Savehaklu & Chakra : ತಾಲೂಕು ಆಡಳಿತ ಹಾಗು ಗ್ರಾಮ ಪಂಚಾಯತ್ ನೇತೃತ್ವದಲ್ಲಿ ಚಕ್ರಾ ಸಾವೇಹಕ್ಲು ಜಲಾಶಯಗಳಿಗೆ ಬಾಗಿನ

Savehaklu & Chakra

Savehaklu & Chakra, Hosanagara, Nagara, Tourist Place, Hosanagara Taluk, Malenadu, Savehaklu Overflow,2024.

                 “Taluk Administration and Gram Panchayat, visit the Chakra Savehaklu Reservoirs” 

                                                Savehaklu & Chakra

ಹೊಸನಗರ: ದಿನಾಂಕ 02 -08 -2024 ಶುಕ್ರವಾರ ಹೊಸನಗರ ತಾಲೂಕು ಆಡಳಿತ ಹಾಗು ಕರಿಮನೆ ಗ್ರಾಮ ಪಂಚಾಯ್ತ್ನಿ ನೇತೃತ್ವದಲ್ಲಿ ಚಕ್ರಾ ಸಾವೇಹಕ್ಲು ಜಲಾಶಯಗಳಿಗೆ ಬಾಗಿನ ಸಮರ್ಪಿಸಿದರು, ಈ ಸಂತೋಷದ ಸಂದರ್ಭದಲ್ಲಿ ಮಾಧ್ಯಮಗಳೊಂದಿಗೆ ಮಾತಾಡಿದ ತಾಲೂಕು ದಂಡಾಧಿಕಾರಿಗಳು ಆದ ರಶ್ಮಿ ಹಾಲೇಶ್ ರವರು ಮಾಧ್ಯಮದಲ್ಲಿ ಈ ಹಿಂದೆ ನತದೃಷ್ಟ ಸೋದರಿಯರು ನಮಗೆ ಯಾರು ಬಾಗಿನ ಅಪರ್ಪಿಸೋಲ್ಲ ಎಂದು ವರದಿ ಆಗಿತ್ತು ಇದು ನಮಗೆ ಬಾವನಾತ್ಮಕವಾಗಿ ನಮ್ಮನ್ನ ತಲುಪಿತು ಎಂದು ಹೇಳಿದರು.

 

Savehaklu & Chakra

                                                Savehaklu & Chakra

ಮೇಡಂ ಸಾವೆಹಕ್ಲು ಹಾಗು ಚಕ್ರ ಜಲಾಶಯಗಳಿಗೆ ಸ್ಥಳೀಯ ವಾಗಿ ಏಕೆ ಪಾಸ್ ನೀಡುವುದಿಲ್ಲ ..?

ಪಾಸ್ ಕೊಡುವ ವಿಚಾರವಾಗಿ ಕೆಪಿಸಿ ಅವರೊಂದಿಗೆ ಮಾತಾಡುತ್ತೇನೆ ಹಾಗೆ ಇಲ್ಲಿ ಹ್ಯಾಂಡ್ ಗ್ರಿಲ್ ನ ಅವಶ್ಯಕತೆ ಇದೆ, ಪ್ರವಾಸಿಗರು ಅತೀ ಹೆಚ್ಚು ಬರುವ ಕಾರಣ ಸಿಬ್ಬಂದಿಗಳಿಗೆ ನಿಯಂತ್ರಣ ಮಾಡುವುದು ಕಷ್ಟವಾಗಿದೆ ಹಾಗೆ ಪ್ರವಾಸೋದ್ಯಮಕ್ಕೆ ಒತ್ತುಕೊಡುವುದರ ಬಗ್ಗೆಯೂ ಸಹ ಕೆಪಿಸಿ ಅಧಿಕಾರಿಗಳೊಂದಿಗೆ ಮಾತನಾಡುತ್ತೇನೆ ಎಂದರು.

Savehaklu & Chakra

ಈ ಸಂದರ್ಭದಲ್ಲಿ ಈ ಭಾಗದ ಪೂರ್ವಜರನ್ನ ನಾವು ನೆನೆಯಬೇಕು –  ದೇವಮ್ಮ  (ಅಧ್ಯಕ್ಷರು ಕರಿಮನೆ ಗ್ರಾಮ ಪಂಚಾಯಿತಿ)

ಈ ಭಾಗದ ಪೂರ್ವಜರ ತ್ಯಾಗದ ಪ್ರತಿಫಲವೇ ಈ ಎರಡು ಡ್ಯಾಮ್ ಗಳಾಗಿವೆ. ಈ ಸ್ಥಳವನ್ನು ನೋಡಲು ಹಾಗು ಬಾಗಿನ ಸಮರ್ಪಿಸಲು ಅವಕಾಶ ಕಲ್ಪಿಸಿದ ಕೆಪಿಸಿ ಸಿಬ್ಬಂದಿ ವರ್ಗಕ್ಕೆ ಅಧ್ಯಕ್ಷರು ಕೃತಜ್ಞತೆ ಸಲ್ಲಿಸಿದರು.

Savehaklu & Chakra

ತಾಲೂಕು ದಂಡಾಧಿಕಾರುಗಳು ಈ ಜಲಾಶಯಗಳಿಗೆ ಬಾಗಿನ ಸಲ್ಲಿಸುತ್ತಿರುವುದು ಸಂತೋಷದ ವಿಷಯ: ಕೆಪಿಸಿ ಅಧಿಕಾರಿ ವಿನಾಯಕಕುಮಾರ ಕೆ.

ಈ ಎರಡು ಜಲಾಶಯಗಳಿಗೆ ತಾಲೂಕು ಆಡಳಿತ ವರ್ಗ ಹಾಗು ಗ್ರಾಮ ಪಂಚಾಯಿತಿ ನೇತೃತ್ವದಲ್ಲಿ ಬಾಗಿನ ಸಂಪರ್ಪಿಸಿದ್ದು ಸಂತೋಷದ ವಿಷಯವಾಗಿದೆ,

ಚಕ್ರ ಡ್ಯಾಮ್ ವೀಕ್ಷಣೆಯ ಪಾಸ್ ವಿಚಾರ ತುಂಬಾ ಗಂಭೀರವಾಗಿ ಬಂದಿದೆ, ಈ ವಿಚಾರ ಶಾಸಕರ ಗಮನಕ್ಕೂ ಕೂಡ ಬಂದಿದೆ ಈ ವಿಚಾರವಾಗಿ ನಮ್ಮ ಕೆಪಿಸಿ ಆಡಳಿತ ಮಂಡಳಿ ಸೂಕ್ತ ನಿರ್ಧಾರ ತೆಗೆದುಕೊಳ್ಳುತ್ತದೆ ಎಂದು ಹೇಳಿದರು.

 

ಈ ಸಂದರ್ಭದಲ್ಲಿ ಉಪಾಧ್ಯಕ್ಷರಾದ ರಮೇಶ್ ಹಲಸಿನ ಹಳ್ಳಿ,  ಮಹಿಳಾ ಒಕ್ಕೂಟದ ಅಧ್ಯಕ್ಷೆ ಸುಮಾ ಸುಬ್ರಮಣ್ಯ, ಕೆಪಿಸಿ ಅಧಿಕಾರಿಗಳಾದ ಓಂಕಾರಪ್ಪ,  ಹೊಂಬೇ  ಗೌಡ್ರು, ಬಿಇಓ ಕೃಷ್ಣಮೂರ್ತಿ, ರತ್ನಾಕರ ಗೌಡ, ಪಿಕಾರ್ಡ್  ಬ್ಯಾಂಕ್ ನಿರ್ದೇಶಕ ಸತೀಶ್ ಪಟೇಲ್, ಶಾಸಕ ಬೇಳೂರು ಆಪ್ತ ಸಹಾಯಕ ಸಣ್ಣಕ್ಕಿ ಮಂಜು,  ದೇವೇಂದ್ರ ನಾಯ್ಕ್, ಸ್ಥಳೀಯ ಮುಖಂಡರಾದ ಶ್ರೀ  ಗೋಪಾಲ್ ಹಾಗು ತಾಲೂಕು ಆಡಳಿತದ ಸಿಬ್ಬಂದಿ ವರ್ಗ ಮತ್ತು ಕರಿಮನೆ ಗ್ರಾಮಪಂಚಾಯಿತಿಯ ಸದಸ್ಯರು, ವಿವಿಧ ಅಧಿಕಾರಿಗಳು ಪ್ರಮುಖರು ಈ ಸಂದರ್ಭದಲ್ಲಿ ಹಾಜರಿದ್ದರು.

Savehaklu & Chakra, Hosanagara, Nagara, Tourist Place, Hosanagara Taluk, Malenadu, Savehaklu Overflow,2024.

ಇದನ್ನೂ ಓದಿ: Shivamogga Murder Case : ಆಧುನಿಕ ಪ್ರೀತಿಯ ಕೊಲೆ ಕಹಾನಿ

Hosanagara News
Hosanagara News

Leave a Reply

Your email address will not be published. Required fields are marked *