holi 2024 date,holi wishes,happy holi wishes.
ಹೊಸನಗರ : ದಿನಾಂಕ: 24 ಮಾರ್ಚ್ ರಂದು ಪಟ್ಣದ ಸಾರ್ವಜನಿಕ ಕ್ರೀಡಾಂಗಣದಲ್ಲಿ ಆರ್,ಎಸ್, ಎಸ್ ಕಾರ್ಯಕರ್ತರು ಬಹು ವಿಜೃಂಭಣೆಯಿಂದ ಹೋಳಿ ಹಬ್ಬವನ್ನು ಆಚರಿಸಿದರು.
ಸಂಘದ ಪ್ರಾರ್ಥನೆ ಮುಗಿದ ನಂತರ 50ಕ್ಕು ಹೆಚ್ಚು ಸ್ವಯಂ ಸೇವಕರು ಪರಸ್ಪರ ಬಣ್ಣ ಎರಚುವ ಮೂಲಕ ಹೋಳಿ ಹಬ್ಬಕ್ಕೆ ಚಾಲನೆ ನೀಡಿದರು.
ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ತೆರಳಿ ಮಿತ್ರರಿಗೆ,ಹಾಗು ಮಾತೆಯರಿಗೆ ಬಣ್ಣವನ್ನು ನೀಡಿ ಶುಭಾಶಯ ಕೋರಿ ಜಾತಿ,ಪಂಥ.ಮತ.ಬಡವ.ಬಲ್ಲಿದ ಎಂಭ ಬೇಧವಿಲ್ಲದೆ ನಾವೆಲ್ಲರು ತಾಯಿ ಭಾರತ ಮಾತೆಯ ಮಕ್ಕಳು ಎಂಬ ಸಂದೇಶವನ್ನು ನೀಡಿದರು.
ಈ ಸಂದರ್ಭದಲ್ಲಿ ಸಂಘದ ಹಿರಿಯರಾದ ರಮೇಶ್ ಹಲಸಿನಕಟ್ಟೆ, ವಿನಾಯಕ ಬಾಲಾಜಿ ಪ್ಯಾನ್ಸಿ ಸ್ಟೋರ್ಸ್, ಬಿ.ಎಸ್.ಸುರೇಶ್ ಸ್ಪಂದನಾ ಪ್ರಿಂಟರ್ಸ್,ಜೆ.ಸಿ.ಐ ಡೈಮಾಂಡ್ ನ ಅಧ್ಯಕ್ಷರಾದ ಅನೂಪ್ ಅರವಿಂದ್,ಸಂದೇಶ್ ಶಿಕ್ಷಕರು, ಶ್ರೀಧರ ಬಂಡಾರಿ,ಮಂಜು, ದರ್ಶನ್, ಮುಂತಾದವರು ಇದ್ದರು.
ನಿಮ್ಮ ಅಭಿಪ್ರಾಯವನ್ನು ಮುಕ್ತವಾಗಿ ಕಾಮೆಂಟ್ ಬಾಕ್ಸ್ನಲ್ಲಿ ತಿಳಿಸಿ
holiholi 2023, date,holi 2024, wishes,happy holi wishes.