Ayodhya Mantrakshate : ಅಯೋದ್ಯೆಯಿಂದ ಬಂದ ರಾಮ ಮಂತ್ರಾಕ್ಷತೆ ಯನ್ನು ಏನು ಮಾಡಬೇಕು .?

Ayodhya Mantrakshate

Ayodhya Mantrakshate,Ayodhya Mandhir,shree Ram Mandhir, places to visit in Ayodhya, Ayodhya hills Ayodhya 2024

ಅಯೋಧ್ಯೆ : ಅಯೋಧ್ಯೆಯಲ್ಲಿ ಇನ್ನೇನು ಕೆಲವೆ ದಿನಗಳಲ್ಲಿ 500ವರ್ಷಗಳ  ತಪಸ್ಸಿನ ಫಲ  ಬಾಲರಾಮನ ಮೂರ್ತಿಯು ಪ್ರತಿಷ್ಠಾಪನೆ ಗೊಳ್ಳಲಿದೆ,

ನಮಗೆಲ್ಲ ತಿಳಿದಿರುವಂತೆ  ಆಯೋಧ್ಯೆಯ ರಾಮ (Ayodhya Rama)  ಮಂದಿರದ ಮಂತ್ರಾಕ್ಷತೆ( Mantrakshathe ) ದೇಶದ ಪ್ರತಿಯೊಂದು ಹಿಂದುಗಳ ಮನೆ ತಲುಪಿದೆ ಇನ್ನು ಬೆರಳಣಿಕೆಯಷ್ಟು ಮನೆ ತಲುಪಬೇಕಿದೆ.

ಈಗಾಗಲೆ ನಮ್ಮ‌ನಮ್ಮ ಮನೆಗೆ ನೀಡಲಾದ  ಮಂತ್ರಾಕ್ಷತೆಯನ್ನು ಏನು ಮಾಡಬೇಕೆನ್ನುವುದು ಹಲವರ ಚಿಂತೆಯಾಗಿದೆ.

ಸಂಘಪರಿವಾರದ ಮೂಲಗಳ ಪ್ರಕಾರ ಮಂತ್ರಾಕ್ಷತೆ ಸಿಕ್ಕಿದ ಬಳಿಕ ಅದನ್ನು ನಾವು  ಉಪಯೋಗ ಮಾಡುವಂತಿಲ್ಲ ಎಂಬು ಗಮನಾರ್ಹ.

ಜನವರಿ  22ನೇ ತಾರೀಖಿನವರೆಗೆ ತಮ್ಮ ತಮ್ಮ‌ಮನೆಯ ದೇವರ ಕೋಣೆಯಲ್ಲಿ ಅಥವಾ ದೇವರ ಸ್ಟ್ಯಾಂಡ್ ನಲ್ಲಿ ಇಡಬೇಕು ದಿನ ನಿತ್ಯ ದೇವರಿಗೆ ಪೂಜಾ ಮಾಡುವ ಸಮಯದಲ್ಲಿ ಆ ಮಂತ್ರಾಕ್ಷತೆಗೂ ಕೂಡ ಪೂಜೆ ಸಲ್ಲಿಸಬೇಕು ಆಗ ಅದರಲ್ಲಿ ದೈವಿಕ ಶಕ್ತಿ ಉಂಟಾಗುತ್ತದೆ ಎಂಬುದು ನಂಬಿಕೆ.

ಇದೇ ಜನವರಿ 22ನೇ ಸೋಮವಾರ ಮಧ್ಯಾಹ್ನ 12ಗಂಟೆ 29ನಿಮಿಷ 08ಸೆಕೆಂಡ್  ಮೇಷಲಗ್ನದಲ್ಲಿ ಅಯೋಧ್ಯೆಯ ರಾಮ ಮಂದಿರದಲ್ಲಿ ( Ayodhya Rama Mandhira ) ನಮ್ಮೆಲ್ಲರ ಆರಾಧ್ಯದೈವ ಶ್ರೀ ರಾಮಚಂದ್ರನ ಭವ್ಯ ಮೂರ್ತಿಯ ಪ್ರಾಣ ಪ್ರತಿಷ್ಠೆ ನಡೆಯಲಿದೆ ಆ ಬಳಿಕ  ಆ ಮಂತ್ರಾಕ್ಷತೆ ಗೆ ದಿವ್ಯ ಶಕ್ತಿ ಪ್ರಾಪ್ತವಾಗುತ್ತದೆ ಎನ್ನುವುದು ನಂಬಿಕೆ .

 

Ayodhya Mantrakshate

1) ಮಂತ್ರಾಕ್ಷತೆಯನ್ನು ಸಿಹಿ ಮಾಡಿ ಎಲ್ಲರೂ ಸೇವಿಸಬಹುದು.

2) ಊಟದ ಅಕ್ಕಿಯೊಡನೆ ಈ ಮಂತ್ರಾಕ್ಷತೆಯನ್ನು ಹಾಕಿ ಅನ್ನವಾಗಿ ಸೇವಿಸಬಹುದು.

3)ಮಂತ್ರಾಕ್ಷತೆಯನ್ನು ಮನೆಯವರೆಲ್ಲಾ ಹಂಚಿಕೊಂಡು ಶ್ರದ್ಧೆಯಿಂದ ತಲೆಗೆ ಹಾಕಿಕೊಳ್ಳಬಹುದು.

4) ದೇವರ ಕೋಣೆಯಲ್ಲಿ ಕೂಡ ಭದ್ರವಾಗಿ ಶ್ರದ್ಧೆಯಿಂದ. ನಿತ್ಯ ಪೂಜೆ  ಮಾಡಿ ದೇವರ ಅನುಗ್ರಹ ಪಡೆಯಬಹುದು.

5)  ನಮ್ಮ ಮನೆಯಲ್ಲಿ ಹಣ.ಚಿನ್ನ.ಬೆಳ್ಳಿ ಇಡುವ ಜಾಗದಲ್ಲಿ ಅಥವಾ ಕಪಾಟಿನಲ್ಲಿ ಭದ್ರವಾಗಿ ಇಡಬಹುದು.

6)  ನಮ್ಮ‌ಮನೆಯ ಎದುರಿನ‌ಬಾಗಿಲಿನ‌ ಮೇಲೆ ಶುಭ್ರವಸ್ತ್ರದಲ್ಲಿ ಸುತ್ತಿ ಅತ್ಯಂತ ಭದ್ರವಾಗಿ ಕಟ್ಟಿ ಇಟ್ಟರೆ ಮನೆಗೆ  ಒಳ್ಳೆಯದಾಗಬಹುದು.

Ayodhya Mantrakshate

ಹಾಗೆ ಮಂತ್ರಾಕ್ಷತೆ ( Ayodhya Mantrakshate ) ಜೊತೆಗೆ ರಾಮ‌ ಮಂದಿರದ ಒಂದು ಚಿತ್ರ ಹಾಗು ಅಯೋಧ್ಯೆಯ ರಾಮ ಮಂದಿರದ ಮಾಹಿತಿಯುಳ್ಳ ಒಂದು ಕರಪತ್ರವನ್ನು ನೀಡಲಾಗಿದೆ ಅದನ್ನು ಕೂಡ ಶ್ರದ್ಧೆಯಿಂದ ಮನೆಯ ಒಳಗೆ ಜೋಪಾನವಾಗಿ ಇಟ್ಟು ಕೊಂಡರೆ‌ಮನೆಗೆ ಒಳ್ಳೆಯಾದಗುತ್ತದೆ ಎನ್ನಲಾಗಿದೆ.

ಜೈ ಶ್ರೀರಾಮ್.ಜೈ ಜೈ ಶ್ರೀರಾಮ್.

Hosanagara News

Ayodhya Mantrakshate,Ayodhya Mandhir,shree Ram Mandhir, places to visit in Ayodhya, Ayodhya hills Ayodhya 2024

Leave a Reply

Your email address will not be published. Required fields are marked *