Hosanagara Town News,Tree,Power,Malenadu.
A huge tree fell in the middle of Hosnagar to Kundapur main road
ಹೊಸನಗರ: ಪಟ್ಟಣದ ಹೊಸನಗರದ ಹತ್ತಿರವಿರುವ ಆಂಜನೇಯ ಸ್ವಾಮಿ ದೇವಸ್ಥಾನದ ಹತ್ತಿರ ಬೃಹತ್ ಗಾತ್ರದ ಮರ ಒಂದು ರಸ್ತೆಗೆ ಅಡ್ಡಲಾಗಿ ಬಿದ್ದಿದೆ. ಚಿಕ್ಕವಾಹನಗಳಿಗೆ ಹೊರತು ಪಡಿಸಿ ದೊಡ್ಡ ವಾಹನಗಳ ಸಂಚಾರ ಸ್ಥಗಿತ..!
ಪಟ್ಟಣದ ಸಮೀಪವಿರುವ ಶ್ರೀ ವೀರಾಂಜನೇಯ ಹತ್ತಿರ ಹಾಗು ಹೋಲಿ ರಿಡೀಮರ್ ಶಾಲೆಯ ಎದುರಿನ ಮುಖ್ಯ ರಸ್ತೆಗೆ ದೂಪದ ಮರ ರಸ್ತೆಗೆ ಬಿದ್ದಿದೆ, ಈ ಸಂದರ್ಭದಲ್ಲಿ ಯಾವುದೇ ಸಂಚಾರರಿಗೆ ಹಾನಿಯಾಗಿಲ್ಲ, ಆದರೆ 4 ಕಿಂತ ಹೆಚ್ಚು ವಿದ್ಯುತ್ ಕಂಬಗಳಿಗೆ ಹಾನಿಯಾಗಿದೆ ಹಾಗೆ ಧರೆಗೆ ಉರುಳಿದ ಮರದಲ್ಲಿ ಜೇನು ಇರುವ ಕಾರಣ ಸಂಚಾರಮಾಡಲು ಸಮಸ್ಯೆಯಾಗಿದೆ.
ಚುರುಕಿನ ಕಾರ್ಯ ನಡೆಸುತ್ತಿರುವ ಮೆಸ್ಕಾಂ ಸಿಬ್ಬಂದಿಗಳು :
ಮರ ಧರೆಗೆ ಗೆ ಉರುಳಿದ ವಿಷಯ ತಿಳಿಯುತ್ತಿದ್ದಂತೆ ಮೆಸ್ಕಾಂ ಸಿಬ್ಬಂದಿಗಳು ಮರ ತೆರವು ಗೊಳಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ.
ಹಿನ್ನೆಲೆ:
ಈ ದೂಪದ ಮರುಗಳು ಸ್ವತಂತ್ರ ಪೂರ್ವದಾಗಿದ್ದು , 100 ವರ್ಷಕ್ಕೂ ಹಳೆಯ ಇತಿಹಾಸವಿದೆ, ದಾರಿಹೋಕರಿಗೆ ನೆರಳಾಗಲೆಂದು ಕೆಳದಿ ಸಂಸ್ಥಾನದವರು ಅಥವ ಬ್ರಿಟಿಷ್ ಗವರ್ನಮೆಂಟ್ ನೆಟ್ಟಿರಬಹುದೆಂಬ ಪ್ರತೀತಿ ಇದೆ
ಗಣಪತಿ ಕಾಯಿ ಮರ ಇನ್ನು ನೆನಪು ಮಾತ್ರ
ಹೋಲಿ ರೆಡಿಮರ್ ಶಾಲೆಯ ಮಕ್ಕಳ ಮಳೆಗಾಲದ ವಿಶೇಷ ಆಕರ್ಷನೆಯದ ಗಣಪತಿ ಕಾಯಿ ಮರ ಇನ್ನು ನೆನಪು ಮಾತ್ರ
ರಾಷ್ಟ್ರೀಯ ಹೆದ್ದಾರಿ ತೂಗುಗತ್ತಿಯಿಂದ ಪಾರಾದ ಮರ… ಮಳೆಯ ಹೊಡೆತಕ್ಕೆ ಶರಣಯಿತು
Hosanagara Town News,Tree,Power,Malenadu.