Kisan Credit Card apply online, How to apply for Kisan Credit Card, KCC loan application process, Kisan Credit Card eligibility, KCC loan online apply
Table of Contents
Toggle“Kisan Credit Card Apply Online
BUDGET 2025 : ರೈತರಿಗೆ ಭರ್ಜರಿ ಆಫರ್ . ರೈತರು ಯಾವುದೇ ಹೆಚ್ಚಿನ ದಾಖಲೆಗಳಿಲ್ಲದೆ 5 ಲಕ್ಷದವರೆಗೆ ಕ್ರೆಡಿಟ್ ಲೋನ್ ಪಡೆಯ ಬಹುದು, ಈ ಬಾರಿಯ 2025 ಬಜೆಟ್ ನಲ್ಲಿ 3 ಲಕ್ಷ ಮಿತಿ ಇದ್ದ ಕಿಸಾನ್ ಕ್ರೆಡಿಟ್ ಕಾರ್ಡ್ ಗೆ ಈಗ ೫ ಲಕ್ಷದವರೆಗೆ ಮಿತಿ ಹೆಚ್ಚಿಸಿದ್ದಾರೆ. ಹಾಗಿದ್ದರೆ ಕಿಸಾನ್ ಕ್ರೆಡಿಟ್ ಕಾರ್ಡ್ ಗೆ ಅರ್ಜಿ ಹಾಗಿ ೫ ಲಕ್ಷ ಲೋನ್ ಪಡೆಯೋದು ಹೇಗೆ..? ( Kisan Credit Card online application process 2025) ಯಾವ ಯಾವ ದಾಖಲೆಗಳು ಬೇಕು ಅರ್ಜಿ ಸಲ್ಲಿಸಲು ಎಂಬುದನ್ನ ತಿಳಿದು ಕೊಳ್ಳೋಣ.

ಕಿಸಾನ್ ಕ್ರೆಡಿಟ್ ಕಾರ್ಡ್ ಯೋಜನೆ
ಯೋಜನೆಯ ಹೆಸರು | ಕಿಸಾನ್ ಕ್ರೆಡಿಟ್ ಕಾರ್ಡ್ ಯೋಜನೆ |
---|---|
ಆರಂಭಿಸಿದವರು | ಕೇಂದ್ರ ಸರ್ಕಾರ |
ಫಲಾನುಭವಿ | ದೇಶದ ಎಲ್ಲಾ ರೈತರು |
ಉದ್ದೇಶ | ಕಡಿಮೆ ಬಡ್ಡಿದರದಲ್ಲಿ ಕೃಷಿ ಸಾಲ ನೀಡುವುದು |
ಅರ್ಜಿ ಸಲ್ಲಿಕೆ ವಿಧಾನ | ಆನ್ಲೈನ್ ಮೂಲಕ |
ಅಧಿಕೃತ ವೆಬ್‌ಸೈಟ್ | KCCY |
ಭಾರತವು ಕೃಷಿ ಆಧಾರಿತ ದೇಶವಾಗಿದೆ. , ಇಲ್ಲಿಯ ರೈತರ ಆರ್ಥಿಕ ಸ್ಥಿತಿ ಕಡಿಮೆ ಮಟ್ಟಕ್ಕೆ ಕುಸಿಯುತ್ತಿದೆ. ಈ ಹಿನ್ನೆಲೆದಲ್ಲಿ, ರೈತರ ಆದಾಯವನ್ನು ಹೆಚ್ಚಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ ಹಲವು ಹೊಸ ಯೋಜನೆಗಳನ್ನು ಜಾರಿಗೆ ತಂದಿದ್ದು , ಇದರಿಂದ ರೈತರು ಆರ್ಥಿಕ ವಾಗಿ ಚೇತರಿಸಿಕೊಳ್ಳಲು ಸಹಾಯವಾಗುತ್ತಿದೆ.
ರೈತರ ಅಭಿವೃದ್ಧಿಯನ್ನು ಗಮನದಲ್ಲಿಟ್ಟುಕೊಂಡು ಸರ್ಕಾರ ಜಾರಿಗೆ ತಂದ ಪ್ರಮುಖ ಯೋಜನೆಗಳಲ್ಲಿಕಿಸಾನ್ ಕ್ರೆಡಿಟ್ ಕಾರ್ಡ್ ಯೋಜನೆ” ಬಹುಮುಖ್ಯವಾಗಿದೆ. ಈ ಯೋಜನೆಯಡಿಯಲ್ಲಿ, ಯಾವುದೇ ಅಡಮಾನವಿಲ್ಲದೆ ರೈತರಿಗೆ 5 ಲಕ್ಷ ರೂಪಾಯಿವರೆಗೆ ಕಡಿಮೆ ಬಡ್ಡಿದರದಲ್ಲಿ ಸಾಲ ಪಡೆಯುವ ಅವಕಾಶ ಲಭ್ಯವಿದೆ. ಈ ಯೋಜನೆಯ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.
ಕಿಸಾನ್ ಕ್ರೆಡಿಟ್ ಕಾರ್ಡ್ ಗೆ ಅಪ್ಪ್ಲೈ ಮಾಡೋದು ಹೇಗೆ ..?
Apply for Kisan Credit Card online in 2025

ಕಿಸಾನ್ ಕ್ರೆಡಿಟ್ ಕಾರ್ಡ್ ಪಡೆಯುವ ಅರ್ಹತೆಗಳು:
- ಅರ್ಜಿದಾರರು ಭಾರತೀಯ ಪ್ರಜೆಯಾಗಿರಬೇಕು.
- ಈ ಕಾರ್ಡ್‌ಗೆ ರೈತರು, ಪಶುಸಂಗೋಪನೆ, ಮತ್ತು ಮೀನುಗಾರಿಕೆ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುವವರು ಅರ್ಹರಾಗಿದ್ದಾರೆ.
- ಇತರರ ಜಮೀನಿನಲ್ಲಿ ಕೃಷಿ ಕಾರ್ಯನಿರ್ವಹಿಸುವ ವ್ಯಕ್ತಿಗಳು (ಸಾಗುವಳಿ) ಸಹ ಈ ಕಾರ್ಡ್ ಪಡೆಯಲು ಅರ್ಹರು.
- ಅರ್ಜಿ ಸಲ್ಲಿಸಲು ಅರ್ಜಿದಾರರ ವಯಸ್ಸು ಕನಿಷ್ಠ 18 ವರ್ಷ ಮತ್ತು ಗರಿಷ್ಠ 75 ವರ್ಷಗಳ ನಡುವೆ ಇರಬೇಕು.
ಕಿಸಾನ್ ಕ್ರೆಡಿಟ್ ಕಾರ್ಡ್ ಪಡೆಯಲು ಅಗತ್ಯ ದಾಖಲೆಗಳು
- ✅ ಜಮೀನಿನ ದಾಖಲೆಗಳು (ಪಹಣಿ/ಆರ್‌ಟಿಸಿ)
- ✅ ಗುತ್ತಿಗೆ ಅಥವಾ ಬಾಡಿಗೆ ಒಪ್ಪಂದ ಪತ್ರ (ಬೇರೆಯವರ ಜಮೀನಿನಲ್ಲಿ ಕೃಷಿ ಮಾಡಿದರೆ)
- ✅ ಆಧಾರ್ ಕಾರ್ಡ್ ಅಥವಾ ಗುರುತಿನ ಚೀಟಿ
- ✅ ಪ್ಯಾನ್ ಕಾರ್ಡ್ (PAN Card)
- ✅ ಬ್ಯಾಂಕ್ ಖಾತೆ ಪುಸ್ತಕ (Passbook) & ಖಾತೆ ವಿವರಗಳು
- ✅ ಮೊಬೈಲ್ ಸಂಖ್ಯೆ ಮತ್ತು ಪಾಸ್‌ಪೋರ್ಟ್ ಅಳತೆಯ ಭಾವಚಿತ್ರ
- ✅ ಸಾಲಗಾರರಲ್ಲ ಎಂಬ ಬಗ್ಗೆ ಅಫಿಡವಿಟ್
ಕಿಸಾನ್ ಕ್ರೆಡಿಟ್ ಕಾರ್ಡ್‌ಗಾಗಿ ಆಫ್‌ಲೈನ್ ಅರ್ಜಿ ಪ್ರಕ್ರಿಯೆ
ಹಂತ 1: ನಿಮ್ಮ ಬ್ಯಾಂಕ್ ಖಾತೆಯಿರುವ ಹತ್ತಿರದ ಬ್ಯಾಂಕ್ ಶಾಖೆಗೆ ಭೇಟಿ ನೀಡಿ. ಅಗತ್ಯವಿರುವ ಎಲ್ಲಾ ದಾಖಲೆಗಳನ್ನು (ಮೇಲಿನ ಪಟ್ಟಿ ನೋಡಿ) ಒಟ್ಟು ಕಿಸಾನ್ ಕ್ರೆಡಿಟ್ ಕಾರ್ಡ್ ಯೋಜನೆ ಕುರಿತು ಮಾಹಿತಿ ಪಡೆದು, ಅರ್ಜಿ ನಮೂನೆಯನ್ನು ಸ್ವೀಕರಿಸಿ.
ಹಂತ 2: ಅರ್ಜಿಯಲ್ಲಿ ಅಗತ್ಯವಿರುವ ಎಲ್ಲಾ ವಿವರಗಳನ್ನು ಸರಿಯಾಗಿ ಭರ್ತಿ ಮಾಡಿ.
ಹಂತ 3: ಭರ್ತಿಮಾಡಿದ ಅರ್ಜಿಗೆ ಅಗತ್ಯ ದಾಖಲಾತಿಗಳ ಪ್ರತಿಗಳನ್ನು ಲಗತ್ತಿಸಿ ಬ್ಯಾಂಕ್ ಅಧಿಕಾರಿಗೆ ಸಲ್ಲಿಸಿ.
ಹಂತ 4: ಅರ್ಜಿಯನ್ನು ಸಲ್ಲಿಸಿದ ನಂತರ, ಬ್ಯಾಂಕ್ ನಿಮ್ಮ ದಾಖಲೆಗಳನ್ನು ಪರಿಶೀಲನೆ ಮಾಡುತ್ತದೆ. ಪರಿಶೀಲನೆ ಯಶಸ್ವಿಯಾದರೆ, 15 ದಿನಗಳಲ್ಲಿ ನಿಮ್ಮ ಕಿಸಾನ್ ಕ್ರೆಡಿಟ್ ಕಾರ್ಡ್ ನೀಡಲಾಗುತ್ತದೆ.
ಕಿಸಾನ್ ಕ್ರೆಡಿಟ್ ಕಾರ್ಡ್ ಯೋಜನೆಗೆ ಆನ್‌ಲೈನ್‌ನಲ್ಲಿ ಹೇಗೆ ಅರ್ಜಿ ಸಲ್ಲಿಸಬಹುದು?
ಹಂತ 1: ಸರ್ಕಾರದ ಅಧಿಕೃತ PM ಕಿಸಾನ್ ಸಮ್ಮಾನ್ ನಿಧಿ ಯೋಜನೆ ವೆಬ್‌ಸೈಟ್ ಗೆ ಭೇಟಿ ನೀಡಿ.
ಹಂತ 2: ಹೊಮ್‌ಪೇಜ್‌ನಲ್ಲಿ ಕೆಳಗೆ ಸ್ಕ್ರೋಲ್ ಮಾಡಿ ಮತ್ತು “KCC ಫಾರ್ಮ್ ಡೌನ್‌ಲೋಡ್” ಬಟನ್ ಕ್ಲಿಕ್ ಮಾಡಿ. ಇದರಿಂದ ಕಿಸಾನ್ ಕ್ರೆಡಿಟ್ ಕಾರ್ಡ್ ಅರ್ಜಿ ಡೌನ್‌ಲೋಡ್ ಆಗುತ್ತದೆ.
ಹಂತ 3: ಡೌನ್‌ಲೋಡ್ ಮಾಡಿದ KCC ಅರ್ಜಿಯನ್ನು ತೆರೆಯಿರಿ ಮತ್ತು ಅಗತ್ಯ ವಿವರಗಳನ್ನು ಸರಿಯಾಗಿ ಭರ್ತಿ ಮಾಡಿ. ಅಗತ್ಯವಿದ್ದರೆ, ಓದಿ ಬರೆಯಲು ತಿಳಿದ ವ್ಯಕ್ತಿಯ ಸಹಾಯ ಪಡೆಯಬಹುದು.
ಹಂತ 4: ಅಗತ್ಯ ದಾಖಲಾತಿಗಳ (ಆಧಾರ್ ಕಾರ್ಡ್, ಪಹಣಿ/ಆರ್‌ಟಿಸಿ, ಪ್ಯಾನ್ ಕಾರ್ಡ್, ಬ್ಯಾಂಕ್ ಪಾಸ್‌ಬುಕ್) ಪ್ರತಿಗಳನ್ನು ಭರ್ತಿಮಾಡಿದ ಕಿಸಾನ್ ಲೋನ್ ಅರ್ಜಿಯೊಂದಿಗೆ ಲಗತ್ತಿಸಿ.
ಹಂತ 5: ನಿಮ್ಮ ಬ್ಯಾಂಕ್ ಖಾತೆ ಇರುವ ಶಾಖೆಗೆ ಈ Kisan Credit Card Application ಅನ್ನು ಸಲ್ಲಿಸಿ.
ಹಂತ 6: ಬ್ಯಾಂಕ್ ನಿಮ್ಮ ದಾಖಲಾತಿಗಳನ್ನು ಪರಿಶೀಲನೆ ಮಾಡುತ್ತದೆ. ಪರಿಶೀಲನೆ ಯಶಸ್ವಿಯಾದರೆ, 15 ದಿನಗಳೊಳಗಾಗಿ ನಿಮ್ಮ ಕಿಸಾನ್ ಕ್ರೆಡಿಟ್ ಕಾರ್ಡ್ ಲೋನ್ ಸೌಲಭ್ಯ ಸಿಕ್ಕಲಿದ್ದು, ಕಡಿಮೆ ಬಡ್ಡಿದರದಲ್ಲಿ ಕಿಸಾನ್ ಲೋನ್ ಪಡೆಯಲು ಸಾಧ್ಯ.

ಕೃಷಿ ಚಟುವಟಿಕೆಗಳ ನಿರ್ವಹಣೆಗೆ ಪ್ರಮುಖ ವಸ್ತುಗಳಾದ ಬಿತ್ತನೆ, ಬೆಳೆ ಪರಿವರ್ತನೆ, ಹಾಗೂ ರಸಗೊಬ್ಬರ ಖರೀದಿಗೆ ರೈತರು ಕಿಸಾನ್ ಕ್ರೆಡಿಟ್ ಕಾರ್ಡ್‌ನಿಂದ ಅನುಕೂಲಕರವಾಗಿ ಸಾಲವನ್ನು ಪಡೆಯಬಹುದು.

Election Boycott,Hosanagara,Modhi,Byr,Raghavendra,2024.