Hosanagara,Bus Stand, Road, Main Road,MLA,
“Private Bus Stand”
ಹೊಸನಗರ: ಪಟ್ಟಣದ ಖಾಸಗಿ ಬಸ್ ನಿಲ್ದಾಣದ ಪ್ರಮುಖ ಪ್ರವೇಶ ಗೇಟ್ ನ ಬಳಿ ಅಪಾಯಕಾರಿ ಗುಂಡಿಗಳು ನಿರ್ಮಾಣವಾಗಿದೆ.
ನಿತ್ಯ ಖಾಸಗಿ ಬಸ್ ಗಳು ಸೇರಿ ನೂರಾರು ವಾಹನಗಳು ಖಾಸಗಿ ಬಸ್ ನಿಲ್ದಾಣದ ಒಳಗೆ ಮತ್ತು ಹೊರಗೆ ಸಂಚರಿಸುತ್ತದೆ.

ಈ ಸ್ಥಳದಲ್ಲಿ ಈಗಾಗಲೇ ಬಹಳಷ್ಟು ದ್ವಿಚಕ್ರ ವಾಹನ ಸವಾರರು ಬಿದ್ದು ಗಾಯಗೊಂಡಿದ್ದಾರೆ ಬಸ್ ಗಳು ಸಹ ಇದನ್ನು ದಾಟುವಾಗ ನಿಯಂತ್ರಣ ತಪ್ಪಿದಂತಹ ಹಲವಾರು ಘಟನೆಗಳು ಈಗಾಗಲೇ ನಡೆದಿದೆ ಹೊಸನಗರ ಶಿವಮೊಗ್ಗ ಹಾಗೂ ಹೊಸನಗರ ಮಂಗಳೂರು ಹೆದ್ದಾರಿಗೆ ಹೊಂದಿಕೊಂಡಿರುವ ಈ ಖಾಸಗಿ ಬಸ್ ನಿಲ್ದಾಣದ ಪ್ರವೇಶ ದ್ವಾರದಲ್ಲಿ ಇಂತಹ ದೊಡ್ಡ ಪ್ರಮಾಣದ ಗುಂಡಿ ನಿರ್ಮಾಣವಾಗಿರುವುದು ಯಾವ ಸಮಯದಲ್ಲಾದರೂ ಯಾವುದೇ ವಾಹನಗಳು ಇಲ್ಲಿ ಅಪಘಾತ ಕಿಡಾಗಬಹುದು, ಈ ಬಗ್ಗೆ ಸ್ಥಳೀಯರು, ಖಾಸಗಿ ಬಸ್ ಮಾಲೀಕರು ಹಾಗೂ ಕಾರ್ಮಿಕರು ಸ್ಥಳೀಯ ಅಧಿಕಾರಿಗಳ ಗಮನಕ್ಕೆ ತಂದಿದ್ದು ಈವರೆಗೂ ಸಂಬಂಧಪಟ್ಟ ಸ್ಥಳೀಯ ಅಧಿಕಾರಿಗಳಾಗಲಿ ಹೆದ್ದಾರಿ ಪ್ರಾಧಿಕಾರವಾಗಲಿ ಕ್ರಮ ಕೈಗೊಳ್ಳದೆ ಇರುವುದು ವಿಪರ್ಯಾಸವಾಗಿದೆ..


– ಮನು ಸುರೇಶ್
Hosanagara,Bus Stand, Road, Main Road,MLA,
