Deforestation,Hosanagara School, Hosanagara Guruji School
ಹೊಸನಗರ: ಮನುಷ್ಯರು ತಮ್ಮ ಅನುಕೂಲಕ್ಕಾಗಿ ಮಾಡಿರುವ ಕೆಲವು ತಪ್ಪುಗಳಿಂದ ಪರಿಸರದಲ್ಲಿ ಇಂದು ಅಸಮತೋಲನ ಉಂಟಾಗಿ ಇಂತಹ ಬರಗಾಲದ ಪರಿಸ್ಥಿತಿ (Drought situation) ಎದುರಾಗಿದೆ ಎಂದು ಹಿರಿಯ ವ್ಯವಹಾರ ನ್ಯಾಯದೀಶರು ಮತ್ತು ತಾಲ್ಲೂಕು ಕಾನೂನು ಸೇವಾ ಸಮಿತಿಯ ಅಧ್ಯಕ್ಷರಾದ ಮಾನ್ಯ ಶ್ರೀ ಸಂತೋಷ್ ಎಂ ಎಸ್ ( Santhosh S ) ಇವರು ಹೇಳಿದರು
ಪಟ್ಟಣದ ವಿದ್ಯಾಭಾರತಿ ಶಿಕ್ಷಣ ಸಂಸ್ಥೆಹಾಗು (ರಿ) ಶ್ರೀ ಗುರೂಜಿ ಇಂಟರ್ ನ್ಯಾಷನಲ್ ರೆಶಿಡೆನ್ಶಿಯಲ್ ಸ್ಕೂಲ್ (Shri Guruji International School Hosanagara) ಆವರಣದಲ್ಲಿ ಆಯೋಜಿಸಿದ್ದ ಬೀಜಾದುಂಡೆಗಳ ತಯಾರಿಸುವ ಕಾರ್ಯಕ್ರಮವನ್ನು ಬೀಜದುಂಡೆಗಳನ್ನು ಕಟ್ಟುವುದರ ಮೂಲಕ ಉದ್ಘಾಟನೆ ಮಾಡಿ ಮಾತನಾಡಿದ ಅವರು ಇಂತಹ ಪರಿಸ್ಥಿಯನ್ನು ನಿವಾರಣೆ ಮಾಡಲು ನಾವು ಪರಿಸವರನ್ನು ಜಾಗೃತೆಯಿಂದ ಸಂರಕ್ಷಣೆ ಮಾಡಬೇಕು ಇಂದು ನಾವುನೋಡುತ್ತಿರುವ ಗಿಡಮರಗಳು ನಮ್ಮ ತಂದೆ ತಾತಂದಿರು ಅಂದು ನೆಟ್ಟಿದ ಗಿಡಗಳು ಇಂದು ಮರಗಳಾಗಿ ನಮಗೆ ನೆರಳಾಗಿವೆ ಇಂತ ಗಿಡಮರಗಳನ್ನು ನಮ್ಮ ಈ ಸಮಯದಲ್ಲಿ ಅದರ ಸಂರಕ್ಷಣೆಗೆ ನಾವು ಸರಿಯಾದ ತೀರ್ಮಾನ ತೆಗೆದುಕೊಂಡರೆ ನಮ್ಮ ಮುಂದಿನ ಪೀಳಿಗೆಗೆ ಅನುಕೂಲ ಮಾಡಿಕೊಟ್ಟಾಂತಾಗುತ್ತದೆ ಎಂದರು.
ಗುರೂಜಿ ಶಾಲೆಯ ಈ ಕಾರ್ಯಕ್ರಮ ಶ್ಲಾಘನೀಯ
ಗುರೂಜಿ ಶಾಲೆಯ ಈ ಬೀಜಾದುಂಡೆ ಕಾರ್ಯಕ್ರಮ ನೀಜಕ್ಕು ಶ್ಲಾಘನೀಯ ವಾಗಿದೆ ಮಕ್ಕಳಲ್ಲಿಆಟೋಟಾ ಆಡುವಂತಹ ಈ ಸಮಯದಲ್ಲಿ ಶಿಕ್ಷಣದ ಜೊತೆಗೆ ಅರಣ್ಯ ಸಂರಕ್ಷಣೆ, ಪರಿಸರ ಉಳಿಸುವಂತ ಜಾಗೃತಿಯನ್ನು ಮಾಡುತ್ತಿರುವುದು ಅಭಿನಂದನೀಯ ಹಾಗು ವಿದ್ಯಾರ್ಥಿ ಜೀವನದಲ್ಲಿ ಇಂತಹ ಕೆಲಸಗಳನ್ನು ಮೈಗೂಡಿಸಿಕೊಂಡರೆ ಮುಂದಿನ ಜೀವನ ಶೈಲಿಯಲ್ಲಿ ನಿಮಗೆ ಪರಿಸರದ ಕಾಳಜಿಯ ಬಗ್ಗೆ ಅರಿವುಮೂಡುತ್ತದೆ ಎಂದರು.
ಭಗೀರಥನ ಪ್ರಯತ್ನ ಅಗತ್ಯ.
ಇಂತಹ ಕಾರ್ಯಕ್ರಮಗಳು ಸಫಲತೆಹೊಂದಬೇಕಾದರೆ ಭಗೀರಥನ (Bhageeratha) ಪ್ರಯತ್ನಬೇಕಾಗುತ್ತದೆ ಯಾಕೆಂದರೆ ಒಂದು ಉತ್ತಮ ಕಾರ್ಯಕ್ರಮ ಮಾಡುವಾಗ ಅಡೆತಡೆಗಳು ಎದುರಾಗುವುದು ಸಹಜ ಅಂತಹ ಅಡೆತಡೆಗಳನ್ನು ಮೀರಿ ನಮ್ಮ ಗುರಿಯ ಸಫಲತೆಯನ್ನು ಸಾಧಿಸಿ ದಡಗಳನ್ನ ಸೇರಬೇಕಾದರೆ ಭಗೀರಥನಂತಹ ಪ್ರಯತ್ನಮಾಡಬೇಕು ಎಂದು ಸಲಹೆ ನೀಡಿದರು.
ಪ್ರಧಾನ ವ್ಯವಹಾರ ನ್ಯಾಧೀಶರಾದ ಮಾನ್ಯ ಶ್ರೀ ರವಿಕುಮಾರ್ ,ಕೆ ಇವರು ಮಾತನಾಡಿ ಈ ಬೀಜಾದುಂಡೆಯ ಕಾರ್ಯಕಮ ಮಾಡಿದ್ದು ನಮ್ಮ ಸಂವಿದಾನಕ್ಕೆ ಗೌರವ ಸೂಚಿಸಿದಂತೆ ಏಕೆಂದರೆ ನಮ್ಮ ಸಂವಿದಾನದಲ್ಲಿ ಆರ್ಟಿಕಲ್ 51ಎ ಜಿ ನಲ್ಲಿ ಮೂಲಭೂತ ಹಕ್ಕಿನಡಿಯಲ್ಲಿ ಪರಿಸರ ಸಂರಕ್ಷಣೆಗೆ ಮಹತ್ವದ ಒತ್ತು ನೀಡಲಾಗಿದೆ ನಾವು ಹಕ್ಕುಗಳ ಬಗ್ಗೆ ಮಾತ್ರ ಮಾತನಾಡುತ್ತೇವೆ ಆದರೆ ಕರ್ತವ್ಯದ ಬಗ್ಗೆ ಯಾರು ಯೋಚನೆ ಮಾಡುವುದಿಲ್ಲ ಅಂತದರಲ್ಲಿ ಗುರೂಜಿ ಶಾಲೆ ಪರಿಸರ ಸಂಸರಕ್ಷಣೆ ಮಾಡುವ ಕರ್ತವ್ಯವನ್ನು ಫಾಲಿಸುತ್ತಿರುವುದು ಹೆಮ್ಮೆಯ ಸಂಗತಿ ಎಂದರು.
ಜನ್ಮದಿನ ದಂದು ಒಂದೊಂದು ಗಿಡ ನೆಡಿ
ಈ ಶಾಲೆಯಲ್ಲಿ 500 ಕ್ಕು ಹೆಚ್ಚು ವಿದ್ಯಾರ್ಥಿಗಳು ಶಿಕ್ಷಣ ಕಲಿಯುತ್ತಿದ್ದಾರೆ ಅವರೆಲ್ಲರು ತಮ್ಮ ತಮ್ಮ ಜನ್ಮದಿನದಂದು ಒಂದೊಂದು ಗಿಡಗಳನ್ನು ನೆಟ್ಟರೆ ಹೊಸನಗರ ತಾಲ್ಲೋಕಿನಲ್ಲಿ ಒಂದು ಮಹತ್ವದ ಕ್ರಾಂತಿಯನ್ನು ಸೃಷ್ಠಿಮಾಡಬಹುದು ಅಂತಹ ಕಾರ್ಯಕ್ಕೆ ಈ ಶಾಲೆ ಮುನ್ನುಡಿಯಾಗಲಿ ಎಂದು ಹೇಳಿದರು.
ಪರಿಸರ ಚಿಂತಕರಾದ ಹನಿಯ ರವಿ ಮಾತನಾಡಿ
ಇವತ್ತಿನ ದಿನ ಮಲೆನಾಡಿನಂತಹ ಪ್ರದೇಶದಲ್ಲಿ ಬೀಜಾದುಂಡೆ ಮಾಡುವಂತಹ ಪರಿಸ್ಥಿತಿ ಬಂದಿದೆ ಎನ್ನುವಂತಹದ್ದೆ ದುರಾದೃಷ್ಟಕರ ಎಂದರಲ್ಲದೆ ಭೂಮಿಯಲ್ಲಿ ಸಹಜವಾಗಿಯೆ ಗಿಡಗಳು ಹುಟ್ಟುತ್ತವೆ ಆದರೆ ಇಂದು ನಾವು ಅದನ್ನ ನಾಶಮಾಡಿರುವುದರಿಂದ ಈಗ ನಾವು ಇಂತಹ ಕಾರ್ಯಕ್ರಮಗಳನ್ನು ಮಾಡುವಂತಹ ಅನಿವಾರ್ಯತೆ ಬಂದಿದೆ ಎಂದರು.
ಹಿಂದೆ ಮಕ್ಕಳು ಹುಟ್ಟಿದಾಗ ಅದರ ಕರಳುಬಳ್ಳಿಯನ್ನು ಭೂಮಿಯೊಳಗೆ ಹಾಕಿ ಆ ಜಾಗದಲ್ಲಿ ಆ ಮಗುವಿನ ರಾಶಿನಕ್ಷತ್ರಕ್ಕೆ ಸಂಬಂಧಿಸಿದ ಗಿಡಗಳನ್ನು ನೆಡುವ ಪದ್ದತಿ ಇತ್ತು ಆದರೆ ಈಗ ಅದೆಲ್ಲ ನಿಂತುಹೋಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ನೀರು ಮಿತವಾಗು ಬಳಸೋಣ
ಈವತ್ತಿನ ಪರಿಸ್ಥಿಯಲ್ಲಿ ನಾವು ಪರಿಸರ ಸಂರಕ್ಷಣೆ ಜೊತೆಗೆ ನೀರನ್ನು ಮಿತವಾಗಿ ಬಳಸೋದನ್ನ ಕಲಿಯಬೇಕು ಹಾಗು ಪ್ಲಾಸ್ಟೀಕ್ ಬಳಕೆಯನ್ನು ನಾವು ಕಡಿಮೆಮಾಡುವುದರ ಮೂಲಕ ಪರಿಸರ ಸಂಸರಕ್ಷಣೆ ಮಾಡೋಣ ಎಂದು ಸಲಹೆನೀಡಿದರು.
ಉಪವಲಯ ಅರಣ್ಯಾಧಿಕಾರಿಯಾದ ಶ್ರೀಯುತ ಯುವರಾಜ್ ಮಾತನಾಡಿ ಈಗಲೆ ಬಿಸಿಲಿನ ತಾಪ ತಡೆಯಲು ಆಗುತಿಲ್ಲ ಇದು ಹೀಗೆ ಮುಂದುವರಿದರೆ ಇನ್ನು ೨೦ ವರ್ಷದಲ್ಲಿ ನಾವು ಮನೆಯಿಂದ ಹೊರಗೆ ಬರಲು ಆಗುವುದಿಲ್ಲ ಹೊರಗೆ ಬರಬೇಕಾದರೆ ಆಕ್ಸಿಜನ್ ಕಿಟ್ ಬಳಬೇಕಾದ ಪರಿಸ್ಥಿತಿ ಎದರಾಗಬಹದು ಎಂದು ಆತಂಕ ವ್ಯಕ್ತಪಡಿಸಿದರು.
೨೦ವರ್ಷದ ಹಿಂದೆ ನೀರಿನ ಕೊರತೆಯಿರಲಿಲ್ಲ ಈಗ ನೀರಿನ ಅಭಾವ ಎದುರಾಗಿದೆ ಹಾಗಾಗಿ ನಾವು ಪರಿಸರ ಸಂಸರಕ್ಷಣೆ ಬಗ್ಗೆ ಗಂಭೀರವಾಗಿ ಯೋಚನೆ ಮಾಡಬೇಕು ಎಂದರು. ಹಾಗೆ ಅರಣ್ಯ ಇಲಾಖೆಗೆ ಸಂಭಂಧಿಸಿದ ಜಾಗದಲ್ಲಿ ಈ ಶಾಲೆಯವಿದ್ಯಾರ್ಥಿಗಳಿಗೆ ಗಿಡಬೆಳಸಿ ಪೊಸಿಸಲು ಅವಕಾಶವನ್ನು ಮಾಡಿಕೊಡಲಾಗುವುದು ಎಂದು ಬರವಸೆ ನೀಡುವುದರ ಜೊತೆಗೆ ಹಾಗು ಅವರವರ ಮನೆಯಲ್ಲಿ ಗಿಡ ಬೆಳಸಲು ಬಯಸಿದರೆ ಅವರಿಗೆ ಉಚಿತವಾಗಿ ಗಿಡಗಳನ್ನುನೀಡಲಾಗುತ್ತದೆ ಎಂದು ಹೇಳಿದರು.
ವಿಜಯ ಕರ್ನಾಟಕ ಪತ್ರಿಕೆ ವರದಿಗಾರರಾದ ಶ್ರೀ ರವಿರಾಜ್ ಭಟ್ ಮಾತನಾಡಿ
ಈಗಿನ ಬಿಸಿಲಿನ ತಾಪದಿಂದ ನಮ್ಮ ಆರೋಗ್ಯದಮೇಲೆ ವ್ಯತಿರಿಕ್ತ ದುಷ್ಪರಿಣಾಮ ಎದುರಾಗುತ್ತಿದೆ ಇದು ಹೀಗೆ ಮುಂದುವರಿದರೆ ಎಂತಹ ಅನಾಹುತ ಆಗಬಹುದು ಒಮ್ಮೆ ಯೋಚಿಸಿ ಅದಕೋಸ್ಕರ ನಾವು ನಮ್ಮ ಮನೆಯಲ್ಲಿ ಎರಡು ಗಿಡಗಳನ್ನು ನೆಟ್ಟು ಅದನ್ನ ಪೋಷಣೆಮಾಡುವಂತಹ ಸಂಕಲ್ಪವನ್ನು ಇಲ್ಲಿನ ವಿದ್ಯಾರ್ಥಿಗಳು ಮಾಡಬೇಕು ಎಂದರು.
ಕಾರ್ಯಕ್ರಮದಲ್ಲಿ ಹಸಿರು ಪರಿಸರದ ಚಿಂತಕರಾದ ಶ್ರೀ ಚಕ್ರವಾಕ ಸುಭ್ರಹ್ಮಣ್ಯ , ವನಪಾಲಕರಾದ ರಮೇಶ್, ವಿದ್ಯಾಭಾರತಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಸುದೇಶ್ ಕಾಮತ್, ಕಾರ್ಯದರ್ಶಿಗಳಾದ ಶಾಂತಮೂರ್ತಿ, ನಿರ್ದೇಶಕರಾದ ನಾಗೇಶ ಎನ್,ಅರ್ ಉಪಸ್ಥಿತಿ ಇದ್ದರು
ಶಿಕ್ಷಕಿ ಸುಷ್ಮಾ ಸ್ವಾಗತಿಸಿ , ಶಿಕ್ಷಕಿ ಉಷಾ ನಿರೂಪಿಸಿ,ಶಿಕ್ಷಕಿ ಸುಧನ ವಂದಿಸಿದರು,
ನಿಮ್ಮ ಅಭಿಪ್ರಾಯವನ್ನು ಮುಕ್ತವಾಗಿ ಕಾಮೆಂಟ್ ಬಾಕ್ಸ್ನಲ್ಲಿ ತಿಳಿಸಿ
Deforestation,Hosanagara School, Hosanagara Guruji School
Chenagidhe nim channel