಮೊದಲನೆಯದಾಗಿ ವಿದ್ಯಾರ್ಥಿಯನ್ನು ಭೀಭತ್ಸ ವಾಗಿ ಹತ್ಯೆ ಮಾಡಿರುವುದಕ್ಕೆ ವಿದ್ಯಾರ್ಥಿಗಳು ರೊಚ್ಚಿಗೆದ್ದಿದ್ರು ಅದರ ಜೊತೆಗೆ ಈ ವಿಚಾರದಲ್ಲಿ ಕಾಲೇಜು, ಪೊಲೀಸ್ ಮತ್ತು ಸರ್ಕಾರ ನಡೆದುಕೊಂಡ ರೀತಿ ಅನುಮಾನಸ್ಪದವಾಗಿತ್ತು. ಘಟನೆ ತಿಳಿದಾಗ ಆಸ್ಪತ್ರೆಗೆ ಓಡಿ ಬಂದ ಪೋಷಕರಿಗೆ ಮಗಳ ಶವವನ್ನು ತೋರಿಸದೇ ಮೂರು ಗಂಟೆಗಳ ಕಾಲ ಕಾಯಿಸಿದ್ದರು.
ಪ್ರತಿಭಟನೆ ಶುರುವಾದಾಗ ಕಾಲೇಜಿನ ಪ್ರಾಂಶುಪಾಲರಾದ ಸಂದೀಪ್ ಘೋಷ್ ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ರು ಆದರೆ ಬಂಗಾಳ ಸರ್ಕಾರ ಕೆಲವೇ ಕ್ಷಣಗಳಲ್ಲಿ ಅವರನ್ನು ನ್ಯಾಷನಲ್ ಮೆಡಿಕಲ್ ಕಾಲೇಜಿಗೆ ಪ್ರಾಂಶುಪಾಲರಾಗಿ ನೇಮಕ ಮಾಡಿತ್ತು. ಇವೆಲ್ಲವೂ ವಿದ್ಯಾರ್ಥಿಗಳಲ್ಲಿ ಆಕ್ರೋಶ ಮತ್ತು ಸಂಶಯಕ್ಕೆ ಕಾರಣವಾಗಿತ್ತು. ಆದರೆ ಈ ಪ್ರಕರಣಕ್ಕೆ ಟ್ವಿಸ್ಟ್ ಮತ್ತು ಸಂಶಯ ಮೂಡಿಸಿದ್ದು ಮರಣೋತ್ತರ ಪರೀಕ್ಷೆಯಲ್ಲಿ ಬಂದಂತಹ ಮತ್ತೊಂದು ಸಾಕ್ಸ್ಯ ಅದೇನಂದರೆ ಇದು ಬರೀ ಅತ್ಯಾಚಾರವಲ್ಲ ಸಾಮೂಹಿಕ ಅತ್ಯಾಚಾರ…. ಹೌದು ಮರುಣೋತ್ತರ ಪರೀಕ್ಷೆಯಲ್ಲಿ ವೈದ್ಯೆಯ ದೇಹದಲ್ಲಿ 150 ML ನಷ್ಟು ವೀರ್ಯಾಣು ಪತ್ತೆಯಾಗಿದೆ.ಕೇವಲ ಒಬ್ಬ ವ್ಯಕ್ತಿಯಿಂದ ಇಷ್ಟೊಂದು ವೀರ್ಯಾಣು ಸಾಧ್ಯವೇ ಇಲ್ಲ , ಹೀಗಾಗಿ ಈ ಅತ್ಯಾಚಾರದಲ್ಲಿ ಒಬ್ಬರಿಗಿಂತ ಜಾಸ್ತಿ ಜನ ಭಾಗಿಯಾಗಿದ್ದಾರೆ

ಇದೊಂದು ಸಾಮೂಹಿಕ ಅತ್ಯಾಚಾರ ಎನ್ನುವುದು ಈಗ ಬಂದಿರುವ ಸ್ಪೋಟಕ ಆರೋಪ . ಒಂದು ಅತ್ಯಾಚಾರ ಅಥವಾ ಕೊಲೆ ನಡೆದಾಗ ಪೊಲೀಸ್ ನವರು ಅದರ ಮೂಲವನ್ನು ಭೇದಿಸಿ ಅದಕ್ಕೆ ಸಂಬಂಧ ಪಟ್ಟರವನ್ನೆಲ್ಲ ಒಳಗೆ ಹಾಕುತ್ತಾರೆ ಆದರೆ ಅತ್ಯಾಚಾರ ನಡೆದು ಇಷ್ಟು ದಿನಗಳು ಕಳೆದರು ಸಹ ಸಂಜೋಯ್ ರಾಯ್ ನನ್ನು ಹೊರತುಪಡಿಸಿ ಮತ್ಯಾರನ್ನು ಭಂದಿಸಿಲ್ಲ ಇದು ಕಲ್ಕತ್ತ ಪೋಲೀಸರ ಮೇಲೆ ದೊಡ್ಡ ಅನುಮಾನಕ್ಕೆ ಕಾರಣವಾಗಿದೆ.
ಇಷ್ಟೆಲ್ಲ ಗೊಂದಲ ಅನುಮಾನ ಇದ್ದ ಕಾರಣ ಯುವತಿಯ ಪೋಷಕರು ಪ್ರಕರಣವನ್ನು CBI ಗೆ ಹಸ್ತಾಂತರಿಸುವಂತೆ ಕಲ್ಕತ್ತ ಹೈಕೋರ್ಟ್ ಗೆ ಮನವಿ ಮಾಡಿದ್ರು , ಮನವಿಯನ್ನು ಒಪ್ಪಿದ ಹೈಕೋರ್ಟ್ ತನಿಖೆಯನ್ನು CBI ಗೆ ನೀಡಿದೆ.

ಇನ್ನು ಈ ಘಟನೆಯನ್ನು ಖಂಡಿಸಿ ವೈದ್ಯಕೀಯ ವಿದ್ಯಾರ್ಥಿಗಳು ದೇಶವ್ಯಾಪ್ತಿ ಪ್ರತಿಭಟನೆ ಮಾಡುತಿದ್ದರೆ, ಪ್ರಕರಣದ ಬಗ್ಗೆ ಒಂದೊಂದು ಮಾಹಿತಿ ಹೊರಬರುತ್ತಿದ್ದಂತೆ ಈ ಪ್ರತಿಭಟನೆ ಯ ಕಾವು ಇನ್ನು ಜೋರಾಗಿದೆ, ವೈದ್ಯರು ವೈದ್ಯರು ಹಲವು ಕಡೆ ಎಮರ್ಜೆನ್ಸಿ ಕೇಸ್ ನ ಹೊರತು ಪಡಿಸಿ ಪ್ರಕರಣವನ್ನು ಅಟೆಂಡ್ ಮಾಡುವುದನ್ನ ಬಿಟ್ಟು ಪ್ರತಿಭಟನೆಯಲ್ಲಿ ತೊಡಗಿದ್ದಾರೆ, ಇದರಿಂದ ಆರೋಗ್ಯ ಸೇವೆಯಲ್ಲಿ ವ್ಯತ್ಯವಾಗಿದೆ RG kar ಆಸ್ಪತ್ರಯಲ್ಲೂ ವಿದ್ಯಾರ್ಥಿಗಳು ಪ್ರತಿಭಟಿಸುತಿದ್ದರು ಆದರೆ ಮಧ್ಯರಾತ್ರಿ 12 .30 ಸುಮಾರಿಗೆ ಅಂದಾಜು ಸುಮಾರು 300 ಜನ ದುಷ್ಟರ ಗ್ಯಾಂಗ್ ಆಸ್ಪತ್ರೆಯ ಮೇಲೆ ಅಟ್ಯಾಕ್ ಮಾಡಿದೆ. 18 ಕ್ಕೂ ಅಧಿಕ ಆಸ್ಪತ್ರೆಯ ರೂಮ್ ಅನ್ನು ದ್ವಮ್ಸ ಮಾಡಿದೆ. ವಿದ್ಯಾರ್ಥಿಗಳ ಮೇಲು ದಾಳಿಯಾಗಿದೆ . ವಿದ್ಯಾರ್ಥಿ ಗಳು ಓಡಿ ಹೋಗಿ ಪ್ರಾಣ ವನ್ನ ಉಳಿಸಿಕೊಂಡಿದ್ದಾರೆ, ಪೊಲೀಸರ ಸಮ್ಮುಖದಲ್ಲೇ ಇಷ್ಟೆಲ್ಲ ಆಗಿದೆ, ಹಾಗಾದ್ರೆ ಇವರೆಲ್ಲ ಯಾರು, ಇವರು ಏನನ್ನು ನಾಶಮಾಡಲು ಹೊರಟ್ಟಿದ್ದರು? ಯಾವ ಸಾಕ್ಷನಾಶಕ್ಕೆ ಮುಂದಾಗಿದ್ದರು ಎನ್ನುವ ಪ್ರಶ್ನೆ ಎದುರಾಗಿದೆ.
ಹಿಂದೆ ಹೆಣ್ಣು ಮಗು ಜನಿಸಿದ್ದಾರೆ ಮದುವೆಮಾಡಲು ಹಣ ಬೇಕು ಎಂದು ದುಃಖಿಸುತಿದ್ದರು, ಆದರೆ ಇಂದು ಇಂತಹ ಹಸಿದ ಮನುಷ್ಯ ರೂಪದ ಮೃಗಗಳಿಂದ ಹೆಣ್ಣು ಮಗುವನ್ನು ಹೇಗೆ ರಕ್ಷಿಸಬೇಕು ಎನ್ನುವುದೇ ಪಾರ್ಥಿ ತಂದೆ-ತಾಯಿಯ ಕೊರಗಾಗಿದೆ.
-ಚಿತ್ರ
Kolkata Doctor Case, India, Mamatha Banarji.
