Election Boycott,Hosanagara,Modhi,Byr,Raghavendra,2024
Not election boycott… Struggle for infrastructure..
ಹೊಸನಗರ : ತಾಲೂಕಿನ ವಾರಂಬಳ್ಳಿ ಗ್ರಾಮಸ್ಥರು ಈ ಬಾರಿ ಲೋಕಸಭಾ ಚುನಾವಣೆಯನ್ನು ಬಹಿಷ್ಕರಿಸಲು ಮುಂದಾಗಿದ್ದಾರೆ ಆದರೇ ಇದನ್ನವರು ಚುನಾವಣಾ ಬಹಿಷ್ಕಾರ ಎನ್ನದೆ ಮೂಲಸೌಕರ್ಯಕ್ಕಾಗಿ ಹೋರಾಟ ಎನ್ನುತ್ತಿದ್ದಾರೆ.
ಹೌದು ಹೊಸನಗರ ಪಟ್ಟಣದಿಂದ ಕೆಲವೇ ಕಿಲೋಮೀಟರ್ಗಳ ದೂರದಲ್ಲಿರುವ ಈ ವಾರಂಬಳ್ಳಿ ಗ್ರಾಮದಲ್ಲಿ ನೆಟ್ವರ್ಕ್ ಸಮಸ್ಯೆ (Network Issue) ಸರಿಪಡಿಸುವಂತೆ ಕಳೆದ ಏಳು ವರ್ಷಗಳಿಂದ ಹೋರಾಟವನ್ನು ಮಾಡುತ್ತಾ ಬಂದಿದ್ದಾರೆ 10 ಬಾರಿ ಪ್ರಧಾನಿ ನರೇಂದ್ರ ಮೋದಿಯವರಿಗೆ (Narendra Modhi ) ಪತ್ರವನ್ನು ಸಹ ಬರೆದರು ಇಲ್ಲಿನ ನೆಟ್ವರ್ಕ್ ಸಮಸ್ಯೆ ಹಾಗೆ ಉಳಿದಿದೆ.
ಸರಿಸುಮಾರು ವಾರಂಬಳ್ಳಿ ಗ್ರಾಮದ ಮೂರು ಕಿಲೋಮೀಟರ್ ವ್ಯಾಪ್ತಿಯಲ್ಲಿ 1000ಕ್ಕೂ ಅಧಿಕ ಮಂದಿ ವಾಸವಿದ್ದು 200 ರಿಂದ 250 ಮನೆಗಳಿವೆ.
ಮೊಬೈಲ್ ನೆಟ್ವರ್ಕ್ ಎಂಬುದು ಇಲ್ಲಿ ಮರೀಚಿಕೆ Covid ಸಂದರ್ಭದಲ್ಲಿ ಇಲ್ಲಿನ ಭಾಗದ ವಿದ್ಯಾರ್ಥಿಗಳಿಗೆ ವರ್ಕ್ ಫ್ರಮ್ ಹೋಮ್ ಕೆಲಸ ನಿರ್ವಹಿಸಲು ಬಂದ ಅಲ್ಲಿನ ಖಾಸಗಿ ಕಂಪನಿಯ ನೌಕರರಿಗೆ ಆದಂತಹ ಕಷ್ಟ ಅಷ್ಟಿಷ್ಟಲ್ಲ ಈಗಲೂ ಸಹ ಅಲ್ಲಿ ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಕರೆಗಳನ್ನು ಮಾಡಲು ಸಾಧ್ಯವಾಗುತ್ತಿಲ್ಲ. ಆನ್ಲೈನ್ ವ್ಯವಹಾರ. ಮೊಬೈಲ್ ಬ್ಯಾಂಕಿಂಗ್. ಇವೆಲ್ಲವೂ ಹೆಸರಿಗೆ ಅಷ್ಟೇ.
ಇಡಿ ಗ್ರಾಮ ವ್ಯಾಪ್ತಿಯಲ್ಲಿ ಎಲ್ಲಿಯೂ ಒಂದೆರಡು ಕಡೆ ಅಷ್ಟೇ ಸ್ವಲ್ಪ ಪ್ರಮಾಣದಲ್ಲಿ ನೆಟ್ವರ್ಕ್ ಸಿಗುತ್ತದೆಯಾದರೂ ಅದು ಉಪಯೋಗಕ್ಕೆ ಬರುತ್ತಿಲ್ಲ ಹೋರಾಟ ನಡೆದಾಗೆಲ್ಲ ಅಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿ ಶೀಘ್ರ ಸಮಸ್ಯೆ ಬಗೆಹರಿಸಿದಾಗೆ ಆಶ್ವಾಸನೆ ಕೊಟ್ಟು ಹೋಗುತ್ತಾರೆ.
ಇಲ್ಲಿಯವರೆಗೆ ಪ್ರಧಾನಿ ಅವರಿಗೆ ಪತ್ರ ಶಾಸಕರು ಸಂಸದರ ಭೇಟಿ ಪ್ರತಿಭಟನೆ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳ ಜೊತೆ ಚರ್ಚೆ ಎಲ್ಲವನ್ನ ಗ್ರಾಮಸ್ಥರು ಏಳು ವರ್ಷಗಳಲ್ಲಿ ನಿರಂತರವಾಗಿ ಮಾಡಿದ್ದಾರೆ ಅದ್ಯಾವುದು ಪ್ರಯೋಜನಕ್ಕೆ ಬಾರದ ಹಿನ್ನೆಲೆ ಈ ಬಾರಿ ಕೇವಲ ಮತ ಚಲಾವಣೆಗೆ ಅಷ್ಟೇ ನಾವು ನಮ್ಮ ಸಮಸ್ಯೆಗಳಿಗೆ ಸ್ಪಂದನೆ ಸಿಗದ ಹಿನ್ನೆಲೆ ಚುನಾವಣಾ ಬಹಿಷ್ಕಾರದ ಮೂಲಕ ಮೂಲಭೂತ ಸೌಕರ್ಯಕ್ಕಾಗಿ ಹೋರಾಟವನ್ನು ಗ್ರಾಮಸ್ಥರು ಮಾಡಲಿದ್ದಾರೆ..
ತಾಲೂಕು ದಂಡಾಧಿಕಾರಿಗಳು ಹೊಸನಗರ
ಚುನಾವಣೆ ಬಹಿಷ್ಕರಿಸುವ ಉದ್ದೇಶ ನಮ್ಮದಲ್ಲ. ಪ್ರತಿ ಬಾರಿಯೂ ಬಹಳಷ್ಟು ಅಧಿಕಾರಿಗಳು ಜನಪ್ರತಿನಿಧಿಗಳು ಈ ಬಗ್ಗೆ ಆಶ್ವಾಸನೆ ನೀಡಿದ್ದು ಅದು ಕೇವಲ ಆಶ್ವಾಸನೆಯಾಗಿ ಉಳಿದಿದೆ ಈ ಚುನಾವಣೆ ಒಳಗಾಗಿ ಕಾಮಗಾರಿ ಆರಂಭವಾಗದಿದ್ದರು ಅದಕ್ಕೆ ಬೇಕಾದಂತಹ ಸಲಕರಣೆಗಳನ್ನಾದರೂ ಗ್ರಾಮದಲ್ಲಿ ತಂದು ಹಾಕಲಿ..
ವರದಿ : ಮನು ಸುರೇಶ್
Election Boycott,Hosanagara,Modhi,Byr,Raghavendra,2024.