Shivamogga Murder Case : ಆಧುನಿಕ ಪ್ರೀತಿಯ ಕೊಲೆ ಕಹಾನಿ

Shivamogga Murder Case
Sowmya Murder Case, Shivamogga Murder, Hosanagara Murder Case, Shivamogga Love Case, Srujan Case, Sagara Murder Case. Anandapura Love Incident, Anandapura Love Incident, Man Kills His Lover In Shimoga.

                                                                           A modern love murder story

ಶಿವಮೊಗ್ಗ: ಆಧುನಿಕ ಪ್ರೀತಿಯ ಕೊಲೆ  ಕಹಾನಿ – ಸಾಗರದ ಯುವಕ  ತೀರ್ಥಹಳ್ಳಿಗೆ ಕೆಲಸಕ್ಕೆ ಹೋಗಿ ಚಿಕ್ಕಮಗಳೂರಿನ  ಯುವತಿಯನ್ನು ಪ್ರೀತಿಸಿ ಹೊಸನಗರದಲ್ಲಿ  ಕೊಲೆ ಮಾಡಿ ಮುಂಬಾಳು ಬಳಿ ಶವವನ್ನು ಹೂತಿ ವಿಕೃತಿ ಮೆರೆದಿದ್ದಾನೆ.  

Shivamogga Murder Case

ಏನಿದು ಘಟನೆ: ಕಳೆದ ಎರಡೂವರೆ ವರ್ಷಗಳಿಂದ  ಪ್ರೀತಿಸುತ್ತಿದ್ದ  ತನ್ನ ಗೆಳತಿಯ ಕತ್ತು ಹಿಸುಕಿ ಕೊಂದಿರುವ ದಾರುಣ ಘಟನೆ ಶಿವಮೊಗ್ಗ ಜಿಲ್ಲೆ ಹೊಸನಗರ ತಾಲೂಕಿನ ಹೆದ್ದಾರಿಪುರ ಗ್ರಾಮದಲ್ಲಿ ನಡೆದಿದೆ. ಮೃತ ಯುವತಿ  ಸೌಮ್ಯಾ (Soumya) ಚಿಕ್ಕಮಗಳೂರು ಜಿಲ್ಲೆಯ ಕೊಪ್ಪದವರಾಗಿದ್ದಾರೆ. ಶಿವಮೊಗ್ಗ ಜಿಲ್ಲೆಯ ಸಾಗರ ಮೂಲದ ಸೃಜನ್ (Srujan) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.

ಮದುವೆಯಾಗುವಂತೆ ಕೇಳಿದ್ದೆ ತಪ್ಪಾಯ್ತ..?

ಸೌಮ್ಯಾ ಸೃಜನ್‌ಗೆ (Soumya Srujan Love Case)  ಮದುವೆಯಾಗುವಂತೆ ಒತ್ತಡ ಹೇರುತ್ತಿದ್ದಳು, ಆದರೆ ಯುವಕನ ಮನೆಯಲ್ಲಿ ಹುಡುಗಿ ಬೇರೆ ಜಾತಿ ಎಂದು ಮದುವೆಗೆ ನಿರಾಕರಿಸಿದ್ದರು ಇದು ಅವರ ನಡುವೆ  ಕಿತ್ತಾಟಕ್ಕೆ  ಕಾರಣವಾಗಿತ್ತು. ಕೋಪದ ಭರದಲ್ಲಿ ಸೃಜನ್ ಆಕೆಯನ್ನು ಕೊಂದು (Murdered) ಶವವನ್ನು ಶಿವಮೊಗ್ಗ ಜಿಲ್ಲೆಯ ಆನಂದಪುರ ಹತ್ತಿರದ  ಮುಂಬಾಳು ಗ್ರಾಮದ ಬಳಿ ಹೂತು ಹಾಕಿದ್ದಾನೆ . ಸೌಮ್ಯಳ ಪೋಷಕರು ಆಕೆ ಕಾಣೆಯಾಗಿರುವ ಬಗ್ಗೆ ದೂರು ನೀಡಿದ ನಂತರ ಅಪರಾಧ ಬಯಲಾಗಿದೆ.

ಘಟನೆಯ ವಿವರ: 

ತೀರ್ಥಹಳ್ಳಿಯ ಫೈನಾನ್ಸ್ ಕಂಪನಿಯಲ್ಲಿ ಉದ್ಯೋಗಿಯಾಗಿದ್ದ ಸೃಜನ್ ಆಗಾಗ ಕೊಪ್ಪಕ್ಕೆ (koppa) ಬಂದು ಹಣ ಸಂಗ್ರಹಿಸುತ್ತಿದ್ದ. ಈ  ಸಮಯದಲ್ಲಿ,  ನರ್ಸಿಂಗ್ ಓದುತ್ತಿದ್ದ ಸೌಮ್ಯಳನ್ನು ಭೇಟಿಯಾಗಿದ್ದರು ಇವರಿಬ್ಬರ ಪರಿಚಯ ಪ್ರೀತಿಗೆ ತಿರುಗಿತ್ತು. ಆದರೆ, ಬೇರೆ ಬೇರೆ ಸಮುದಾಯಕ್ಕೆ ಸೇರಿದ ಕಾರಣ ಮನೆಯಲ್ಲಿ ಒಪ್ಪದ ಕಾರಣ 

ಸೃಜನ್ ಆಕೆಯನ್ನು ಮದುವೆಯಾಗಲು ನಿರಾಕರಿಸಿದ್ದ. ಜುಲೈ 2 ರಂದು ಸೌಮ್ಯಾ ತನ್ನ ಕುಟುಂಬಕ್ಕೆ ತಾನು ತೀರ್ಥಹಳ್ಳಿಗೆ ಹೋಗುವುದಾಗಿ ಹೇಳಿದ್ದಳು ಆದರೆ ಬದಲಿಗೆ ಸೃಜನ್ ಅವರನ್ನು ಭೇಟಿಯಾಗಿ ತನ್ನ ಮನೆಗೆ ಕರೆದುಕೊಂಡು ಹೋಗುವಂತೆ  ಒತ್ತಾಯಿಸಿದ್ದಳು ಎನ್ನಲಾಗಿದೆ.

Heddaripura Sowmya Murder Case

ಈ ವೇಳೆ ಸೃಜನ್  ನಮ್ಮ ಮನೆಗೆ ಈಗ ಬರಬೇಡ ನಿನ್ನ ಮನೆಗೆ ವಾಪಸ್   ಹೋಗು ಎಂದು ಒತ್ತಾಯಿಸಿದ್ದಾರೆ, ಆದರೆ ಆಕೆ ಒಪ್ಪದ ಕಾರಣ ಅವಳನ್ನ ಒಪ್ಪಿಸಿ ಸಮಾಧಾನ ಪಡಿಸಲು ತೀರ್ಥಹಳ್ಳಿಯಿಂದ ಹೊಸನಗರ ತಾಲೂಕಿನ ರಿಪ್ಪನ್ ಪೇಟೆ ಸಮೀಪ ಇರುವ ಹೆದ್ದಾರಿಪುರ (Heddaripura Murder Case) ಬಳಿ ಬಂದಿದ್ದಾರೆ ಇಲ್ಲಿ ಯುವಕ ಯುವತಿಯನ್ನ ಮನವೊಲಿಸಲು ಪ್ರಯತ್ನಿಸಿದ್ದಾನೆ ಆದರೆ ಆಕೆ ಒಪ್ಪದ ಕಾರಣ ಕೋಪಗೊಂಡ ಸೃಜನ್ ಸೌಮ್ಯಾಳ ಮೇಲೆ ಹಲ್ಲೆ ನಡೆಸಿ ಕತ್ತು ಹಿಸುಕಿ ಕೊಂದಿದ್ದು, ಪರಿಣಾಮ ಆಕೆ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಮಾಡಿದ ಕೃತ್ಯದಿಂದ ಬೆಚ್ಚಿಬಿದ್ದ ಸೃಜನ್ ಸೌಮ್ಯಳ ಶವವನ್ನು ಮುಂಬಾಳು (mumbalu) ಬಳಿ ಹೂತು ಹಾಕಿದ್ದಾನೆ. ಇದೇ ವೇಳೆ ಆತಂಕಗೊಂಡ ಪೋಷಕರು ಆಕೆ ಮನೆಗೆ ಬಾರದೆ ಕಾಣೆಯಾಗಿರುವ ಬಗ್ಗೆ ಕೊಪ್ಪ ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸರು ಸೃಜನ್‌ನನ್ನು ಸಾಗರದಲ್ಲಿ (Sagara)  ಪತ್ತೆ ಹಚ್ಚಿದರು, ಅಲ್ಲಿ ಅವನು ಅವಳನ್ನು ಕೊಂದು ಹೂತು ಹಾಕಿದ್ದಾಗಿ ಒಪ್ಪಿಕೊಂಡಿದ್ದಾನೆ.  ಸಹಾಯಕ ಆಯುಕ್ತರ ಸಮ್ಮುಖದಲ್ಲಿ ಆಕೆಯ ಶವವನ್ನು ಹೊರತೆಗೆಯಲು ಅಧಿಕಾರಿಗಳು ಸಿದ್ಧತೆ ನಡೆಸಿದ್ದಾರೆ.

Shivamogga Murder Case

ಹತ್ಯೆಯಾದ ಸೌಮ್ಯ ಸಂಬಂಧಿಕರು ಹೇಳೋದೇನು…?

ನರ್ಸಿಂಗ್ ಕಲಿಯುವುದಾಗಿ ಹೇಳಿ ಹೋಗಿದ್ದಳು, ಸೃಜನ್ ಅನ್ನು ಪ್ರೀತಿ ಮಾಡುವ ವಿಷಯ ನಮಗೆ ತಿಳಿದಿತ್ತು, ಸೃಜನ್ ಬಳಿ ಮಾತನಾಡುವುದಕ್ಕಾಗಿ ಅನೇಕ ಬಳಿ ತೆರಳಿದ್ದಳು ಕೊನೆ ಬಸ್ ಗೆ ಆಕೆ ಬರುತ್ತಿದ್ದಳು, ಆದರೆ ಅಂದು ಆಕೆ ಅನೇಕ ಹೊತ್ತಾದರೂ ಸಹ ಆಕೆ ಬಾರದ ಇದ್ದ ಕಾರಣ ನಾನು ಸೃಜನ್ಗೆ ಕಾಲ್ ಮಾಡಿ ನನ್ನ ತಂಗಿ ಬಂದಿದ್ದಾಳಾ ಎಂದು ಕೇಳಿದೆ ಸೃಜನ್ ಅದಕ್ಕೆ ಹೌದು – ಬಂದಿದ್ದಾಳೆ 3.45 ಬಸ್ ಗೆ ಕಳುಹಿಸಿದ್ದೇನೆ ಎಂದು ಹೇಳಿದ. ಇನ್ನು ತಂಗಿ ಬಾರದ ಕಾರಣ ನಾನು ಸೃಜನ್ ಗೆ ಮತ್ತೆ ಕಾಲ್ ಮಾಡಿ ಏನಾದರು ಜಗಳವಾಡಿ ಕೊಂಡ್ರ  ಎಂದು ಪ್ರಶ್ನಿಸಿದೆ ಅದಕ್ಕೆ ಸೃಜನ್ ಬ್ಲೂಟೂತ್ ಕೇಳ್ದಿದಲ್ಲೂ ಅದನ್ನ ಕೊಟ್ಟಿ ಕಳುಹಿಸಿದೆ ಆಮೇಲೆ ನನಗೆ ಗೊತ್ತಿಲ್ಲ  ಎಂದು ಹೇಳಿದ. 

ಸೌಮ್ಯ ಸಂಬಂಧಿ 1 

ಹುಡುಗಿಯ ಬಳಿ 1 ಲಕ್ಷ ಸಾಲ ಪಡೆದಿದ್ದ..?

Sowmya Murder
ಮೃತಳ ಚಿಕ್ಕಪ್ಪ

ಸೃಜನ್ ಆಗ್ಗಾಗೆ ಫೈನಾನ್ಸ್ ವಿಚಾರವಾಗಿ  ಕೊಪ್ಪಕ್ಕೆ  ಬಂದಾಗ ಸಿಗುತ್ತಿದ್ದ ನಾನು ಆಕೆಗೆ ಮೋಸ ಮಾಡುವುದಿಲ್ಲ ಮದುವೆಯಾಗುತ್ತೇನೆ ಈಗಾಗಲೇ ಆಕೆಯ ಬಳಿ ಸಂಘದಲ್ಲಿ ಲೋನ್ ಮಾಡಿಸಿ 1 ಲಕ್ಷ ಹಣ ಪಡೆದು ನನ್ನ ಕಷ್ಟಕ್ಕೆ ತಗೊಂಡಿದೀನಿ, ಆಕೆಯನ್ನ ಮದುವೆಯಾಗೋದು ಗ್ಯಾರಂಟಿ ಎಂದು ಹೇಳಿದ್ದ, ಎರಡು ತಿಂಗಳ ಈಚೆ ಮತ್ತೆ ಬಂದಾಗ ಇನ್ನ 6 ತಿಂಗಳಲ್ಲಿ ಮದುವೆಯಾಗುತ್ತೇನೆ ಎಂದು ನನ್ನ ಬಳಿ ಹೇಳಿದ್ದ.

ಸೌಮ್ಯ ಸಂಬಂಧಿ 2 

ಕೊಲೆಗೆ ಜಾತಿ ಕಾರಣವಾಯಿತೇ…?

Shivamogga Murder Case
Shivamogga Murder

ಸೃಜನ್ ತಾಯಿ  ಮದುವೆಗೆ ಒಪ್ಪಿರಲಿಲ್ಲಸೌಮ್ಯರಿಗೆ ನೀನು ಕೆಳಜಾತಿಯವಳು ನನ್ನ ಮನೆಗೆ ಬರಬೇಡ ಎಂದು ಹೇಳಿದ್ದರು ಎಂದು ಸೌಮ್ಯ ಸಂಬಂಧಿಕರು ಮಾಧ್ಯಮದ ಮುಂದೆ ಹೇಳಿದ್ದಾರೆ.

ಮದುವೆಯ ವಿಚಾರವಾಗಿ ಆತ್ಮಹತ್ಯೆಗೆ ಯತ್ನಿಸಿದ್ದರು 

ಹೌದು ಸೌಮ್ಯ ಮದುವೆಯ ವಿಚಾರವಾಗಿ ಆತ್ಮಹತ್ಯೆಗೆ ಪ್ರಯತ್ನ್ನಿಸಿದ್ದ್ದರು ನಂತರದಲ್ಲಿ ಮಾತುಕತೆಯ ಮೂಲಕ ಬಗೆಹರಿದಿತ್ತು ಎಂದು ಸಂಬಂಧಿಕರು ಮಾಹಿತಿ ತಿಳಿಸಿದ್ದಾರೆ.

           ಕೊನೆಯದಾಗಿ ಈ ಕೊಲೆಯು ಸಮಾಜದ ಕ್ರೂರ ವ್ಯವಸ್ಥೆಯ ಕನ್ನಡಿಯಾಗಿದೆ. 

 
Hosanagara News
Hosanagara News

Sowmya Murder Case, Shivamogga Murder, Hosanagara Murder Case, Shivamogga Love Case, Srujan Case, Sagara Murder Case. Anandapura Love Incident, Anandapura Love Incident, Man Kills His Lover In Shimoga.

Leave a Reply

Your email address will not be published. Required fields are marked *