Table of Contents
ToggleHindu Mahasabha Hosanagara,Hosanagara Ganesha Utsava, 2024,Ganesha Chatruthi, Ganapathi Poster Kannada,Akhila Bharatha Hindu Mahasabha Hosanagara.
“Getting ready for the grand Ganesha festival..
Hosanagara Ganesha Utsava 2024
ಹೊಸನಗರ: ಅಖಿಲ ಭಾರತ ಹಿಂದೂ ಮಹಾಸಭಾ ಹೊಸನಗರ ಘಟಕದ 6ನೇ ವರ್ಷದ ಅದ್ದೂರಿ ಗಣೇಶೋತ್ಸವಕ್ಕೆ ಬರದ ಸಿದ್ಧತೆ ನಡೆಸಲಾಗುತ್ತಿದ್ದು ಸೆಪ್ಟೆಂಬರ್ 7ರಿಂದ ಸೆಪ್ಟೆಂಬರ್ 21ರ ಶನಿವಾರದ ವರೆಗಿನ 15 ದಿನಗಳ ಕಾಲ ಅಂಚೆ ಕಚೇರಿ ಸಮೀಪ ಇರುವ ವೀರಸಾವರ್ಕರ್ ಮಂಟಪದಲ್ಲಿ ಅತ್ಯಂತ ವಿಜ್ರಂಭಣೆಯಿಂದ ಆಚರಿಸಲಾಗುವುದು ಎಂದು ಸಮಿತಿ ಅಧ್ಯಕ್ಷರಾದ ಪ್ರಶಾಂತ್ ತಿಳಿಸಿದರು.
ಈ ಕುರಿತಾಗಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದವರು ಪ್ರತಿ ವರ್ಷದಂತೆ ಈ ವರ್ಷವೂ ಸಮಿತಿಯ ತೀರ್ಮಾನದಂತೆ ಅತ್ಯಂತ ವಿಜ್ರಂಭಣೆಯಿಂದ ಕಾರ್ಯಕ್ರಮವನ್ನು ಆಚರಿಸಲಾಗುತ್ತದೆ ಗಣೇಶ ಮೂರ್ತಿ ಪ್ರತಿಷ್ಠಾಪನಾ ದಿನದಿಂದ ವಿಸರ್ಜನಾ ದಿನದವರೆಗೆ ವಿಶೇಷವಾದಂತಹ ವಿವಿಧ ಸಾಂಸ್ಕೃತಿಕ ಧಾರ್ಮಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದ್ದು ಸೆಪ್ಟೆಂಬರ್ 7ರ ಬೆಳಿಗ್ಗೆ 9:00ಗೆ ಸರಿಯಾಗಿ ಮಾವಿನ ಕೊಪ್ಪದ ಗಂಗಾಧರೇಶ್ವರ ದೇವಸ್ಥಾನದಿಂದ ಬೃಹತ್ ಪ್ರತಿಷ್ಠಾಪನ ಶೋಭಾ ಯಾತ್ರೆ ಮೂಲಕವಾಗಿ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸಿ ಪೂಜಾ ಕಾರ್ಯಕ್ರಮವನ್ನು ನೆರವೇರಿಸಲಾಗುತ್ತದೆ 18-09-24 ಬುಧವಾರ ಗಣೋಮ ಹಾಗೂ ಸತ್ಯನಾರಾಯಣ ವೃತವನ್ನು ಮತ್ತು ಸಾರ್ವಜನಿಕ ಅನ್ನಸಂತಪಣೆಯನ್ನು ಹಮ್ಮಿಕೊಳ್ಳಲಾಗಿದೆ ರಾತ್ರಿ 8 ಗಂಟೆಗೆ ಕಲಾಚಿಗುರು ಕಲಾತಂಡದಿಂದ “ನಾಳಿಗೆ ಹೇಳ್ತೆ” ಎಂಬ ಹಾಸ್ಯಮಯ ನಗೆ ನಾಟಕವನ್ನು ಆಡಿ ತೋರಿಸಲಾಗುವುದು.
ಗಣೇಶೋತ್ಸವದ ಕೊನೆಯ ದಿನವಾದ 21-09-24 ಶನಿವಾರದ ಮಧ್ಯಾಹ್ನ 3 ಗಂಟೆಗೆ ಬೃಹತ್ ವಿಸರ್ಜನಾ ಶೋಭಾಯಾತ್ರೆ ನಡೆಯಲಿದ್ದು ಈ ಶೋಭಾ ಯಾತ್ರೆಯಲ್ಲಿ ರಾಜ್ಯದ 15ಕ್ಕೆ ಹೆಚ್ಚು ವಿವಿಧ ಸಾಂಸ್ಕೃತಿಕ ಕಲಾತಂಡಗಳ ಜೊತೆಗೂಡಿ ಗಣೇಶ ಮೂರ್ತಿಯನ್ನು ಗಣಪತಿ ದೇವಸ್ಥಾನದ ಪುಷ್ಕರಣಿಯಲ್ಲಿ ವಿಸರ್ಜಿಸಲಾಗುವುದು ಈ ಕಾರ್ಯಕ್ರಮದಲ್ಲಿ ಹತ್ತರಿಂದ ಹದಿನೈದು ಸಾವಿರಕ್ಕೂ ಅಧಿಕ ಭಕ್ತಾದಿಗಳು ಪಾಲ್ಗೊಳ್ಳುವ ನಿರೀಕ್ಷೆಯಿದ್ದು ಕಾರ್ಯಕ್ರಮವನ್ನು ಅತ್ಯಂತ ವಿಜ್ರಂಬಣೆಯಿಂದ ನಡೆಸಲಾಗುವುದು ಎಂದು ತಿಳಿಸಿದರು ಭಕ್ತಾದಿಗಳು 15 ದಿನಗಳ ಕಾಲದ ಎಲ್ಲಾ ಕಾರ್ಯಕ್ರಮಗಳಲ್ಲೂ ಪಾಲ್ಗೊಂಡು ಗಣೇಶೋತ್ಸವವನ್ನು ಯಶಸ್ವಿಗೊಳಿಸಿ ಕೊಡಬೇಕಾಗಿ ಕೋರಿದರು.
ಈ ಸಂದರ್ಭದಲ್ಲಿ ಸಮಿತಿಯ ಗೌರವ್ಯಾಧ್ಯಕ್ಷರಾದ ಸುಧೀಂದ್ರ ಪಂಡಿತ್ ಕಾರ್ಯದರ್ಶಿ ವಿನಯ್ ಹೆಚ್ ವಿ, ನಾಗರಾಜ ಆರ್, ಸುರೇಂದ್ರ ಕೋಟ್ಯಾನ್, ವಿಕ್ರಂ ಹೆಚ್ ಜಿ, ಸಂತೋಷ್, ನಾಗರಾಜ್, ಮುಂತಾದವರು ಉಪಸ್ಥಿತರಿದ್ದರು.
– ಮನು ಸುರೇಶ್