Hosanagara School: ಚಿಣ್ಣರ ಸಾಂಸ್ಕೃತಿಕ ವೈಭವಕ್ಕೆ ಸಜ್ಜಾಗುತ್ತಿದೆ ಹೊಸನಗರ

Hosanagara School

Hosanagara School, Chiinara Samskrutika Vaibhava,Namma Hosanagara 

ಹೊಸನಗರ: ಹೊಸನಗರದ ಶಾಸಕರ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಫೆಬ್ರವರಿ 25 26 ರಂದು ನೆಹರೂ ಮೈದಾನದಲ್ಲಿ  ಚಿಣ್ಣರ ಸಾಂಸ್ಕೃತಿಕ ವೈಭವ ಜರುಗಲಿದೆ. 

Hosanagara School

ಶಾಲೆಯ ಹಿನ್ನಲೆ: ಸ್ವತಂತ್ರ ಪೂರ್ವದಲ್ಲಿ, ಹೊಸನಗರದ  ಹಳೆಯ ಕೋರ್ಟ್(Old Court) ಬಳಿಯ ಮುಸಾಫಿರ್ ಖಾನ(Musafir Khana), ಎಂಬ ಜಾಗದಲ್ಲಿ ಪ್ರಾರಂಬಗೊಂಡಿತ್ತು ಎಂಬ ಮಾಹಿತಿ ಇದೆ , ತದನಂತರದಲ್ಲಿ ಹೊಸನಗರದ ಪ್ರಮುಖ ಕುಟಂಬಗಳ ಸಹಾಯದಿಂದ ಈಗಿನ ಸರ್ಕಾರಿ ಹಿರಿಯ ಪ್ರಾಥಮಿಕ ಬಾಲಕರ ಶಾಲೆಯ (Boys School) ಪಕ್ಕದಲ್ಲಿ ಶಾಶ್ವತವಾಗಿ ನೆಲೆಕಂಡಿತು. 

ಸ್ಥಾಪನೆಯ ಉದ್ದೇಶ: ಹೊಸನಗರದಲ್ಲಿ ಈ ಶಾಲೆ ಸ್ಥಾಪನೆಗೂ ಮುನ್ನ ಸರ್ಕಾರಿ ಶಾಲೆ (Governament School) ಇದ್ದರು ಕೂಡ ಬಾಲಕಿಯರಿಗೂ ಶಿಕ್ಷಣ ಸಿಗಬೇಕೆಂಬ ದ್ಯೇಯೋದ್ದೇಶ ದಿಂದ ಈ ಶಾಲೆ ಸ್ಥಾಪನೆ ಗೊಂಡಿತು.

ಶಾಲೆಯು ಬದಲಾದ ಕಾಲಕ್ಕೆ ತಕ್ಕಂತೆ ಶಾಲೆಯು ತನ್ನ ಅಸ್ತಿತ್ವ ಉಳಿಸಿಕೊಳ್ಳಲು  ಸಹಶಿಕ್ಷಣ ಎಂದರೆ ಗಂಡು ಹಾಗು ಹೆಣ್ಣು ಮಕ್ಕಳು ಒಟ್ಟಿಗೆ ಓದಲು ಅವಕಾಶ ಕಲ್ಪಿಸಿ ಕೊಡಲಾಯಿತು. 

ಈ ನಡುವೆ ಶಾಲೆಯು ಸರಕಾರದ ಹೊಸ ಯೋಜನೆಗೆ ತನ್ನನ್ನು ತಾನು ಅಳವಡಿಸ್ಕೊಂಡು ಅಂದಿನ ಶಾಸಕರಾದ ಶ್ರೀ ಹರತಾಳು ಹಾಲಪ್ಪರವರ (Hartalu Halappa)ಅವಧಿಯಲ್ಲಿ ಇದು ಹೆಣ್ಣು ಮಕ್ಕಳ ಶಾಲೆ ಇಂದ ಶಾಸಕರ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಾಗಿ ಪರಿವರ್ತನೆಗೊಂಡಿತು.

ಪ್ರಸ್ತುತ  ಈ ಶಾಲೆಯಲ್ಲಿ 432 ವಿದ್ಯಾರ್ಥಿಗಳು ವಿದ್ಯಾಭ್ಯಾಸ  ಮಾಡುತಿದ್ದಾರೆ   ಹಾಗೆ  22 ಶಿಕ್ಷಕರು ಈ  ವಿದ್ಯಾಲಯದಲ್ಲಿ ತಮ್ಮ ಸೇವೆ ಸಲ್ಲಿಸುತ್ತಿದ್ದಾರೆ.  ಈ ಶಾಲೆಯಲ್ಲಿ ಎಲ್.ಕೆ.ಜಿ ಇಂದ 7 ನೇ ತರಗತಿ ವರೆಗೆ ಇಂಗ್ಲಿಷ್ ಮೀಡಿಯಂ ಲಭ್ಯವಿದ್ದು, ಎಲ್ಲ ತರಗತಿಯಲ್ಲಿ ಸ್ಮಾರ್ಟ್ ಕ್ಲಾಸ್(Smart Class) ನಡೆಸಲಾಗುತ್ತಿದೆ.

ಶತಮಾನ್ಸೋವದ  ಕುರಿತು ಹಲವು ಗದ್ದಲ  ಗೊಂದಲಗಳನ್ನು ಮೀರಿ ಚಿಣ್ಣರ ಸಾಂಸ್ಕೃತಿಕ ವೈಭವವು, ಮಕ್ಕಳ ಸಂತೆ, ಮಕ್ಕಳ ಜಾಥಾ, ಮಾತೃ  ಭೋಜನ, ಮಿತ್ರ ಭೋಜನ ಮತ್ತು ಹಲವು ಕಾರ್ಯಕ್ರಮಗಳಿಗಳಿಗೆ ಕ್ಷಣಗಣನೆ ಶುರುವಾಗಿದೆ.

ನಿಮ್ಮ ಅಭಿಪ್ರಾಯವನ್ನು ಮುಕ್ತವಾಗಿ ಕಾಮೆಂಟ್ ಬಾಕ್ಸ್ನಲ್ಲಿ ತಿಳಿಸಿ

Hosanagara News
Hosanagara News

Hosanagara School, Chiinara Samskrutika Vaibhava,Namma Hosanagara 

Leave a Reply

Your email address will not be published. Required fields are marked *