Voting awareness, Election, teddy, Viral news,Hosanagara, Election News.
A different effort from Teddy Vibes instagram team for voting awareness
ಮತದಾನ ನಮ್ಮ ಹಕ್ಕು..ಮತದಾನ ಜಾಗೃತಿಗಾಗಿ ಟೆಡ್ಡಿ ವೈಬ್ಸ್ instagram ತಂಡದಿಂದ ವಿಭಿನ್ನ ಪ್ರಯತ್ನ.ಪಟ್ಟಣದೆಲ್ಲಡೆ ಸಂಚರಿಸಿ ಮತದಾರರಲ್ಲಿ ಕಡ್ಡಾಯ ಮತದಾನ ಮಾಡುವಂತೆ ಜಾಗೃತಿ ಮೂಡಿಸುತ್ತಿರುವ ತಂಡ.
ಹೊಸನಗರ : ದೇಶದೆಲ್ಲೆಡೆ ಮತದಾನ ಪ್ರಮಾಣ ಕಡಿಮೆಯಾಗುತ್ತಿರುವ ಹಿನ್ನಲೆ, ಹೊಸನಗರ ಪಟ್ಟಣದ Teddy Vibeses ಯುವಕರ ತಂಡ ಪಟ್ಟಣದೆಲ್ಲೆಡೆ ಮತದಾರರಲ್ಲಿ ಕಡ್ಡಾಯ ಮತದಾನದ ಜಾಗೃತಿಗಾಗಿ ಟೆಡ್ಡಿ ಬೇರ್ ಧರಿಸಿ ಮತಜಾಗೃತಿಯನ್ನ ಮೂಡಿಸಿದರು.
ಪಟ್ಟಣದ ಪ್ರಮುಖ ಬೀದಿಗಳು ಕಾಲೇಜು, ಸಂತೆ ಮಾರುಕಟ್ಟೆ ಹೀಗೆ ಪಟ್ಟಣದೆಲ್ಲೆಡೆ ಸಂಚರಿಸಿ ಮತದಾನವನ್ನ ಏಕೆ ಮಾಡಬೇಕು..? ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾರರಿಗೆ ಇರುವ ಹಕ್ಕುಗಳೇನು..? ಕಡಿಮೆ ಮತದಾನ ಪ್ರಮಾಣ ದಿಂದ ಪ್ರಜಾಪ್ರಭುತ್ವ ವ್ಯವಸ್ಥೆ ಮೇಲೆ ಆಗುವಂತಹ ಪರಿಣಾಮಗಳೇನು ಎಂಬುದರ ಬಗ್ಗೆ ಅರಿವನ್ನ ಮೂಡಿಸುವ ವಿಶೇಷ ಪ್ರಯತ್ನವನ್ನ teddy vibes ಯುವ ಸಮೂಹ ಪಟ್ಟಣದೆಲ್ಲೆಡೆ ಅತ್ಯಂತ ಯಶಸ್ವಿಯಾಗಿ ಜಾಗೃತಿಯನ್ನ ಮೂಡಿಸಿದರು.
Voting awareness, Election, teddy, Viral news, Hosanagara, Election News.