Hosanagara,PSI,Hosanagara,Malenadu.
“Shankar Gowda Patil” will arrive as the new PSI of Hosnagar Police Station.
ಹೊಸನಗರ: ಸರ್ಕಾರಿ ಆಡಳಿತಾತ್ಮಕ ವ್ಯವಸ್ಥೆಗೆ ಅನುಗುಣವಾಗಿ ವರ್ಗಾವಣೆಗೊಂಡು ಹೊಸನಗರ ಪೊಲೀಸ್ ಠಾಣೆ ಪಿಎಸ್ಐ ಆಗಿ ವಿಜಾಪುರ ಜಿಲ್ಲೆಯ ಶಂಕರ್ ಗೌಡ ಪಾಟೀಲ ಅವರು ಅಧಿಕಾರವನ್ನು ಸ್ವೀಕರಿಸಲಿದ್ದಾರೆ.
ದಕ್ಷ ಪ್ರಾಮಾಣಿಕ ಹಾಗೂ ಜನಸ್ನೇಹಿ ಅಧಿಕಾರಿಯೆಂಬ ಹೆಗ್ಗಳಿಕೆಯನ್ನು ತಾವು ಕಾರ್ಯನಿರ್ವಹಿಸಿದ ಎಲ್ಲಾ ಪೊಲೀಸ್ ಸ್ಟೇಷನ್ ವ್ಯಾಪ್ತಿಯಲ್ಲಿ ಪಡೆದಿರುವ ಇವರು ಶಿವಮೊಗ್ಗ ಜಿಲ್ಲೆಯ ಸಾಗರ, ಶಿಕಾರಿಪುರ, ಹಾವೇರಿಯ ಕುಮಾರ ಪಟ್ಟಣಂ, ಗುತ್ತಲ.
ದಾವಣಗೆರೆ ಜಿಲ್ಲೆಯ ಹದಾಡಿ ಪೊಲೀಸ್ ಠಾಣೆಯಲ್ಲಿ ಕರ್ತವ್ಯವನ್ನ ನಿರ್ವಹಿಸಿದ್ದು ಕಾನೂನು ವಿರೋಧಿ ಚಟುವಟಿಕೆಗಳಲ್ಲಿ ಭಾಗಿಯಾದವರ ಹೆಡೆಮುರಿ ಕಟ್ಟುವಲ್ಲಿ ಯಶಸ್ವಿಯಾಗಿದ್ದಾರೆ ಇದೀಗ ಹೊಸನಗರ ಪೊಲೀಸ್ ಠಾಣೆಗೆ ವರ್ಗಾವಣೆಗೊಂಡಿರುತ್ತಾರೆ.
– ಮನು ಸುರೇಶ್
Hosanagara,PSI,Hosanagara,Malenadu.