ಹೊಸನಗರ: ಹೊಸನಗರ ಪೊಲೀಸ್ ಠಾಣ ವ್ಯಾಪ್ತಿಯ ಎಂ. ಗುಡ್ಡೆಕೊಪ್ಪ ಗ್ರಾಮ ಪಂಚಾಯತ್ ಎದುರು ರಾಜ್ಯ ಹೆದ್ದಾರಿ 17 ರಲ್ಲಿ ಇಂದು ಸಂಜೆ 6.40 ರ ಸುಮಾರಿಗೆ ಹೊಸನಗರದಿಂದ ಶಿವಮೊಗ್ಗ ಕಡೆಗೆ ಹೋಗುತಿದ್ದ ಮಾರುತಿ ಓಮ್ನಿ ಹಾಗೂ ಶಿವಮೊಗ್ಗ ಕಡೆಯಿಂದ ಹೊಸನಗರ ಕಡೆಗೆ ಸಾಗುತ್ತಿದ್ದ ಟಿಪ್ಪರ್ ಲಾರಿ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ್ದು 4 ಮಕ್ಕಳು ಸೇರಿದಂತೆ ಗಾಡಿಯಲ್ಲಿದ್ದ ಹಲವರಿಗೆ ಗಂಭೀರ ಗಾಯಗಳಾಗಿದ್ದು ಹೊಸನಗರ ಸರ್ಕಾರಿ ಆಸ್ಪತ್ರೆಗೆ ಕೊಂಡೊಯ್ದು ಅಲ್ಲಿಂದ ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲ್ ಮತ್ತು ಶಿವಮೊಗ್ಗ ಮೆಗಾನ್ ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ.
ಅಪಘಾತದ ತೀವ್ರತೆಗೆ ಓಮ್ನಿ ಕಾರು ಸಂಪೂರ್ಣ ನುಜ್ಜು ಗುಜ್ಜಾಗಿದ್ದು ಗ್ರಾಮಸ್ಥರ ಸಹಾಯದಿಂದ ಅಪಘಾತವಾದ ಕಾರಿನಲ್ಲಿ ಸಿಲುಕಿಕೊಂಡಿದ್ದ ಚಾಲಕನನ್ನು ಹೊರತೆಗೆಯಲಾಯಿತು.
ಗಾಯಾಳುಗಳನ್ನು ಹೆಚ್ಚಿನ ಚಿಕಿತ್ಸೆಗಾಗಿ ಬೇರೆಡೆ ರವಾನಿಸಲು ಪಟ್ಟಣ ಪಂಚಾಯಿತಿಯ ಸದಸ್ಯರಾದ ಸುರೇಂದ್ರ ಕೋಟ್ಯಾನ್ ಹಾಗೂ ಶಾಸಕರ ಆಪ್ತ ಸಹಾಯಕರಾದ ಮಂಜು ಸಣ್ಣಕ್ಕಿ ಹಾಗೂ ಅನೇಕ ಸ್ಥಳೀಯರು ಸಹಕರಿಸಿದರು. ಗಾಯಾಳುಗಳನ್ನು ಕೋಡೂರು ಸಮೀಪದ ಕಾರಕ್ಕಿ ಗ್ರಾಮಸ್ತರೆಂದು ಸ್ಥಳಿಯರು ಗುರುತಿಸಿದ್ದಾರೆ.