Humanity : ಮೂಕ ಪ್ರಾಣಿಯ ಜೀವ ಉಳಿಸಿದ ಹೊಸನಗರದ ಗುರೂಜಿ ಶಾಲೆಯ ವಿದ್ಯಾರ್ಥಿಗಳು

Hosanagara,Gurui Schol

                                                         Humanity

ಹೊಸನಗರ : ಪಟ್ಟಣದ ಹಳೆ ಸಾಗರ ರಸ್ತೆಯ ಚರಂಡಿ ಯೊಂದರಲ್ಲಿ ಹಸುವೊಂದು ತಲೆಕೇಳಗಾಗಿ ಬಿದ್ದು ಒದ್ದಾಡುತಿತ್ತು ಇದನ್ನು ಗಮನಿಸಿದ ಪಟ್ಟಣದ ಶ್ರೀ ಗುರೂಜಿ ಇಂಟರ್ನ್ಯಾಷನಲ್ ಶಾಲೆಯ ವಿದ್ಯಾರ್ಥಿಗಳಾದ ಜೀವನ್, ಸುಶಾಂತ್, ಅಮಿತ್ ಕಾಮತ್.ಕಿಶನ್.10ನೇ ತರಗತಿಯ ಈ ವಿದ್ಯಾರ್ಥಿಗಳು ಆ ಹಸುವನ್ನು ಎತ್ತಲು ಪ್ರಯತ್ನಿಸಿದರು ಆದರೆ ಅದು ತಲೆಕೆಳಗಾಗಿ ಬಿದ್ದಿದ್ದು ಎತ್ತಲು ಸಾಧ್ಯವಾಗದಿದ್ದಾಗ ಅಲ್ಲೇ ಪಕ್ಕದ ಮನೆಗೆ ತೆರಳಿ ಅವರಲ್ಲಿ ಮೊಬೈಲನ್ನು ಪಡೆದು ತಮ್ಮ ಶಾಲೆಯ ದೈಹಿಕ ಶಿಕ್ಷಕರಾದ ನಾಗರಾಜ್ ಅವರಿಗೆ ಕರೆ ಮಾಡಿ ಮಾಹಿತಿ ನೀಡಿದರು 

ತಕ್ಷಣ ಆ ಜಾಗಕ್ಕೆ ಬಂದ ಅವರು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡಿದರು ಅಲ್ಲೇ ಇದ್ದ ಪಕ್ಕದ ಮನೆ ಒಂದರಲ್ಲಿ ಹಗ್ಗವನ್ನು ತರಿಸಿ ದೈಹಿಕ ಶಿಕ್ಷಕರಾದ ನಾಗರಾಜ್ ಚರಂಡಿ ಒಳಗೆ ಇಳಿದು ದನದ ಕುತ್ತಿಗೆಗೆ ಹಗ್ಗವನ್ನು ಹಾಕಿ ಇಬ್ಬರು ವಿದ್ಯಾರ್ಥಿಗಳಿಗೆ ಧನದ ಬಾಲವನ್ನು ಎತ್ತಲು ಹೇಳಿದರು ಅದರಂತೆ ಮಾಡಿದ ವಿದ್ಯಾರ್ಥಿಗಳು ತಲೆಕೆಳಗಾಗಿ ಬಿದ್ದ ಹಸುವನ್ನು ನೇರ ಸ್ಥಿತಿಗೆ ತರುವಲ್ಲಿ ಸಫಲರಾದರು
ನಂತರ ಹೊಟ್ಟೆ ಭಾಗಕ್ಕೆ ಹಗ್ಗ ಹಾಕಿ ಮೇಲೆತ್ತಿ ನೀರು ಬೆಲ್ಲ ನೀಡಿ ಉಪಚರಿಸಿ ಪ್ರಥಮ ಚಿಕಿತ್ಸೆ ನೀಡಿ ಗೋ ಮಾತೆಯ ಜೀವವನ್ನು ರಕ್ಷಣೆ ಮಾಡಿದರು.

ಗೊತ್ತಾಗಿದ್ದು ಹೇಗೆ..?
ನಿತ್ಯವೂ ಬಸ್ಸಿನಲ್ಲಿ ಓಡಾಡುವ ಈ ವಿದ್ಯಾರ್ಥಿಗಳು ಶನಿವಾರ ಮಧ್ಯಾಹ್ನದ ವಿಶೇಷ ತರಗತಿಗಳನ್ನು ಮುಗಿಸಿಕೊಂಡು ಮನೆಗೆ ನಡೆದು ಕೊಂಡು ಹೋಗುತ್ತಿರುವಾಗ ಅಲ್ಲಿ ಪಕ್ಕದಲ್ಲಿದ್ದ ಚರಂಡಿಯಲ್ಲಿ ದನದ ಎರಡು ಕಾಲುಗಳನ್ನು ಗಮನಿಸಿದ ವಿದ್ಯಾರ್ಥಿಗಳು ಹತ್ತಿರ ಹೋಗಿ ನೋಡಿದಾಗ ಅಲ್ಲಿ ಗೋವು ಬಿದ್ದದನ್ನು ಗಮನಿಸಿ ಸತ್ತುಹೋಗಿರ ಬಹುದೆಂದು ಭಾವಿಸಿದರು ಸ್ವಲ್ಪ ಹೊತ್ತು ಅಲ್ಲೇ ನಿಂತು ಯೋಚಿಸಿದಾಗ ಹೊಟ್ಟೆಯ ಏರಿಳಿತವನ್ನು ಗಮನಿಸಿದ ವಿದ್ಯಾರ್ಥಿಗಳು ಇನ್ನು ಜೀವವಿದೆ ಎಂದು ತಿಳಿದ ಇವರು ಅದರ ರಕ್ಷಣೆಗೆ ಮುಂದಾದರು.
ಇವರ ಈ ಕಾರ್ಯಕ್ಕೆ ಹರ್ಷ ವ್ಯಕ್ತಪಡಿಸಿದ ಅಲ್ಲಿನ ನಿವಾಸಿಗಳು.

Hosanagara,Gurui Schol

ಇದನ್ನೂ ಓದಿ: Shivamogga Murder Case : ಆಧುನಿಕ ಪ್ರೀತಿಯ ಕೊಲೆ ಕಹಾನಿ

Hosanagara News
Hosanagara News

Leave a Reply

Your email address will not be published. Required fields are marked *