Hosanagara marikamba jatre : ನಾಳೆಯಿಂದ ಹೊಸನಗರ ಶ್ರೀ ಮಾರಿಕಾಂಬ ದೇವಿಯ ಅದ್ದೂರಿ ಜಾತ್ರಾ ಮಹೋತ್ಸವ

Hosanagara marikamba jatre

Hosanagara, Hosanagara marikamba jatre.

                                                    Hosanagara marikamba jatre

ಹೊಸನಗರ : ತಾಲೂಕಿನ ಪ್ರಸಿದ್ಧ ಶ್ರೀ ಮಾರಿಕಾಂಬಾ ದೇವಿಯ ವಾರ್ಷಿಕ ಜಾತ್ರಾ ಮಹೋತ್ಸವ ಫೆಬ್ರವರಿ 4ರಿಂದ 9ದಿನಗಳ ಕಾಲ ವಿಜೃಂಭಣೆಯಿಂದ ನಡೆಯಲಿದ್ದು ಈ ಕುರಿತಾಗಿ ಮಾರಿಕಾಂಬಾ ಜಾತ್ರಾ ಸಮಿತಿಯ ಅಧ್ಯಕ್ಷ ಲಕ್ಷ್ಮಿನಾರಾಯಣ ಅವರು ಈ ಮಹೋತ್ಸವದ ವಿವರಗಳನ್ನು ಹಂಚಿಕೊಂಡಿದ್ದಾರೆ.

 ಫೆಬ್ರವರಿ 4, ಮಂಗಳವಾರ ಬೆಳಿಗ್ಗೆ 8 ಗಂಟೆಗೆ, ದೇವಿಯ ತವರು ಮನೆಯಾದ ಹಳೇ ಸಾಗರ ರಸ್ತೆಯ ದುರ್ಗಾಂಬಾ ದೇವಾಲಯದಲ್ಲಿ ಮಾರಿಕಾಂಬಾ ದೇವಿಯ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗುವುದು.  ಅದೇ ದಿನ  ಸಂಜೆ 9 ಗಂಟೆಯವರೆಗೆ ವಿಶೇಷ ಪೂಜೆ, ಆರತಿ ಮತ್ತು ಧಾರ್ಮಿಕ ಕ್ರಿಯೆಗಳು ನಡೆಯಲಿವೆ. ನಂತರ, ದೇವಿಯ ವಿಗ್ರಹವನ್ನು “ಗಂಡನ ಮನೆಯಾದ   ಮಾರಿಗುಡ್ಡದ ದೇವಾಲಯಕ್ಕೆ  ಮೂರ್ತಿಯನ್ನು ತಂದು 8 ದಿನಗಳ ಕಾಲ (ಫೆಬ್ರವರಿ 5 ರಿಂದ 12) ಜಾತ್ರೋತ್ಸವವನ್ನು ಆಚರಿಸಲಾಗುವುದು.

ವಿಶೇಷ ಆಕರ್ಷಣೆಗಳು ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು:

ಈ ಬಾರಿಯ ಜಾತ್ರೆಯಲ್ಲಿ ವಿಜಯ್ ಅಮ್ಯೂಸ್ಮೆಂಟ್ ಸಂಸ್ಥೆಯವರಿಂದ ರೋಮಾಂಚಕ  (ಜಾಯಿಂಟ್ ವೀಲ್, ಕೋಲಂಬಸ್, ಮಾರುತಿ ಡೂಮ್), ಮಕ್ಕಳ ರೈಲು, ಬ್ರೇಕ್ ಡ್ಯಾನ್ಸ್ ಪ್ರದರ್ಶನಗಳು ಸೇರಿದಂತೆ ಅನೇಕ ಮನರಂಜನಾ ಆಟಗಳು ಜನರನ್ನು ಆಕರ್ಷಿಸಲಿದೆ. ಇದರ ಜೊತೆಗೆ, ಪ್ರತಿದಿನ ರಾತ್ರಿ ಪ್ರಸಿದ್ಧ ಕಲಾವಿದರ ಸಂಗೀತ ಸಂಜೆ ಮತ್ತು ವಿಶೇಷ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದೆ:

ದಿನಾಂಕವಾರದ ದಿನಕಾರ್ಯಕ್ರಮ
ಫೆಬ್ರವರಿ 6ಗುರುವಾರಸಾಂಸ್ಕೃತಿಕ ನೃತ್ಯ ಮತ್ತು ಗೀತೆಗಳ ಪ್ರದರ್ಶನ
ಫೆಬ್ರವರಿ 7ಶುಕ್ರವಾರಭದ್ರಾವತಿ ತಂಡದ ಆರ್ಕೆಸ್ಟ್ರಾ ಸಂಗೀತ
ಫೆಬ್ರವರಿ 8ಶನಿವಾರಲೈವ್ ಮ್ಯೂಸಿಕ್ ಆರ್ಕೆಸ್ಟ್ರಾ
ಫೆಬ್ರವರಿ 9ಭಾನುವಾರಕುಂದಾಪುರ ರೂಪಕಲಾ ತಂಡದ ನಾಟಕ “ಇನ್ಸ್ಪೆಕ್ಟರ್ ಅಣ್ಣಪ್ಪ”
ಫೆಬ್ರವರಿ 10ಸೋಮವಾರಡೆಸ್ಟಿನಿ ಡ್ಯಾನ್ಸ್ ಕೊಪ್ಪದವರ ನೃತ್ಯ ಕಾರ್ಯಕ್ರಮ
ಫೆಬ್ರವರಿ 11ಮಂಗಳವಾರಮ್ಯೂಸಿಕಲ್ ನೈಟ್ ಮತ್ತು ಬಹುರಂಗಿ ನೃತ್ಯ ಪ್ರದರ್ಶನಗಳು

ಸಾರ್ವಜನಿಕರಿಗೆ ಸಮಿತಿಯ ಆಹ್ವಾನ: 

 ಸಮಿತಿಯು ಸಾರ್ವಜನಿಕರು  ಮತ್ತು  ಭಕ್ತಾದಿಗಳು  ಅತೀ ಹೆಚಿನ್ನ ಸಂಖ್ಯೆಯಲ್ಲಿ ಈ ಜಾತ್ರಾಮಹೋತ್ಸವದಲ್ಲಿ ಪಾಲ್ಗೊಳ್ಳುವ ಮೂಲಕ ಕಾರ್ಯಕ್ರಮವನ್ನ ಯಶಸ್ವಿಗೊಳಿಸಿ ಕೊಡುವಂತೆ ಜಾತ್ರಾ ಸಮಿತಿಯ ಅಧ್ಯಕ್ಷರು ಆದ ಲಕ್ಷ್ಮಿನಾರಾಯಣ ಅವರು ವಿನಂತಿಸಿದ್ದಾರೆ.

Hosanagara, Hosanagara marikamba jatre.

ಇದನ್ನೂ ಓದಿ: Shivamogga Murder Case : ಆಧುನಿಕ ಪ್ರೀತಿಯ ಕೊಲೆ ಕಹಾನಿ

Hosanagara News
Hosanagara News

Leave a Reply

Your email address will not be published. Required fields are marked *