Table of Contents
ToggleKoduru,Pattguppa Suside case,Hosanagara,Rippanepete,Ripponpete,Attack,
Koduru
Koduru: ಪಟಗುಪ್ಪ ಸೇತುವೆಯಲ್ಲಿ ಪತ್ತೆಯಾಯ್ತು ಮೃತ ದೇಹ… ಮೃತ ವ್ಯಕ್ತಿ ಯಾರು. ಎಂಬುದರ ಮಾಹಿತಿ

ಹೊಸನಗರ ತಾಲೂಕು ಕೋಡೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸುರುಳಿಕೊಪ್ಪ ದಲ್ಲಿ ತನ್ನ ಪತ್ನಿಯನ್ನು ಮಾರಣಾಂತಿಕ ವಾಗಿ ಹಲ್ಲೆ ಮಾಡಿ ತಾನು ಪಟ್ಟುಗುಪ್ಪ ಸೇತುವೆ ಬಳಿ ಬಂದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿತ್ತು.

ಇಂದು ಮೃತದೇಹ ಪಟ್ಟಗುಪ್ಪ ಬಳಿ ಪತ್ತೆಯಾಗಿದೆ.
ಏನಿದು ಘಟನೆ : ಕೌಟುಂಬಿಕ ವಿಚಾರವಾಗಿ ಕೋಡೂರು ಗ್ರಾಮದ ಸದಾನಂದ ಭಟ್ ಹಾಗೂ ಅವರ ಪತ್ನಿ ಸಬಿತಾ ನಡುವೆ ಗುರುವಾರ ಜಗಳ ನಡೆದಿದೆ.
ಇದರಿಂದಾಗಿ ಸಬಿತಾ ತೀವ್ರವಾಗಿ ಗಾಯಗೊಂಡಿದ್ದು, ಅವರನ್ನು ರಿಪ್ಪನ್‌ಪೇಟೆ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದು . ಪ್ರಾಥಮಿಕ ಚಿಕಿತ್ಸೆ ನೀಡಿದ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗಕ್ಕೆ ರವಾನಿಸಲಾಗಿತ್ತು.
ಈ ಪ್ರಕರಣ ಕುರಿತಾಗಿ ರಿಪ್ಪನ್‌ಪೇಟೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿ ಸದಾನಂದ ಭಟ್‌ಗಾಗಿ ಹುಡುಕಾಟ ನಡೆಸಿದ್ದರು ನಂತರ ಪಟಗುಪ್ಪ ಸೇತುವೆ ಬಳಿ ಅವರ ಕಾರು ಪತ್ತೆಯಾಗಿತ್ತು ನಂತರ ಹೊಸನಗರ ಪೊಲೀಸರು ವಾಹನವನ್ನು ವಶಪಡಿಸಿಕೊಂಡಿದ್ದರು.
ಆತ್ಮಹತ್ಯೆ ಮಾಡಿಕೊಂಡ ಸ್ಥಳ ಹೊಸನಗರ ಪೊಲೀಸ್ ಠಾಣಾ ವ್ಯಾಪ್ತಿಗೆ ಸೇರಿದೆ ಹಾಗೆ ಹಲ್ಲೆ ನಡೆದ ಸ್ಥಳ ರಿಪ್ಪನಪೇಟೆ ವ್ಯಾಪ್ತಿಗೆ ಸೇರಿದೆ ಹಾಗಾಗಿ ಘಟನೆಗೆ ಸಂಬಂಧಿಸಿದಂತೆ ರಿಪ್ಪನ್‌ಪೇಟೆ ಮತ್ತು ಹೊಸನಗರ ಪೊಲೀಸ್ ಠಾಣೆಯಲ್ಲಿ ಎರಡು ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ.

Koduru,Pattguppa Suside case,Hosanagara,Rippanepete,Ripponpete,Attack,

