Emergency Alert Messages: ನಿಮಗೂ ಬಂತ ಎಚ್ಚರಿಕೆ ಸಂದೇಶ : ರೆಡ್ ಅಲರ್ಟ್

Emergency Alert Messages

Emergency alert messages on phone, sample emergency alert messages, on phone India, Shivamogga Rain, Hosanagara Rain, Nagara.

                            A warning message for you too: Red Alert

ಶಿವಮೊಗ್ಗ: ಅನೇಕರ ಫೋನ್ ಗೆ ಭೂ ಕುಸಿತದ ಕುರಿತಾಗಿ ಒಂದು ಸಂದೇಶ ಬಂದಿದೆ, ಹಾಗಿದ್ರೆ ಇದನ್ನ ಯಾರು ಕಳ್ಸಿದ್ದು ಹಾಗೆ ಯಾಕಾಗಿ ಕಳುಹಿಸಿದ್ದು ಎಂಬ ಪ್ರಶ್ನೆ ನಿಮ್ಮಲಿ ಮೂಡಿದೆಯೇ ಹಾಗಿದ್ದರೆ ಉತ್ತರ ಇಲ್ಲಿದೆ ನೋಡಿ.

Emergency Alert Messages

ರಾಷ್ಟ್ರೀಯ ವಿಪತ್ತು ನಿರ್ವಹಣ ಪ್ರಾಧಿಕಾರ ಹಾಗು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ನಿಗಾ ಕೇಂದ್ರ  ( Karnataka State Natural Disaster Monitoring Centre) ದವರು ತುರ್ತು ಸಂದರ್ಭದಲ್ಲಿ ಈ ರೀತಿಯ ಸಂದೇಶ ಕಳುಹಿಸುತ್ತಾರೆ.

ಶಿವಮೊಗ್ಗ ಹಾಗು ಸುತ್ತಮುತ್ತಲಿನ ಜಿಲ್ಲೆಗಳಲ್ಲಿ ಹೆಚ್ಚಿನ ಮಳೆಯಾಗುತ್ತಿರುವ  ಕಾರಣ  ರೆಡ್ ಅಲರ್ಟ್ ಜಾರಿಯಾಗಿದೆ  ಹಾಗಾಗಿ  ಈ ಸಂದೇಶ ನಿಮ್ಮೆಲ್ಲರನ್ನ ತಲುಪಿದೆ. 

 

 ಮಾಹಿತಿ ಹೇಗೆ ತಿಳಿಯುತ್ತೆ: 

ಸ್ಯಾಟಲೈಟ್ ಚಿತ್ರಣ ಮತ್ತು ಭೌಗೋಳಿಕ ಮಾಹಿತಿ ವ್ಯವಸ್ಥೆ (GIS) ನಕ್ಷೆಗಳು ತುರ್ತು ಮತ್ತು ವಿಪತ್ತುಗಳ ಕುರಿತಾಗಿ ಅಧಿಕಾರಿಗಳಿಗೆ ಮಾಹಿತಿ ದೊರಕುತ್ತವೆ. ಹೀಗಾಗಿ ಅಧಿಕಾರಿಗಳಿಗೆ ಚಂಡಮಾರುತಗಳು, ಸುಂಟರಗಾಳಿಗಳು, ಜ್ವಾಲಾಮುಖಿಗಳು, ಭೂಕಂಪಗಳು ಮತ್ತು ಚಂಡಮಾರುತದ ಹಾನಿಯಂತಹ ನೈಸರ್ಗಿಕ ವಿಕೋಪಗಳ ಮಾಹಿತಿಯ ಮಾನಿಟರಿಂಗ್ ಮಾಡಲು ಸುಲಭವಾಗುತ್ತದೆ.

Emergency Alert Messages

ನಿರಂತರ ಭಾರೀ ಮಳೆಯಿಂದಾಗಿ ಭೂಕುಸಿತ ಘಟನೆಗಳ ಸಂಭವನೀಯತೆ ಹೆಚ್ಚಾಗಿರುತ್ತದೆ. ದಯವಿಟ್ಟು ಹೆಚ್ಚಿನ ಇಳಿಜಾರು ಪ್ರದೇಶಗಳಿಂದ ದೂರವಿರಲು ಮತ್ತು ನೆಲ ಬಿರಿಯುವುದು, ಮರ ಬೀಳುವಂತಹ ಅಸಮಾನ್ಯ ಶಬ್ದಗಳಿಂದ ಚ್ಚರಿಕೆಯಿಂದ ಇರಿ. KSNDMC ಈ ರೀತಿಯಾದ ಸಂದೇಶ ಕೆಲವರಿಗೆ ಕನ್ನಡಲ್ಲಿ ಬಂದರೆ ಇನ್ನು ಕೆಲವರಿಗೆ ಇಂಗ್ಲಿಷ್ ಹಾಗು ಬೇರೆ ಭಾಷೆಗಳಲ್ಲಿ ಬಂದಿದೆ.  

ಭಯ ಬೇಡ ಮುಂಜಾಗೃತೆ ಇರಲಿ: 

ಈ ಸಂದೇಶ ನೋಡಿ ಅನೇಕರಲ್ಲಿ ಭಯದ ವಾತಾವರಣ ಸೃಷ್ಟಿಯಾಗಿದೆ, ಯಾವುದೇ ಭಯ ಪಡುವ ಅವಶ್ಯಕತೆ ಇಲ್ಲ, ನೀರಿನ ಮಟ್ಟ ಹೆಚ್ಚುತ್ತಿರುವ ಕಾರಣ ನದಿ ಹೊಳೆ ಗಳು ಅಪಾಯದ ಮಟ್ಟವನ್ನ ಮೀರಿ ಹರಿಯುತ್ತಿವೆ ಹೀಗಾಗಿ ಸಾರ್ವಜನಿಕರು ಹೊಳೆ ನದಿಗಳಿಗೆ ಅನಾವಶ್ಯಕವಾಗಿ ಇಳಿಯ ಬೇಡಿ ಮತ್ತು ನದಿ ತೀರದ ಪ್ರದೇಶದವರು ಹೆಚ್ಚಿಗೆ ಜಾಗೃತರಾಗಿರಿ.

ಇದನ್ನೂ ಓದಿ: Shivamogga Murder Case : ಆಧುನಿಕ ಪ್ರೀತಿಯ ಕೊಲೆ ಕಹಾನಿ

Hosanagara News
Hosanagara News

Leave a Reply

Your email address will not be published. Required fields are marked *