Hosanagara,Gurui Schol,Guruji school Hosanagara
Guruji school Hosanagara
ಹೊಸನಗರ : ಪಟ್ಟಣದ ಹೆಸರಾಂತ ಖಾಸಗಿ ಶಿಕ್ಷಣ ಸಂಸ್ಥೆಯಾದ ಶ್ರೀ ಗುರೂಜಿ ಇಂಟರ್ನ್ಯಾಷನಲ್ ರೆಸಿಡೆನ್ಸಿಯಲ್ ಸ್ಕೂಲ್ ನ ಆಡಳಿತ ಮಂಡಳಿ ವಿದ್ಯಾರ್ಥಿಗಳ ದೈಹಿಕ ಸದೃಢತೆಗಾಗಿ ಮಾನಸಿಕ ವಿಕಸನಕ್ಕಾಗಿ ಇಂದು ವಿದ್ಯಾರ್ಥಿಗಳಿಗಾಗಿ ಕೆಸರುಗದ್ದೆ ಓಟದ ಸ್ಪರ್ಧೆಯನ್ನು ಏರ್ಪಡಿಸಿದ್ದರು ಈ ಒಂದು ಸ್ಪರ್ಧೆಯು ಶಾಲಾ ಮಕ್ಕಳಲ್ಲಿ ಹೊಸ ಉಲ್ಲಾಸವನ್ನು ತುಂಬಿತ್ತು ಇತ್ತೀಚಿನ ದಿನಗಳಲ್ಲಿ ಸ್ಪರ್ಧಾತ್ಮಕ ಶಿಕ್ಷಣ ಜಗತ್ತಿನಲ್ಲಿ ಬರೀ ಓದಿನಲ್ಲೆ ಮುಳುಗಿರುವ ವಿದ್ಯಾರ್ಥಿಗಳು ಮಾನಸಿಕ ಖಿನ್ನತೆಗೆ ಒಳಗಾಗಿ ತಮ್ಮ ಶಿಕ್ಷಣದ ಭವಿಷ್ಯವನ್ನು ಹಾಳು ಮಾಡಿಕೊಂಡಿರುವುದು ಅಲ್ಲಲ್ಲಿ ಕಂಡುಬರುತ್ತದೆ ಇನ್ನೇನು ಕೆಲವೇ ದಿನಗಳಲ್ಲಿ ವಾರ್ಷಿಕ ಪರೀಕ್ಷೆ ಬರುತ್ತದೆ ಅಂಕಪಟ್ಟಿಯಲ್ಲಿ ಉತ್ತಮ ಸ್ಥಾನಕ್ಕಾಗಿ ಮಾನಸಿಕ ಒತ್ತಡವು ಒಮ್ಮೊಮ್ಮೆ ವಿದ್ಯಾರ್ಥಿಗಳಿಗೆ ಸಮಸ್ಯೆ ಒಡ್ಡಬಹುದು ಎಂಬ ಯೋಚನೆಯಿಂದ ಅವರನ್ನು ಮಾನಸಿಕ ಒತ್ತಡದಿಂದ ದೂರ ಮಾಡಿ ವಿದ್ಯಾರ್ಥಿಗಳಲ್ಲಿ ಮನೋಲ್ಲಾ ಸವನ್ನು ಹೆಚ್ಚಿಸಿ ಶಿಕ್ಷಣ ಕ್ಷೇತ್ರದಲ್ಲಿ ಅದಮ್ಯ ಸಾಧನೆ ಮಾಡಲು ಈ ಸಂಸ್ಥೆ ಮಕ್ಕಳಿಗಾಗಿ ಇಂತಹ ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸುತ್ತಿರುವುದು ಸಂತಸದ ಸಂಗತಿಯಾಗಿದೆ .

ಪಾಠದ ಜೊತೆಗೆ ಆಟವು ಮುಖ್ಯ :
ಕೇವಲ ಪಾಠ ಒಂದೇ ಶಿಕ್ಷಣವಲ್ಲ ಬದಲಾಗಿ ಆಟವು ಕೂಡ ಶಿಕ್ಷಣದ ಒಂದು ಅವಿಭಾಜ್ಯ ಅಂಗ ವಿದ್ಯಾರ್ಥಿಗಳು ದೈಹಿಕವಾಗಿ ಸದೃಢವಾಗಿದ್ದರೆ ಆರೋಗ್ಯವು ಕೂಡ ಸ್ಥಿರವಾಗಿರುತ್ತದೆ ಇವೆಲ್ಲವನ್ನೂ ಜೊತೆಗೂಡಿಸಿಕೊಂಡಾಗ ವಿದ್ಯಾರ್ಥಿಗಳ ವಿದ್ಯಾಭ್ಯಾಸವು ಕೂಡ ಅತ್ಯುತ್ತಮವಾಗಿರುತ್ತದೆ ಎನ್ನುವುದು ಶಿಕ್ಷಣ ಸಂಸ್ಥೆಯ ಉದ್ದೇಶವಾಗಿದೆ.

ಯಾವ ಯಾವ ಸ್ಪರ್ಧೆಗಳಿತ್ತು..?
ಎಲ್ ಕೆ ಜಿ ಯು ಕೆ ಜಿ ವಿದ್ಯಾರ್ಥಿಗಳಿಗಾಗಿ ಕಪ್ಪೆ ಜಿಗಿತ, ಅಡಿಕೆ ಮರದ ಹಾಳೆಯಲ್ಲಿ ಕುಳಿತು ಎಳೆದುಕೊಂಡು ಓಡುವಂತ ಆಟ ಉಳಿದ ವಿದ್ಯಾರ್ಥಿಗಳಿಗಾಗಿ ಹಗ್ಗ ಜಗ್ಗಾಟ, ಕಬ್ಬಡ್ಡಿ, ಜೋಡಿ ಕಾಲಿನ ಓಟ ಹಾಗೂ
ಓಟದ ಸ್ಪರ್ಧೆ ಇತ್ತು ಈ ಎಲ್ಲ ಸ್ಪರ್ಧೆಗಳಲ್ಲಿ ವಿದ್ಯಾರ್ಥಿಗಳು ಸಂಭ್ರಮದಿಂದ ಪಾಲ್ಗೊಂಡು ಬಹುಮಾನವನ್ನು ಕೂಡ ಪಡೆದುಕೊಂಡರು.
ಕೆಸರಿನಲ್ಲಿ ಮಿಂದೆದ್ದ ಪುಟಾಣಿಗಳು
ಮನೆಯಲ್ಲಿ ನೀರಿನಲ್ಲಿ. ಮಣ್ಣಿನಲ್ಲಿ ಆಟವಾಡಿದರೆ ಅಪ್ಪ ಅಮ್ಮನ ಹತ್ತಿರ ಶಿಕ್ಷೆ ಅನುಭವಿಸಬೇಕೋ ಏನೋ ಆದರೆ ಇಲ್ಲಿ ಚಿಕ್ಕ ಚಿಕ್ಕ ವಿದ್ಯಾರ್ಥಿಗಳು ಕೆಸರಿನಲ್ಲಿ ಮೀನಿನಂತೆ ಒದ್ದಾಡುತ್ತ ಸಂಭ್ರಮದಿಂದ ಕುಣಿದಾಡಿದರು ಯಾರಲ್ಲೂ ಕೂಡ ಭಯ, ಅಂಜಿಕೆ ಇರಲಿಲ್ಲ ತಮ್ಮದೇ ಆದ ಪ್ರಪಂಚದಲ್ಲಿ ಕುಣಿಯುತ್ತ ಕೆಸರಿನಲ್ಲಿ ಮಿಂದೇದ್ದ ಪುಟಾಣಿಗಳು ಹೋಳಿ ಹಬ್ಬದಲ್ಲಿ ಬಣ್ಣ ಎರ ಚ್ಚಿದಂತೆ ಇಲ್ಲಿ ವಿದ್ಯಾರ್ಥಿಗಳು ಕೆಸರಿನಿಂದ ನಮ್ಮ ಸಹಪಾಠಿಗಳ ಕೆನ್ನೆಗೆ, ಬೆನ್ನಿಗೆ ಹಚ್ಚುತ್ತ ಸಂಭ್ರಮಿಸುತ್ತಿದ್ದರು
ಈ ಸುಂದರ ಕ್ಷಣದಲ್ಲಿ ಆಡಳಿತ ಮಂಡಳಿಯ ಜೊತೆಗೆ ಪೋಷಕರು ಕೂಡ ಈ ಶಿಕ್ಷಣ ಸಂಸ್ಥೆಯ ಜೊತೆಯಲ್ಲಿ ಸಹಕರಿಸಿ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಿಸಿದರೆ ಇದರ ಮುಂದಾಳತ್ವವನ್ನು ದೈಹಿಕ ಶಿಕ್ಷಕ ನಾಗರಾಜ್ ಜೊತೆಗೆ ಸಹ ಶಿಕ್ಷಕರು ಹಾಗೂ ವಾಹನ ಚಾಲಕರಾದ ಇಸ್ಮಾಯಿಲ್, ಶಶಿಕುಮಾರ್ ಇವರುಗಳುಕೂಡ ಮಕ್ಕಳ ಜೊತೆ ಮಕ್ಕಳಾಗಿ ಸಂಭ್ರಮಿಸಿದರು,ಹಾಗೂ ವಿದ್ಯಾಭಾರತಿ ಶಿಕ್ಷಣ ಸಂಸ್ಥೆ ಯ ತಾಂತ್ರಿಕ ನಿರ್ದೇಶಕರಾದ ನಾಗೇಶ್ ಸರ್ ಉಪಸ್ಥಿತಿ ಇದ್ದರು

Hosanagara,Gurui Schol,Guruji school Hosanagara

