Ayodhya Karasevak,ayodhya ram mandir ayodhya ram mandir opening date ayodhya ram mandir photo ayodhya ram mandir construction ayodhya ram mandir temple ayodhya ram mandir news ayodhya ram mandir history ayodhya ram mandir current status.
ಹೊಸನಗರ: 1992ರಲ್ಲೆ ರಾಮ ಮಂದಿರಕ್ಕಾಗಿ ನಮ್ಮ ಪ್ರಾಣ ತ್ಯಾಗಮಾಡಲು ನಾವು ಅಂದೇ ನಿರ್ಧರಿಸಿದ್ದೇವು ಎಂದು ಕರಸೇವಕರಾದ ಆಯನೂರಿನ ವಾಚ್ ಸುರೇಶ್ ಹೇಳಿದರು
ಪಟ್ಟಣದ ಮಾವಿನಕೊಪ್ಪದ ಗಂಗಾಧರೇಶ್ವರದ ದೇವಸ್ಥಾನದಲ್ಲಿ ಸಂಘಪರಿವಾರ ಹಾಗು ರಾಮಭಕ್ತರು ಶ್ರೀರಾಮ ಜನ್ಮಭೂಮಿ ಅಂದೋಲನ ಸಮಿತಿ ಅಯೋಜಿಸಿದ ರಾಮತಾರಕ ಹೋಮ ಮತ್ತು ಕರಸೇವಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಸಂಮಾನ ಸ್ವೀಕರಿಸಿ ಮಾತನಾಡಿದರು.
1992 ರ ಮೊದಲ ಕರಸೇವೆಗೆ ಪರಿವಾರ ಕರೆಕೊಟ್ಟಾಗ ನಾವೆಲ್ಲರು ನಮ್ಮ ಸಂಸಾರವನ್ನು ಗಮನಿಸದೇ ದೇಶದ ಅಸ್ಮಿತೆ ಉಳಿವಿಗಾಗಿ ಕರಸೇವೆಗೆ ಹೊರಟೆವು ಅದೇಷ್ಟೋ ಜನ ನಮ್ಮನ್ನು ವಿಚಲಿತ ಮಾಡಲು ಪ್ರಯತ್ನ ಪಟ್ಟರು ಅ ಎಲ್ಲಾ ಅಡೆತಡೆಗಳನ್ನು ಮೀರಿ ನಾವು ಹೊರೆಟೇವು ಇನ್ನೇನು ಅಯೋಧ್ಯ ತಲುಪುವಷ್ಟರಲ್ಲಿ ನಮ್ಮನ್ನು ಕರಸೇವಕರ ವೇಷದಿಂದ ಪೋಲಿಸ್ ಇಲಾಖೆಯವರು ಬಂಧಿಸಿ ಒಂದು ನಿರ್ಜನ ಪ್ರದೇಶದಲ್ಲಿ ಕೂಡಿಹಾಕಿದ್ದರು ಒಂದೇ ಒಂದು ಹನಿ ನೀರು ಕೂಡ ನಮಗೆ ನೀಡುತ್ತಿರಲಿಲ್ಲ ಕೇಳಿದರೆ ಪೆಟ್ಟುಗಳ ಸುರಿಮಳೆ ಬೀಳಿತಿತ್ತು ಅಲ್ಲದೆ ನಿಮ್ಮನ್ನು ನಿಂತ ಜಾಗದಲ್ಲೆ ಗುಂಡಿಕ್ಕಿ ಕೊಲ್ಲುವ ಆದೇಶ ಇದೆ ಎಂದು ಹೇಳಿ ನಮ್ಮನ್ನು ಹೆದರಿಸುತ್ತಿದ್ದರು ಈ ಎಲ್ಲಾ ಅಡೆತೆಗಳನ್ನ ಮೀರಿ ಅಲ್ಲಿನ ಒಂದಿಷ್ಟು ಜನರ ಸಹಕಾರದಿಂದ ಅಲ್ಲಿಂದ ವಾಪಸ್ಸು ಆದೇವು ತದ ನಂತರ ಬಂದ ಕರಸೇವೆಗೆ ಮತ್ತೆ ಸಿದ್ದ ರಾಗಿ ಅಯೋದ್ಯೆಯನ್ನು ತಲುಪವಲ್ಲಿ ಯಶಸ್ವಿಯಾದೇವು ನೋಡು ನೋಡುತಿದ್ದಂತೆ ಮಹಿಳೆಯರು ಪುರುಷರು ಅಲ್ಲಿದ್ದ ಗುಂಬಾಸ್ ಅನ್ನು ಕ್ಷಣಮಾತ್ರದಲ್ಲಿ ನೆಲಕುರುಳಿಸಿ ಬಿಟ್ಟರು ಅಂದಿನ ದೃಶ್ಯದಆ ಘಳಿಗೆ ಇಂದಿಗು ನಮಗೆ ಅವಿಸ್ಮರಣೀಯ ಎಂದರು.
ನಾವು ಬದಕಿದ್ದೆ ಪವಾಡ – Ayodhya Karasevak
ಕರಸೇವೆ ಮುಗಿಸಿ ನಾವು ವಾಪ್ಪಸ್ಸು ಆಗುತಿದ್ದಂತೆ ಒಂದಿಷ್ಟು ರೈಲ್ವೆ ಸ್ಟೇಷನ್ ನಲ್ಲಿ ಮುಸಲ್ಮಾನರು ಕಲ್ಲಿನಿಂದ ನಮ್ಮ ಮೇಲೆ ದಾಳಿಮಾಡುತಿದ್ದರು ನಮ್ಮಕಣ್ಣ ಎದುರೆ ಎಷ್ಟೋ ಜನರ ತಲೆಗೆ ಕಲ್ಲು ಬಿದ್ದು ರಕ್ತ ನೀರಿನಂತೆ ಹರಿಯುತ್ತಿತ್ತು ನಾವೆಲ್ಲ ಸಿಕ್ಕ ಜಾಗದಲ್ಲಿ ತಪ್ಪಸಿಕೊಂಡು ಬಂದೆವು ಕರಸೇವೆ ಮುಗಿಸಿಕೊಂಡು ಬರುತ್ತಿರುವ ಕರಸೇವಕರಮೇಲೆ ಕಲ್ಲುತೂರಾಟ ಆಗುತ್ತಿದೆ ಎಂಬ ವಿಷಯ ಈ ವಿಷಯ ತಿಳಿಯುತ್ತಿದ್ದಂತೆ ಅಂದಿನ ಶಿವಸೇನ ಸೈನಿಕರು ನಮ್ಮ ರಕ್ಷಣೆಗಾಗಿ ರೈಲ್ವೆ ಸ್ಟೇಷನ್ ನಲ್ಲಿ ಸಿದ್ದರಾಗುತಿದ್ದರು ಕೆಲವರಂತು ನಮ್ಮ ಕಾಲಿಗೆ ಬಿದ್ದು ನಮಸ್ಕರಿಸುತ್ತಿದ್ದರು .
ನಮ್ಮ ಈ ಕರಸೇವೆಗೆ ನನಗೆ ಬೆಂಬಲವಾಗಿ ನಿಂತವಳು ನನ್ನ ಧರ್ಮ ಪತ್ನಿ ಎಷ್ಟೋ ಜನ ಅವರಿಗೆ ಬಂದು ಹೆದರಿಸಿದರು ಅವರು ಅದ್ಯಾವುದಕ್ಕು ತಲೆ ಕೆಡಸಿಕೊಳ್ಳದೆ ನನ್ನನ್ನು ಕರಸೇವೆಗೆ ಕಳುಹಿಸಿ ಕೊಟ್ಟಿದ್ದಾರೆ ಎಂದು ತಮ್ಮ ಧರ್ಮಪತ್ನಿಯ ತ್ಯಾಗವನ್ನು ನೆನಪಿಸಿಕೊಂಡರು.
ಊರಿಗೆ ಬಂದ ಮೇಲು ನಮಗೆ ನೆಮ್ಮದಿ ಇರತ್ತಿರಲಿಲ್ಲ
ಕರಸೇವೆ ಮುಗಿಸಿ ಊರಿಗೆ ವಾಪಸ್ಸು ಬಂದ ಮೇಲೂ ನಮಗೆ ಇಲ್ಲಿನ ಅಧಿಕಾಗಳಿಂದ ಮಾನಸಿಕ ಹಿಂಸೆ ಮಾಡುತಿದ್ದರು ನಮ್ಮನ್ನು ಜೈಲಿಗೆ ಹಾಕಲು ನಮ್ಮ ಮನೆಯ ಒಳಗೆ ಬೂಟುಕಾಲಿನಂದ ಒಳಗೆ ಬಂದು ದೇವರಕೋಣೆಗು ನುಗ್ಗಿ ನಮ್ಮನ್ನು ಹುಡುಕುತಿದ್ದರು ಅಂದು ಬಡತನದ ಕಾಲ ದುಡಿದರೆ ಮಾತ್ರ ಒಂದೊತ್ತು ಊಟ ಅದಕ್ಕು ಕೂಡ ಬಿಡುತ್ತಿರಲಿಲ್ಲ ಆ ಸಂದರ್ಭದಲ್ಲಿ ನಮ್ಮ ರಕ್ಷಣೆಗೆ ಬಂದಿದ್ದು ಶಿವಮೊಗ್ಗದ ಮಾಜಿ ಶಾಸಕರಾದ ಕೆ.ಎಸ್ ಈಶ್ವರಪ್ಪ ಎಂದು ಈ ಸಂದರ್ಭದಲ್ಲಿ ಹೇಳಿದರು.
ಅಂದಿನ ತಪ್ಪಸ್ಸಿನ ಫಲ ಇಂದು ನೋಡುತಿದ್ದೇವೆ
ಅಂದು ಲಕ್ಷಾಂತರ ಜನರ ತ್ಯಾಗ .ಬಲಿದಾನ ಹಾಗು ತಪ್ಪಸ್ಸಿನ ಫಲ ಇಂದು ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣವಾಗಿ ರಾಮಲಲ್ಲನ ಪ್ರಾಣ ಪ್ರತಿಷ್ಠೆ ಆಗುತ್ತಿದೆ ಕನಸೋ ನನಸೋ ಒಂದು ಅರ್ಥವಾಗುತ್ತಿಲ್ಲ ಎಂದು ಘದ್ಗತಿತವಾದರು. ಈ ಸಂದರ್ಭದಲ್ಲಿ ಕರಸೇವೆಗೆ ಹೋದ ಹೊಸನಗರ ತಾಲ್ಲೊಕಿನ ಕರಸೇವಕರಾದ *ಗಣಪತಿ ಬೆಳಗೂಡು ಅನಂತ ಮೂರ್ತಿ.ಗುಬ್ಬಿಗ ಬಸಪ್ಪ ಕೇಶವಪುರ ಬಾಬು ಆಚಾರ್ ಜಯನಗರ. ಕೆ.ಎನ್ ಕೃಷ್ಣಮೂರ್ತಿ ಕುಂಬತ್ತಿ. ಸಂಜೀವ ಕುಲಾಲ ಕುಂಬತ್ತಿ ಗುರುಮೂರ್ತಿ ಹನಿಯಾ ವಿಷ್ಣುಮೂರ್ತಿ ನಗರ ನಿವೃತ್ತ ಸೈನಿಕರು ರಾಮಮೂರ್ತಿ ಪುರಪ್ಪಮನೆ. ಇವರಿಗೆ ಹೊಸನಗರದ ಹಿರಿಯ ಸ್ವಯಂ ಸೇವಕರಾದ ಶ್ರೀಯುತ ಕನಕರಾಜ್ ಅವರಿಂದ ಸನ್ಮಾನಿಸಲಾಯಿತು. ಈ ಸಂಧರ್ಭದಲ್ಲಿ ಸಂಘಪರಿವಾರದ ಹಿರಿಯರಾದ ರಮೇಶ್ ಹಲಸಿನಕಟ್ಟೆ .ಹಿಂದು ಮಹಾಸಭದ ಅಧ್ಯಕ್ಷರಾದ ಎಂ.ಎನ್ ರಾಜು. ವಿಶ್ವಹಿಂದು ಪರೀಷತ್ ನ ಸುದೀಂದ್ರ ಪಂಡಿತ್.ಪರಿವಾರದ ಪ್ರಮುಖರಾದ ಪ್ರಶಾಂತ್ ಕಾಮತ್ , ಬಿ.ಎಸ್ .ಸುರೇಶ್. ಮಂಜುನಾಥ್ .ಅರುಣ್ .ಗೋಪಾಲ, ರಾಘುಮರಗೋಳಿ.ರಘು.ಗೌತಮ್ . ಶಿವು ಕೋಣೆಮನೆ.ಸುರೇಂದ್ರಕೋಟ್ಯಾನ್. ಹಾಗು ಗಂಗಾಧರೇಶ್ವರ ದೇವಸ್ಥಾನ ದ ಅಧ್ಯಕ್ಷರು ಮತ್ತು ಸದಸ್ಯರು ಹಾಗು ರಾಮಭಕ್ತರು ಉಪಸ್ಥಿತಿ ಇದ್ದರು.
Ayodhya Karasevak,ayodhya ram mandir ayodhya ram mandir opening date ayodhya ram mandir photo ayodhya ram mandir construction ayodhya ram mandir temple ayodhya ram mandir news ayodhya ram mandir history ayodhya ram mandir current status.